ದೋಹಾ: ಕೊನೆಯ ಲೀಗ್ ಪಂದ್ಯದಲ್ಲಿ ಟ್ಯುನೀಶಿಯ ಕೈಯಲ್ಲಿ ಹಾಲಿ ಚಾಂಪಿಯನ್ ಫ್ರಾನ್ಸ್ ಆಘಾತಕಾರಿ ಸೋಲನುಭವಿಸಿದೆ.
ಆದರೆ ಈ ಏರುಪೇರಿನ ಫಲಿತಾಂಶದ ಹೊರತಾಗಿಯೂ ಟ್ಯುನೀಶಿಯಕ್ಕೆ ಯಾವುದೇ ಲಾಭವಾಗಲಿಲ್ಲ. “ಡಿ’ ವಿಭಾಗದಿಂದ ಫ್ರಾನ್ಸ್ ಮತ್ತು ಆಸ್ಟ್ರೇಲಿಯ ಪ್ರಿ-ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಹಾಕಿವೆ.
ಏಕಕಾಲಕ್ಕೆ ನಡೆದ ಇನ್ನೊಂದು ಪಂದ್ಯದಲ್ಲಿ ಆಸ್ಟ್ರೇಲಿಯ 1-0 ಅಂತರದಿಂದ ಡೆನ್ಮಾರ್ಕ್‌ಗೆ ಸೋಲುಣಿಸಿತು.
ಫ್ರಾನ್ಸ್ ಮೊದಲೆರಡು ಪಂದ್ಯಗಳಲ್ಲಿ ಆಸ್ಟ್ರೇಲಿಯ ಮತ್ತು ಡೆನ್ಮಾರ್ಕ್ ವಿರುದ್ಧ ಗೆಲುವು ಸಾಧಿಸಿತ್ತು.
Related Articles
58ನೇ ನಿಮಿಷದಲ್ಲಿ ಸಿಡಿಲಿನಂತೆ ಎರಗಿದ ವಹಾಬಿ ಖಾಜ್ರಿ ಫ್ರಾನ್ಸ್‌ಗೆ ಮರ್ಮಾ ಘಾತವಿಕ್ಕಿದರು. ಕೊನೆಯಲ್ಲಿ ನಾಯಕ ಗ್ರೀಜ್ಮನ್ ಬಾರಿಸಿದ ಗೋಲನ್ನು ರೆಫ್ರಿ ನಿರಾಕರಿಸಿದ್ದು ಫ್ರಾನ್ಸ್‌ನ ಸೋಲಿಗೆ ಕಾರಣವಾಯಿತು.
ಆಸ್ಟ್ರೇಲಿಯದ ಏಕೈಕ ಗೋಲನ್ನು 60ನೇ ನಿಮಿಷದಲ್ಲಿ ಮ್ಯಾಥ್ಯೂ ಲೆಖೀ ಹೊಡೆದರು. ಆಸ್ಟ್ರೇಲಿಯ ಕೂಡ ಒಂದು ಪಂದ್ಯದಲ್ಲಿ ಸೋಲನುಭವಿಸಿತ್ತು (6 ಅಂಕ), ಟ್ಯುನೀಶಿಯ ಒಂದು ಜಯ, ಒಂದು ಡ್ರಾದೊಂದಿಗೆ 4 ಅಂಕ ಗಳಿಸಿ ತೃತೀಯ ಸ್ಥಾನಿಯಾಯಿತು.