Advertisement

ಕೊಳ್ಳೇಗಾಲ –ಹಸನೂರು ಘಾಟ್: ಅಪರಿಚಿತ ವಾಹನ ಢಿಕ್ಕಿ ಹೊಡೆದು ಜಿಂಕೆ ಸಾವು

04:48 PM Sep 04, 2020 | keerthan |

ಹನೂರು (ಚಾಮರಾಜನಗರ): ಅಪರಿಚಿತ ವಾಹನವೊಂದು ಢಿಕ್ಕಿ ಹೊಡೆದ ಪರಿಣಾಮ ಜಿಂಕೆಯೊಂದು ಮೃತಪಟ್ಟಿರುವ ಘಟನೆ ಕೊಳ್ಳೇಗಾಲ – ಹಸನೂರು ಘಾಟ್ ಅಂತಾರಾಜ್ಯ ಹೆದ್ದಾರಿಯಲ್ಲಿ ಜರುಗಿದೆ.

Advertisement

ಕೊಳ್ಳೇಗಾಲ – ಹಸನೂರು ಘಾಟ್ ಅಂತಾರಾಜ್ಯ ಹೆದ್ದಾರಿಯ ಎಡೆಯಾರಹಳ್ಳಿ ಆನೆ ಕಾರಿಡಾರ್ ಪ್ರದೇಶದಲ್ಲಿ ಶುಕ್ರವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಅಪರಿಚಿತ ವಾಹನವೊಂದು ಜಿಂಕೆಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಜಿಂಕೆಯು ಸ್ಥಳದಲ್ಲಿಯೇ ರಕ್ತ ಕಾರಿ ಪ್ರಾಣ ಬಿಟ್ಟಿದೆ. ಇದನ್ನು ಗಮನಿಸಿದ ಕೂಡಲೇ ಸಾರ್ವಜನಿಕರು ಅರಣ್ಯ ಇಲಾಖಾ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಬಿಆರ್‍ ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶ ಬೈಲೂರು ವಲಯದ ಅರಣ್ಯಾಧಿಕಾರಿಗಳು ಸ್ಥಳಕ್ಕಾಗಮಿಸಿ ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ: ಹೆಲ್ಮೆಟ್‌ ತಲೆಗಷ್ಟೇ ಅಲ್ಲ.. ಕ್ರಿಕೆಟ್ ಹೆಲ್ಮೆಟ್ ಹಿಂದೆ ಹಲವು ರೋಚಕ ಸಂಗತಿ

ಪರಿಸರ ಪ್ರೇಮಿ ಕೃಷ್ಣ ಆಕ್ರೋಶ: ಕೊಳ್ಳೇಗಾಲ – ಹಸನೂರು ಘಾಟ್ ರಸ್ತೆಯಬೋರೆದೊಡ್ಡಿ ಸಮೀಪದ 1.5ಕಿ.ಮೀ ರಸ್ತೆಯನ್ನು ಆನೆ ಕಾರಿಡಾರ್ ಎಂದು ಗುರುತಿಸಲಾಗಿದೆ. ಈ ಸ್ಥಳದಲ್ಲಿ ಆನೆ, ಹುಲಿ, ಚಿರತೆ, ಹುಲಿ ಸೇರಿದಂತೆ ವಿವಿಧ ಪ್ರಾಣಿಗಳು ರಸ್ತೆ ದಾಟುತ್ತಿರುತ್ತವೆ. ಈ ರಸ್ತೆಯಲ್ಲಿ ನಿಧಾನವಾಗಿ ಚಲಿಸುವಂತೆ ನಾಮಫಲಕಗಳನ್ನು ಆಳವಡಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ವನ್ಯಜೀವಿಗಳ ಸಂರಕ್ಷಣೆ ದೃಷ್ಠಿಯಿಂದ ಅರಣ್ಯ ಇಲಾಖೆ ಮತ್ತು ಸ್ವಯಂ ಸೇವಾ ಸಂಸ್ಥೆಯ ಸಹಯೋಗದೊಂದಿಗೆ 3-4 ಕಡೆ ತಾತ್ಕಾಲಿಕ ರಬ್ಬರ್ ರಸ್ತೆ ಡುಬ್ಬಗಳನ್ನು ಅಳವಡಿಸಲಾಗಿದೆ. ಆದರೆ ಕೆಲ ಕಿಡಿಗೇಡಿಗಳು ಅದನ್ನೂ ಸಹ ಹಾಳು ಮಾಡಿದ್ದಾರೆ. ಈ ರಸ್ತೆಯಲ್ಲಿ ಶಾಶ್ವತ ರಸ್ತೆ ಡುಬ್ಬಗಳನ್ನು ನಿರ್ಮಿಸಲು ಪಿಡಬ್ಲ್ಯೂಡಿ ಅಧಿಕಾರಿಗಳು ಅನುಮತಿ ನೀಡುತ್ತಿಲ್ಲ.  ಆದುದರಿಂದ ವನ್ಯಜೀವಿಗಳ ಹಿತದೃಷ್ಠಿಯಿಂದ ಶೀಘ್ರವಾಗಿ ರಸ್ತೆ ಡುಬ್ಬಗಳನ್ನು ನಿರ್ಮಾಣ ಮಾಡಬೇಕು ಎಂದು ಪರಿಸರ ಪ್ರೇಮಿ ಕೃಷ್ಣ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next