Advertisement

ವಿಪರೀತ ಒತ್ತಡದಿಂದ ಬಿಲ್ಗಾರಿಕೆಯನ್ನೇ ತ್ಯಜಿಸಲು ಚಿಂತಿಸಿದ್ದೆ

10:02 AM Jan 24, 2020 | sudhir |

ಪುಣೆ: ಮಾನಸಿಕ ಸ್ತಿಮಿತ ಸಾಧಿಸುವುದು ಬಹಳ ಕಷ್ಟದ ಸಂಗತಿ. ಇತ್ತೀಚೆಗೆ ಕ್ರೀಡಾಪಟುಗಳು ಮಾನಸಿಕ ಕಾರಣ ನೀಡಿ, ವಿಶ್ರಾಂತಿ ಪಡೆಯುವ ಬೆಳವಣಿಗೆ ಶುರುವಾಗಿದೆ. ಇಂತಹ ಪ್ರಕರಣಗಳು ನಡೆಯುತ್ತಿರುವಾಗಲೇ ಭಾರತದ ವಿಶ್ವವಿಖ್ಯಾತ ಬಿಲ್ಗಾರ್ತಿ ದೀಪಿಕಾ ಕುಮಾರಿ, ಮಹತ್ವದ ಸಂಗತಿಯೊಂದನ್ನು ಬಾಯ್ಬಿಟ್ಟಿದ್ದಾರೆ. ಬಿಲ್ಗಾರಿಕೆಯಲ್ಲಿ ಉಂಟಾದ ನಿರಂತರ ಒತ್ತಡದಿಂದ ಒಂದುಹಂತದಲ್ಲಿ ಕ್ರೀಡೆಯನ್ನೇ ಬದಲಿಸುವ ಬಗ್ಗೆ ಚಿಂತಿಸಿದ್ದೆ, ಕೆಲವು ಬಾರಿ ಒತ್ತಡ ತಡೆಯಲಾರದೆ ಅತ್ತಿದ್ದೆ ಎಂದು ದೀಪಿಕಾ ಹೇಳಿಕೊಂಡಿದ್ದಾರೆ.

Advertisement

ಬಿಲ್ಗಾರಿಕೆ ಸಂಪೂರ್ಣವಾಗಿ ಮನೋಬಲವನ್ನು ಆಧರಿಸಿರುವಂತಹ ಕ್ರೀಡೆ. ಸ್ವಲ್ಪ ವ್ಯತ್ಯಾಸವಾದರೂ ಪಂದ್ಯ ಕೈಬಿಟ್ಟಂತೆಯೇ ಸರಿ. ಈ ಹಿಂದೆಲ್ಲ ನಿರಂತರವಾಗಿ ಎದುರಾದ ಒತ್ತಡದಿಂದ ಒಬ್ಬಳೆ ಕುಳಿತು ಅತ್ತಿದ್ದೆ. ಕಡೆಗೊಮ್ಮೆ ಈ ಕ್ರೀಡೆಯನ್ನೇ ಬದಲಿಸಿ ಬೇರೆ ಕ್ರೀಡೆ ಆಯ್ದುಕೊಳ್ಳೋಣ ಎಂದೂ ಯೋಚಿಸಿದ್ದೆ ಎಂದು ದೀಪಿಕಾ ಹೇಳಿದ್ದಾರೆ.

ರಾಷ್ಟ್ರೀಯಮಟ್ಟದಲ್ಲಿ ನಡೆಯುವ ಅರ್ಹತಾಸುತ್ತು ಬಹಳ ಒತ್ತಡ ಮೂಡಿಸುತ್ತವೆ. ಹೊಸಬರು ಬಂದಿರುತ್ತಾರೆ. ಅವರಿಗೆ ಸೋತರೂ ಕಳೆದುಕೊಳ್ಳುವುದು ಏನಿರುವುದಿಲ್ಲ. ಆದ್ದರಿಂದ ತಲೆ ಕೆಡಿಸಿಕೊಳ್ಳದೇ ಬಾಣ ಬಿಡುತ್ತಾರೆ. ಅದೇ ರೀತಿ ನಾವು ಮಾಡಲು ಸಾಧ್ಯವಿಲ್ಲ. ನಮ್ಮ ಮೇಲೆ ನಾವು ಗಳಿಸಿದ ಅರ್ಹತೆಯನ್ನು ಉಳಿಸಿಕೊಳ್ಳುವ ಒತ್ತಡವಿರುತ್ತದೆ.

ಅಂತಹಸ್ಥಿತಿಯಲ್ಲಿ ಯುವಕರ ಸ್ಪರ್ಧೆಯನ್ನು ನೋಡಿದಾಗ ಬಹಳ ಒತ್ತಡದ ಅನುಭವವಾಗುತ್ತದೆ ಎಂದು ದೀಪಿಕಾ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next