Advertisement

Deepavali Festival: ದೀಪಾವಳಿ ವಿಶೇಷ ರೈಲು ಸಂಚಾರ

03:35 PM Nov 08, 2023 | Team Udayavani |

ಹುಬ್ಬಳ್ಳಿ: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ಸರಿದೂಗಿಸುವ ಸಲುವಾಗಿ ತಮಿಳುನಾಡಿನ ನಾಗರಕೋಯಿಲ್‌ ಮತ್ತು ಎಸ್‌ಎಂವಿಟಿ ಬೆಂಗಳೂರು ನಿಲ್ದಾಣಗಳ ನಡುವೆ ಮೂರು ಟ್ರಿಪ್‌ಗಳಿಗಾಗಿ ವಿಶೇಷ ರೈಲುಗಳನ್ನು ಓಡಿಸಲು ದಕ್ಷಿಣ ರೈಲ್ವೆ ವಲಯವು ನಿರ್ಧರಿಸಿದೆ.

Advertisement

ನ. 7, 14 ಮತ್ತು 21ರಂದು ನಾಗರಕೋಯಿಲ್‌-ಎಸ್‌ಎಂವಿಟಿ ಬೆಂಗಳೂರು ವಿಶೇಷ ಎಕ್ಸ್‌ಪ್ರೆಸ್‌ (06083) ರೈಲು ಸಂಜೆ 7:35 ಗಂಟೆಗೆ ನಾಗರ ಕೋಯಿಲ್‌ನಿಂದ ಹೊರಟು ಮರುದಿನ ಮಧ್ಯಾಹ್ನ 12:40 ಗಂಟೆಗೆ ಬೆಂಗಳೂರು ತಲಿಪಲಿದೆ. ಅದೇರೀತಿ ನ. 8, 15ಮತ್ತು
22ರಂದು ಎಸ್‌ಎಂವಿಟಿ ಟರ್ಮಿನಲ್‌ ಬೆಂಗಳೂರು-ನಾಗರಕೋಯಿಲ್‌ ವಿಶೇಷ ಎಕ್ಸ್‌ಪ್ರೆಸ್‌ (06084) ರೈಲು ಮಧ್ಯಾಹ್ನ 2 ಗಂಟೆಗೆ ಬೆಂಗಳೂರಿನಿಂದ ಹೊರಟು ಮರುದಿನ ಬೆಳಗ್ಗೆ 6:10 ಗಂಟೆಗೆ ನಾಗರಕೋಯಿಲ್‌ ತಲುಪಲಿದೆ.

ಈ ವಿಶೇಷ ರೈಲುಗಳು ವಲ್ಲಿಯೂರ್‌, ತಿರುನೆಲ್ವೇಲಿ, ಕೋವಿಲ್ಪಟ್ಟಿ, ಸತೂರ್‌, ವಿರುಧುನಗರ, ಮಧುರೈ, ದಿಂಡಿಗಲ್‌, ತಿರುಚ್ಚಿರಾಪಳ್ಳಿ, ಕರೂರ, ನಮಕ್ಕಲ್‌, ಸೇಲಂ, ಮೊರಪ್ಪೂರ್‌, ತಿರುಪತ್ತೂರು, ಬಂಗಾರಪೇಟೆ, ಕೃಷ್ಣರಾಜಪುರಂಗಳಲ್ಲಿ ನಿಲುಗಡೆಗೊಳ್ಳಲಿವೆ. ವಿಶೇಷ ರೈಲುಗಳಲ್ಲಿ ಒಂದು ಎಸಿ ಟು-1ಟೈರ್‌, ಮೂರು ಎಸಿ ತ್ರಿ-ಟೈರ್‌, 10 ಸ್ಲಿàಪರ್‌ ಕ್ಲಾಸ್‌, ಎರಡು ಸಾಮಾನ್ಯ ದ್ವಿತೀಯ ದರ್ಜೆ, ಎರಡು ಲಗೇಜ್‌ ಕಮ್‌ ಬ್ರೇಕ್‌ ವ್ಯಾನ್‌ ಬೋಗಿಗಳ ಸಂಯೋಜನೆ ಒಳಗೊಂಡಿದೆ.

ಭಗತ್‌ ಕಿ ಕೋಠಿ-ಎಸ್‌ಎಂವಿಟಿ ಬೆಂಗಳೂರು:
ದೀಪಾವಳಿ/ಛತ್‌ ಹಬ್ಬಗಳ ಸಮಯದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ಸರಿದೂಗಿಸಲು ಎಸ್‌ಎಂವಿಟಿ ಬೆಂಗಳೂರು ಮತ್ತು ಭಗತ್‌ ಕಿ ಕೋಠಿ-ಎಸ್‌ಎಂವಿಟಿ ಬೆಂಗಳೂರು (04813/04814) ನಡುವೆ ಎಂಟು ಟ್ರಿಪ್‌ ವಿಶೇಷ ರೈಲುಗಳನ್ನು ಓಡಿಸಲು ವಾಯವ್ಯ ರೈಲ್ವೆ ವಲಯ ನಿರ್ಧರಿಸಿದೆ.

