Advertisement

Deepfake: ನಟಿ ಕಾಜೋಲ್‌ ಬಟ್ಟೆ ಬದಲಾಯಿಸುವ ವಿಡಿಯೋ ವೈರಲ್

04:52 PM Nov 16, 2023 | Team Udayavani |

ಮುಂಬಯಿ: ಡೀಪ್‌ ಪೇಕ್‌ ಕಾಟ ಸಿನಿಮಾರಂಗಕ್ಕೆ ತಪ್ಪಿದಂತೆ ಕಾಣುತ್ತಿಲ್ಲ. ರಶ್ಮಿಕಾ ಮಂದಣ್ಣ ಅವರ ವಿಡಿಯೋವನ್ನು ವೈರಲ್‌ ಮಾಡಿದ ಬಳಿಕ, ಕತ್ರಿನಾ ಕೈಫ್‌ ಫೋಟೋವನ್ನು ಆಶ್ಲೀಲವಾಗಿ ಡೀಪ್‌ ಫೇಕ್‌ ಮಾಡಲಾಗಿತ್ತು. ಇದೀಗ ಬಾಲಿವುಡ್‌ ಮತ್ತೊಬ್ಬ ನಟಿಯ ಡೀಪ್‌ ಫೇಕ್‌ ವಿಡಿಯೋವನ್ನು ವೈರಲ್‌ ಮಾಡಲಾಗಿದೆ.

Advertisement

ಬಿಟೌನ್‌ ಖ್ಯಾತ ನಟಿ ಕಾಜೋಲ್ ಅವರ ಮುಖವನ್ನು ಜೋಡಿಸಿ ವಿಡಿಯೋವೊಂದು ವೈರಲ್‌ ಮಾಡಲಾಗಿದೆ. ಕಾಜೋಲ್‌ ಬಟ್ಟೆ ಬದಲಾಯಿಸುತ್ತಿರುವ ವಿಡಿಯೋವನ್ನು ಸೋಶಿಯಲ್‌ ಮೀಡಿಯಾದಲ್ಲಿ ಎಐ ಮೂಲಕ ಡೀಪ್‌ ಫೇಕ್‌ ಮಾಡಿ ಹರಿದು ಬಿಡಲಾಗಿದೆ.

ಈ ವಿಡಿಯೋವನ್ನು ಜೂ.5 ರಂದು ಟಿಕ್‌ ಟಾಕ್‌ ನಲ್ಲಿ ಸೋಶಿಯಲ್‌ ಮೀಡಿಯಾ ತಾರೆಯೊಬ್ಬರು ʼಗೆಟ್ ರೆಡಿ ವಿತ್ ಮಿ ಟ್ರೆಂಡ್ʼ ಅಡಿಯಲ್ಲಿ ಅಪ್‌ ಲೋಡ್‌ ಮಾಡಲಾಗಿತ್ತು. ಇದೇ ವಿಡಿಯೋವನ್ನು ಬಳಸಿಕೊಂಡು ವಿಡಿಯೋದಲ್ಲಿರುವವರ ಮುಖಕ್ಕೆ ಕಾಜೋಲ್‌ ಅವರ ಮುಖವನ್ನು ಜೋಡಿಸಲಾಗಿದೆ ಎಂದು ಫ್ಯಾಕ್ಟ್‌ ಚೆಕ್‌ ಮಾಡುವ ʼಬೂಮ್‌ʼ ವರದಿ ಮಾಡಿದೆ.

ಸದ್ಯ ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಬಿಟೌನ್‌ ತಾರೆಯರು ಮಾತ್ರವಲ್ಲದೆ ಹಾಲಿವುಡ್‌ ಕಲಾವಿದರು ಕೂಡ ಡೀಪ್‌ ಫೇಕ್‌ ಬಲೆಗೆ ಸಿಲುಕಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next