Advertisement

ವೆಸ್ಟ್‌ಇಂಡೀಸ್‌ಗೆ ಸೋಲು; ಭಾರತಕ್ಕೆ 4-1 ಸರಣಿ

12:52 AM Aug 08, 2022 | Team Udayavani |

ಲಾಡರ್‌ಹಿಲ್‌ (ಫ್ಲೋರಿಡಾ): ಶ್ರೇಯಸ್‌ ಅಯ್ಯರ್‌ ಅವರ ಅಮೋಘ ಆಟದಿಂದಾಗಿ ಭಾರತವು ರವಿವಾರ ನಡೆದ ಐದನೇ ಟಿ20 ಪಂದ್ಯದಲ್ಲಿ ವೆಸ್ಟ್‌ಇಂಡೀಸ್‌ ತಂಡವನ್ನು 88 ರನ್ನುಗಳಿಂದ ಸೋಲಿಸಿದ್ದು 4-1 ಅಂತರದಿಂದ ಸರಣಿ ತನ್ನದಾಗಿಸಿಕೊಂಡಿದೆ.

Advertisement

ಶ್ರೇಯಸ್‌ ಅಯ್ಯರ್‌ ಅವರ ಅರ್ಧಶತಕ (64), ದೀಪಕ್‌ ಹೂಡಾ (38) ಮತ್ತು ನಾಯಕ ಹಾರ್ದಿಕ್‌ ಪಾಂಡ್ಯ ಅವರ 28 ರನ್‌ ನೆರವಿನಿಂದ ಭಾರತವು 7 ವಿಕೆಟಿಗೆ 188 ರನ್‌ ಪೇರಿಸಿತ್ತು. ಇದಕ್ಕುತ್ತರವಾಗಿ ಅಕ್ಷರ್‌ ಪಟೇಲ್‌ (15ಕ್ಕೆ 3), ಕುಲದೀಪ್‌ ಯಾದವ್‌ (12ಕ್ಕೆ 3) ಮತ್ತು ರವಿ ಬಿಷ್ಣೋಯಿ (16ಕ್ಕೆ 4) ಅವರ ಮಾರಕ ದಾಳಿಗೆ ಕುಸಿದ ವೆಸ್ಟ್‌ಇಂಡೀಸ್‌ 16 ಓವರ್‌ ಮುಗಿಯುವ ಮೊದಲೇ ಕೇವಲ 100 ರನ್ನಿಗೆ ಆಲೌಟಾಗಿ ಶರಣಾಯಿತು.

Advertisement

Udayavani is now on Telegram. Click here to join our channel and stay updated with the latest news.

Next