ನ.11ರಿಂದ ಡಿ. 4ರ ವರೆಗೆ ಭಗತ್‌ ಕಿ ಕೋಠಿ-ಎಸ್‌ಎಂವಿಟಿ ಬೆಂಗಳೂರು ವಿಶೇಷ ಎಕ್ಸ್‌ಪ್ರೆಸ್‌ (04813) ರೈಲು ಪ್ರತಿ ಶನಿವಾರ
ಮತ್ತು ಸೋಮವಾರ ಬೆಳಗ್ಗೆ 5:15 ಗಂಟೆಗೆ ಭಗತ್‌ ಕಿ ಕೋಠಿದಿಂದ ಹೊರಟು ಮೂರನೇ ದಿನ ರಾತ್ರಿ 11:30 ಗಂಟೆಗೆ ಬೆಂಗಳೂರು
ತಲುಪಲಿದೆ.

Advertisement

ಅದೇ ರೀತಿ ನ. 13ರಿಂದ ಡಿ. 6ರ ವರೆಗೆ ಎಸ್‌ಎಂವಿಟಿ ಬೆಂಗಳೂರು-ಭಗತ್‌ ಕಿ ಕೋಠಿ ವಿಶೇಷ ಎಕ್ಸ್‌ಪ್ರೆಸ್‌ (04814) ರೈಲು ಪ್ರತಿ
ಸೋಮವಾರ ಮತ್ತು ಬುಧವಾರ ಸಂಜೆ 4:30 ಗಂಟೆಗೆ ಬೆಂಗಳೂರಿನಿಂದ ಹೊರಟು ಮೂರನೇ ದಿನ ಮಧ್ಯಾಹ್ನ 12:40 ಗಂಟೆಗೆ
ಭಗತ್‌ ಕಿ ಕೋಠಿ ತಲುಪಲಿದೆ.

ಈ ವಿಶೇಷ ರೈಲುಗಳು ಲೂನಿ, ಸಂದಾರಿ, ಜಾಲೋರ್‌, ಮಾರ್ವಾರ್‌ ಭಿನ್ಮಾಲ್‌, ರಾಣಿವಾರ, ಧನೇರಾ, ಭಿಲ್ಡಿ ಜಂಕ್ಷನ್‌, ಪಟಾನ್‌,
ಮಹೇಸನಾ ಜಂಕ್ಷನ್‌, ಅಹಮದಾಬಾದ್‌ ಜಂಕ್ಷನ್‌, ವಡೋದರಾ ಜಂಕ್ಷನ್‌, ಸೂರತ್‌, ವಾಪಿ, ವಸಾಯಿ ರೋಡ್‌, ಕಲ್ಯಾಣ ಜಂಕ್ಷನ್‌, ಪುಣೆ ಜಂಕ್ಷನ್‌, ಸತಾರಾ, ಮಿರಜ್‌ ಜಂಕ್ಷನ್‌, ಘಟಪ್ರಭಾ, ಬೆಳಗಾವಿ, ಧಾರವಾಡ, ಹುಬ್ಬಳ್ಳಿ, ಹಾವೇರಿ, ರಾಣಿಬೆನ್ನೂರ, ದಾವಣಗೆರೆ, ಬೀರೂರ, ಅರಸೀಕೆರೆ, ತಮಕೂರು ನಿಲ್ದಾಣಗಳಲ್ಲಿ ನಿಲುಗಡೆಗೊಳ್ಳಲಿವೆ.

ಈ ವಿಶೇಷ ರೈಲುಗಳಲ್ಲಿ ಎರಡು ಎಸಿ ಟು-ಟೈರ್‌, ಐದು ಎಸಿ ತ್ರಿ-ಟೈರ್‌, ಏಳು ಸ್ಲಿಪರ್‌ ಕ್ಲಾಸ್‌, ನಾಲ್ಕು ಸಾಮಾನ್ಯ ದ್ವಿತೀಯ ದರ್ಜೆ, ಎರಡು ದ್ವಿತೀಯ ದರ್ಜೆ ಕಮ್‌ ಲಗೇಜ್‌ ಮತ್ತು ಬ್ರೇಕ್‌ ವ್ಯಾನ್‌/ದಿವ್ಯಾಂಗ ಸ್ನೇಹಿ ಬೋಗಿಗಳನ್ನು ಒಳಗೊಂಡಿರುತ್ತವೆ.

