Advertisement
ಸಾವಿರಾರು ಮಂದಿ ಭಕ್ತರು ಶ್ರೀ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಹೂವಿನ ಅಲಂಕಾರದೊಂದಿಗೆ ಮನೆ, ಕಚೇರಿಗಳನ್ನು ಸಿಂಗರಿಸಿ ಜನರು ಸಂಭ್ರಮಿಸಿದರು. ಮನೆ ಮುಂಭಾಗ ರಂಗೋಲಿ ಹಾಕಿ ದೀಪ ಹಚ್ಚಿ ದೀಪಾವಳಿಯನ್ನು ಆಚರಿಸಲಾಯಿತು. ಕೆಲವು ಕಡೆಗಳಲ್ಲಿ ವಾಹನ, ಅಂಗಡಿಗಳಿಗೂ ಪೂಜೆ ನೆರವೇರಿದರೆ ಇನ್ನು ಕೆಲವೆಡೆ ಸೋಮವಾರ ಪೂಜೆ ನಡೆಯಲಿದೆ.
ದೀಪಾವಳಿಯ ಪ್ರಥಮ ದಿನವಾದ ಬಲಿಪಾಡ್ಯದ ಅಂಗವಾಗಿ ರವಿವಾರ ಮನೆಗಳಲ್ಲಿ ಬೆಳಗ್ಗಿನ ಹೊತ್ತು ಅಭ್ಯಂಜನ ಸ್ನಾನದೊಂದಿಗೆ, ದೀಪಾವಳಿಯ ಸಡಗರಕ್ಕೆ ಚಾಲನೆ ದೊರಕಿದೆ. ಮೂರು ದಿನ ದೀಪಾವಳಿಯ ಸಂಭ್ರಮವಿರಲಿದೆ. ಮನೆಯ ಒಳ- ಹೊರಗೆ ಹಣತೆ ದೀಪಗಳ ಜತೆ ಗೂಡುದೀಪಗಳು ಬೆಳಗಿದವು. ವಿವಿಧ ಬಣ್ಣ-ವಿನ್ಯಾಸಗಳ ಗೂಡುದೀಪಗಳು, ಆಕರ್ಷಕ ವಿದ್ಯುತ್ ದೀಪಗಳು ಶೋಭಿಸುತ್ತಿವೆ. ಮನೆಯ ಆವರಣದಲ್ಲಿ ಹಣತೆಗಳಲ್ಲಿ ದೀಪ ಬೆಳಗಿಸಿ ಪಟಾಕಿ ಸಿಡಿಸಿ ಸಂಭ್ರಮಿಸಲಾಗುತ್ತದೆ.
Related Articles
ಉಡುಪಿ: ಶ್ರೀಕೃಷ್ಣಮಠದಲ್ಲಿ ರವಿವಾರ ದೀಪಾವಳಿ ಅಂಗವಾಗಿ ಕನಕಗೋಪುರ ಮುಂಭಾಗದಲ್ಲಿ ಪರ್ಯಾಯ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು, ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಪುರೋಹಿತರಾದ ಶ್ರೀನಿವಾಸ ಉಪಾಧ್ಯಾಯರು ಬಲೀಂದ್ರ ಪೂಜೆ, ಧನಲಕ್ಷಿ ¾à ಪೂಜೆ, ವ್ಯೋಮ ದೀಪ ನೆರವೇರಿಸಿದರು. ನ. 13ರಂದು ಗೋಪೂಜೆ ನಡೆಯಲಿದೆ. ನ. 14ರಿಂದ ತುಳಸೀಪೂಜೆ ಆರಂಭವಾಗಲಿದೆ. ನ. 24 ಉತ್ಥಾನದ್ವಾದಶಿಯಿಂದ 4 ದಿನಗಳ ಪರ್ಯಂತ ಲಕ್ಷದೀಪೋತ್ಸವ ಜರಗಲಿದೆ.
Advertisement