Advertisement

ಪ್ರಭಾಸ್‌ಗೆ ಜೋಡಿಯಾದ ದೀಪಿಕಾ

12:29 PM Jul 20, 2020 | mahesh |

ಹೊಸದಿಲ್ಲಿ: ಈಗಾಗಲೇ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿರುವ ತೆಲುಗು ಚಿತ್ರವೊಂದರ ಮುಖ್ಯಪಾತ್ರದಲ್ಲಿ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಅಭಿನಯಿಸಲಿದ್ದಾರೆ. ವಿಜ್ಞಾನ ಆಧಾರಿತ ಈ ಚಿತ್ರದಲ್ಲಿ ಅವರು ಬಾಹುಬಲಿ ಖ್ಯಾತಿಯ ನಟ ಪ್ರಬಾಸ್‌ ಎದುರು ನಟಿಸಲಿದ್ದಾರೆ. ಈ ಚಿತ್ರವನ್ನು “ಮಹಾನಟಿ’ ಚಿತ್ರ ಖ್ಯಾತಿಯ ನಿರ್ದೇಶಕ ನಾಗ್‌ ಅಶ್ವಿ‌ನ್‌ ನಿರ್ದೇಶಿಸಲಿದ್ದಾರೆ. ಇದೊಂದು ಪ್ಯಾನ್‌ ಇಂಡಿಯಾ ಸಿನೆಮಾ ಆಗಿರಲಿದ್ದು, ಭಾರತದ ಹಲವು ಪ್ರಮುಖ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರ ನಿರ್ಮಿಸುತ್ತಿರುವ “ವೈಜಯಂತಿ ಫಿಲ್ಮ್ಸ್’ ಸಂಸ್ಥೆ ತಿಳಿಸಿದೆ. ಈ ಚಿತ್ರ ಮುಂದಿನ ವರ್ಷ ಆರಂಭದ ವೇಳೆಗೆ ತೆರೆಕಾಣಲಿದೆ. ಈ ಚಿತ್ರದಲ್ಲಿ ನಟಿಸುತ್ತಿರುವ ಕುರಿತು ದೀಪಿಕಾ ಸಂತಸ ವ್ಯಕ್ತಪಡಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next