Advertisement

DRDO ನಿಂದ ಉತ್ತರ ಪ್ರದೇಶಕ್ಕೆ 150 ಜಂಬೋ ಸಿಲಿಂಡರ್ ಆಕ್ಸಿಜನ್ ರವಾನೆ

01:21 PM Apr 19, 2021 | Team Udayavani |

ಉತ್ತರ ಪ್ರದೇಶ : ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ನಿರ್ದೇಶನದಂತೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿ ಆರ್‌ ಡಿ ಒ) ಸೋಮವಾರ (ಏಪ್ರಿಲ್ 19) ಉತ್ತರ ಪ್ರದೇಶಕ್ಕೆ 150 ಜಂಬೋ ಸಿಲಿಂಡರ್ ಆಕ್ಸಿಜನ್ ಪೂರೈಸಿದೆ.

Advertisement

ಹೆಚ್ಚುವರಿ 1,000 ಸಿಲಿಂಡರ್‌ ಗಳನ್ನು ನಂತರ ಡಿ ಆರ್‌ ಡಿ ಒ ಒದಗಿಸಲಿದ್ದು, ಕೋವಿಡ್ ಸೋಂಕಿತರಿಗೆ ಲಕ್ನೋದಲ್ಲಿನ ಆಸ್ಪತ್ರೆಗಳಿಗೆ ಆಮ್ಲಜನಕವನ್ನು ಪೂರೈಸಲಾಗುತ್ತದೆ.

ಓದಿ : ಗುತ್ತಿಗಾರು ಪ್ರೌಢಶಾಲೆಯ ಮೂವರು ಮಕ್ಕಳಿಗೆ ಕೋವಿಡ್: ಪರೀಕ್ಷೆ ರದ್ದುಗೊಳಿಸಿ ರಜೆ ಘೋಷಣೆ

ಇನ್ನು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೇ ಬುಧವಾರ (ಏಪ್ರಿಲ್ 14) ಕೋವಿಡ್ ಸೋಂಕು ದೃಢಪಟ್ಟಿದ್ದು,  ಉತ್ತರ ಪ್ರದೇಶದ ಕೋವಿಡ್ -19 ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ.

ಶುಕ್ರವಾರ ಉತ್ತರ ಪ್ರದೇಶ ಸರ್ಕಾರ ಮೇ 15 ರ ತನಕ ವಾರಾಂತ್ಯ ಲಾಕ್ ಡೌನ್ ಅನ್ನು ಹೇರಿ, ಕೋವಿಡ್ ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು ಜಾರಿಗೊಳಿಸಿ ಆದೇಶ ಹೊರಡಿಸಿದೆ.

Advertisement

ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ಉತ್ತರ ಪ್ರದೇಶದಲ್ಲಿ ಪ್ರಸ್ತುತ ಒಟ್ಟು 1,91,457 ಸಕ್ರಿಯ ಕೋವಿಡ್ -19 ಪ್ರಕರಣಗಳಿದ್ದು, ಒಟ್ಟು 6,50,333 ಸೋಂಕಿನ ಪ್ರಕರಣಗಳು  ದಾಖಲುಗೊಂಡಿವೆ ಮತ್ತು 9,830 ಸಾವುಗಳು  ಸಂಭವಿಸಿವೆ.

ಇನ್ನು, ಕಳೆದ 24 ಗಂಟೆಗಳಲ್ಲಿ 2.73 ಲಕ್ಷಕ್ಕೂ ಹೆಚ್ಚು ಹೊಸ ಸೋಂಕುಗಳು ಮತ್ತು 1,619 ಸಾವುಗಳು ದೇಶದಲ್ಲಿ ದಾಖಲಾಗಿವೆ.

ಈ  ಮೂಲಕ ದೇಶದಲ್ಲಿ ಒಟ್ಟು ಕೋವಿಡ್ ಸಕಾರಾತ್ಮಕ ಪ್ರಕರಣಗಳ ಸಂಖ್ಯೆ 1,50,61,919 ಕ್ಕೆ ಏರಿಕೆಯಾಗಿದ್ದು.  ಪ್ರಸ್ತುತ 19,29,329 ಸಕ್ರಿಯ ಪ್ರಕರಣಗಳಿವೆ.

ಓದಿ : ತೊಡಿಕಾನ ಮಲ್ಲಿಕಾರ್ಜುನ ದೇವಸ್ಥಾನ: ದೇವರ ದೊಡ್ಡ ದರ್ಶನ ಬಲಿ ಉತ್ಸವ

Advertisement

Udayavani is now on Telegram. Click here to join our channel and stay updated with the latest news.

Next