ಹೈದರಾಬಾದ್: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರಿಗೆ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
Advertisement
ನಾಗ್ ಅಶ್ವಿನ್ ನಿರ್ದೇಶನದ “ಪ್ರಾಜೆಕ್ಟ್ ಕೆ’ ಸಿನೆಮಾ ಚಿತ್ರೀ ಕರಣದ ವೇಳೆ ದೀಪಿಕಾ ಅವರ ಹೃದಯದ ಬಡಿತದಲ್ಲಿ ಏರಿಳಿತ ಉಂಟಾಗಿದೆ ಎಂಬ ಕಾರಣಕ್ಕಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಿಕಿತ್ಸೆಯ ಅನಂತರ ಅವರು ಚಿತ್ರೀ ಕರಣ ಸ್ಥಳಕ್ಕೆ ವಾಪಸಾಗಿರುವುದಾಗಿ ವರದಿಯಾಗಿತ್ತು. ಬಿಡುವಿಲ್ಲದೆ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದರಿಂದ ಹೀಗಾಗಿದೆ ಎಂದು ಎಂದು ಮೂಲಗಳು ತಿಳಿಸಿವೆ. ಈ ಸಿನೆಮಾದಲ್ಲಿ ಅಮಿತಾಭ್ ಬಚ್ಚನ್, ಪ್ರಭಾಸ್ ಸೇರಿ ಅನೇಕರು ಬಣ್ಣ ಹಚ್ಚಿದ್ದಾರೆ.