Advertisement
ಕಿರ್ಗಿಸ್ತಾನದ ಬಿಷ್ಕೆಕ್‌ನಲ್ಲಿ ಆರಂಭವಾಗಿರುವ ಏಷ್ಯಾ ಒಲಿಂಪಿಕ್ಸ್ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಶನಿವಾರ ಇಬ್ಬರೂ ಪಾಲ್ಗೊಳ್ಳಬೇಕಿತ್ತು. ಆದರೆ ದುಬಾೖಯಲ್ಲಿ ಸುರಿದ ಭಾರೀ ಮಳೆ ಯಿಂದಾಗಿ, ಎ. 16ರಿಂದ ಇಬ್ಬರೂ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಅತಂತ್ರರಾಗಿದ್ದರು. ಕಡೆಗೆ ತಡವಾಗಿ ಬಿಷ್ಕೆಕ್ ತಲುಪಿದ್ದಾರೆ. ಪರಿಸ್ಥಿತಿಯನ್ನು ವಿವರಿಸಿ ಕೋಚ್‌ಗಳು ಮನವಿ ಮಾಡಿದರೂ ಸಂಘಟಕರು ಪ್ರವೇಶ ನೀಡಲು ನಿರಾಕರಿಸಿದ್ದಾರೆ.
ದೀಪಕ್ 86 ಕೆಜಿ ವಿಭಾಗದಲ್ಲಿ ಹಾಗೂ ಸುಜೀತ್ 65 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದು, ಕ್ರೀಡಾಕೂಟಕ್ಕೂ ಮುನ್ನ ನಡೆಯುವ ತೂಕ ನಿರ್ಧರಿಸುವ ಸಮಯದಲ್ಲಿ ಹಾಜರಿರಲಿಲ್ಲ ಎಂಬ ಕಾರಣಕ್ಕೆ ಪ್ರವೇಶ ನಿರಾಕರಿಸಲಾಗಿದೆ. ಏಷ್ಯಾ ಒಲಿಂಪಿಕ್ಸ್ ಅರ್ಹತಾ ಕೂಟದ ಸಂಘಟಕರು ತಡವಾಗಿ ತೂಕ ಮಾಡಲು ನಿರಾಕರಿಸಿದ್ದು, ಭಾರತದ ಕೋಚ್‌ಗಳ ಮನವಿಯ ಬಳಿಕವೂ ಅನುಮತಿ ಸಿಕ್ಕಿಲ್ಲ.