Advertisement

ಹಾಲಿ ಚಾಂಪಿಯನ್‌ ಸಿಮೋನಾ ಹಾಲೆಪ್‌ ವಿಂಬಲ್ಡನ್‌ಗೆ ಗೈರು

11:59 PM Jun 25, 2021 | Team Udayavani |

ಲಂಡನ್‌ : ಹಾಲಿ ಚಾಂಪಿಯನ್‌ ಸಿಮೋನಾ ಹಾಲೆಪ್‌ 2021ರ ವಿಂಬಲ್ಡನ್‌ ಪಂದ್ಯಾವಳಿಯಿಂದ ದೂರ ಸರಿಯಲಿದ್ದಾರೆ. ಮೀನಖಂಡದ ಸ್ನಾಯು ಸೆಳೆತದಿಂದ ಅವರಿನ್ನೂ ಗುಣಮುಖರಾಗದಿರುವುದೇ ಇದಕ್ಕೆ ಕಾರಣ.

Advertisement

ಮೇ ತಿಂಗಳಲ್ಲಿ ನಡೆದ ಇಟಾಲಿಯನ್‌ ಓಪನ್‌ ಕೂಟದ, ಆ್ಯಂಜೆಲಿಕ್‌ ಕೆರ್ಬರ್‌ ಎದುರಿನ ದ್ವಿತೀಯ ಸುತ್ತಿನ ಪಂದ್ಯದ ವೇಳೆ ಹಾಲೆಪ್‌ ಸ್ನಾಯು ಸೆಳೆತಕ್ಕೆ ಸಿಲುಕಿದ್ದರು. ಬಳಿಕ ಫ್ರೆಂಚ್‌ ಓಪನ್‌ ಪಂದ್ಯಾವಳಿಯಿಂದಲೂ ದೂರ ಸರಿದರು.

“ವಿಂಬಲ್ಡನ್‌ನಿಂದ ಹಿಂದೆ ಸರಿಯಬೇಕಾದ ಸುದ್ದಿಯನ್ನು ತೀವ್ರ ನೋವಿನಿಂದ ಹೇಳುತ್ತಿದ್ದೇನೆ. ನಾನಿನ್ನೂ ಸ್ನಾಯು ಸೆಳೆತದಿಂದ ಚೇತರಿಸಿಕೊಂಡಿಲ್ಲ’ ಎಂದಿದ್ದಾರೆ 2019ರ ಚಾಂಪಿಯನ್‌ ಸಿಮೋನಾ ಹಾಲೆಪ್‌. ಅಂದು ಸೆರೆನಾ ವಿಲಿಯಮ್ಸ್‌ಗೆ ಸೋಲುಣಿಸುವ ಮೂಲಕ ಹಾಲೆಪ್‌ ಮೊದಲ ಸಲ ವಿಂಬಲ್ಡನ್‌ ಪ್ರಶಸ್ತಿಯನ್ನೆತ್ತಿದ್ದರು. ಕೋವಿಡ್‌ ಕಾರಣದಿಂದ 2020ರ ವಿಂಬಲ್ಡನ್‌ ನಡೆದಿರಲಿಲ್ಲ. ಈ ಬಾರಿ ಜೂ. 28ರಿಂದ ಜು. 11ರ ತನಕ ನಡೆಯಲಿದೆ.

ವಿಶ್ವದ ನಂ. 2 ಆಟಗಾರ್ತಿ ನವೋಮಿ ಒಸಾಕಾ ಕೂಡ ವಿಂಬಲ್ಡನ್‌ನಲ್ಲಿ ಆಡುತ್ತಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next