ಹೆಚ್ಚಿನ ಮಾಹಿತಿಗಾಗಿ ತಮ್ಮ ಹತ್ತಿರದ ರೈಲ್ವೆ ನಿಲ್ದಾಣಗಳನ್ನು ಸಂಪರ್ಕಿಸಬೇಕು ಅಥವಾ ಅಧಿಕೃತ ಜಾಲತಾಣ https://enquiry.indianrail.gov.in ಭೇಟಿ ನೀಡಬಹುದು ಎಂದು ಪ್ರಕಟಣೆ ತಿಳಿಸಿದೆ.

ಕೆಲ ರೈಲುಗಳ ಸಂಚಾರ ಬದಲು
ಹುಬ್ಬಳ್ಳಿ: ಸೊಲ್ಲಾಪುರ ವಿಭಾಗದ ದೌಂಡ-ಮನ್ಮಾಡ್‌ನ‌ ವಿಸಾಪುರ-ಬೆಳವಂಡಿ ನಿಲ್ದಾಣಗಳ ಮಧ್ಯ ಜೋಡುಮಾರ್ಗ ನಿಮಿತ್ತ ನಾನ್‌-ಇಂಟರ್‌ಲಾಕಿಂಗ್‌ ಕೆಲಸ ಕೈಗೊಳ್ಳುವುದರಿಂದ ಕೆಲ ರೈಲುಗಳ ಸಂಚಾರ ಮಾರ್ಗ ಬದಲಿಸುವುದಾಗಿ ಕೇಂದ್ರೀಯ ರೈಲ್ವೆ ಸೂಚಿಸಿದೆ.

ನ. 8ರಂದು ಹಜರತ್‌ ನಿಜಾಮುದ್ದೀನ್‌ -ವಾಸ್ಕೊ ಡ ಗಾಮಾ ಡೇಲಿ ಎಕ್ಸ್‌ಪ್ರೆಸ್‌ (12780) ರೈಲು ಮನ್ಮಾಡ, ಇಗಟಪುರಿ, ಕಲ್ಯಾಣ, ಪನ್ವೇಲಿ, ಕಜರತ್‌, ಲೋನಾವಾಲಾ ಮಾರ್ಗವಾಗಿ ಸಂಚರಿಸಲಿದೆ. 8ರಂದು ಯಶವಂತಪುರ-ಚಂಡಿಗಢ ಬೈ-ವೀಕ್ಲಿ ಸುಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌ (22685) ರೈಲು ಪುಣೆ, ಲೋನಾವಾಲಾ, ಕಲ್ಯಾಣ, ಇಗಟಪುರಿ, ಮನ್ಮಾಡ ಮಾರ್ಗವಾಗಿ ಸಂಚರಿಸಲಿದೆ.

ರದ್ದು, ಮಾರ್ಗ ಬದಲು: ನೈಋತ್ಯ ರೈಲ್ವೆಯು ವಿಜಯವಾಡ ಮತ್ತು ಗುಂಟೂರ ವಿಭಾಗದಲ್ಲಿ ಸುರಕ್ಷತೆಗೆ ಸಂಬಂಧಿಸಿ ನಿರ್ವಹಣಾ ಕಾರ್ಯ ನಿಮಿತ್ತ ಕೆಲ ರೈಲುಗಳ ಸಂಚಾರ ರದ್ದು ಮತ್ತು ಮಾರ್ಗ ಬದಲು ಮಾಡಲಿದೆ.

ರದ್ದು: ನ. 13ರಿಂದ 19ರ ವರೆಗೆ ಹುಬ್ಬಳ್ಳಿ-ವಿಜಯವಾಡ ಡೇಲಿ ಎಕ್ಸ್‌ಪ್ರೆಸ್‌ (17329) ಹಾಗೂ 14ರಿಂದ 20ರ ವರೆಗೆ ವಿಜಯವಾಡ-ಹುಬ್ಬಳ್ಳಿ ಡೇಲಿ ಎಕ್ಸ್‌ಪ್ರೆಸ್‌ (17330) ರೈಲುಗಳ ಸಂಚಾರ ರದ್ದಾಗಲಿದೆ.

ಮಾರ್ಗ ಬದಲು: ನ. 15ಮತ್ತು 17ರಂದು ಎಸ್‌ಎಂವಿಟಿ ಬೆಂಗಳೂರು-ಗುವಾಹಟಿ ಟ್ರೈ-ವೀಕ್ಲಿ ಸುಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌
(12509) ರೈಲು ವಿಜಯವಾಡ, ಗುಡಿವಾಡ, ಭೀಮಾವರಂ ಟೌನ್‌, ನಿಡದವೊಲು ಮಾರ್ಗವಾಗಿ ಸಂಚರಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next