Advertisement

ಕಾವ್ಯ ಮಲ್ಲಿಗೆ: ದೀಪ –ದೇವ ರೂಪ

03:19 PM Jul 25, 2021 | Team Udayavani |

ದೀಪ – ದೇವ ರೂಪ..

Advertisement

ಅಗ್ನಿ ಸ್ಪರ್ಶ ತಾಗಿ ಬೆಳಗಿ

ತನ್ನ ತಾನು ಉರಿದುಕೊಂಡು

ಅಂಧಕಾರ ದೂರ ಮಾಡಿ

ಬೆಳಕ ಚೆಲ್ಲಿ ನಲಿವ ದೀಪ |

Advertisement

ನೊಂದು ಬೆಂದು ನೋವನುಂಡು

ತಾನು ಕತ್ತಲಲ್ಲಿ ನಿಂದು

ಪರರ ಬಾಳಿಗೆ ಬೆಳಕು ತೋರಿ

ಜ್ಞಾನ ನೀಡಿ ಕಾಯುವ ದೀಪ |

ರವಿಯು ನೀಡುವ ಬೆಳಕ ಹೋಲುವ

ಚಂದ್ರನಂತೆ ತಂಪು ಕೊಡುವ

ಹಗಲು ಇರುಳು ಭೇದವಿರದೆ

ಬಿಡದೆ ಬೆಳಗಿ ನಲಿವ ದೀಪ |

ದೇವ ಜ್ಯೋತಿಯಾಗಿ ಬೆಳಗಿ

ಜಗದ ತಮವ ದೂರ ಮಾಡಿ

ಜಾತಿ ಮತದ ಸೋಂಕು ಇರದ

ಪ್ರಾಣ ರೂಪ ದೇವ ದೀಪ |

 

ಶ್ರೀಧರಯ್ಯ ಉಬ್ಬಲಗಂಡಿ

ವರ್ತೂರು, ಬೆಂಗಳೂರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next