Advertisement

ಡೀಮ್ಡ್ ಫಾರೆಸ್ಟ್‌ ಕೈಬಿಟ್ಟ ಜಾಗ ಬಡವರಿಗೆ

01:11 AM Jan 30, 2022 | Team Udayavani |

ಕಾರ್ಕಳ: ಡೀಮ್ಡ್ ಫಾರೆಸ್ಟ್‌ ಭೂಮಿಯನ್ನು ಕೈ ಬಿಡುವ ಕುರಿತು ಸರಕಾರದ ಮಟ್ಟದಲ್ಲಿ ಪ್ರಯತ್ನ ನಡೆಯುತ್ತಿದೆ. ಬಡವರಿಗೆ ನಿವೇಶನ ಕಲ್ಪಿಸಲು, ಸಾರ್ವಜನಿಕ ಬಳಕೆಗೆ ಆ ಭೂಮಿಯನ್ನು ಬಳಸಿಕೊಳ್ಳಲಾಗುವುದು ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್‌ ಕುಮಾರ್‌ ಹೇಳಿದರು.

Advertisement

ಕಾರ್ಕಳ ತಾ.ಪಂ. ಸಭಾಂಗಣದಲ್ಲಿ ಶನಿವಾರ ನಡೆದ ಕಾರ್ಕಳ, ಹೆಬ್ರಿ ತಾಲೂಕುಗಳ ಕೆಡಿಪಿ ಸಭೆಯ ಅಂತ್ಯದಲ್ಲಿ ಮಾತನಾ ಡಿದ ಅವರು, ಡೀಮ್‌r ಫಾರೆಸ್ಟ್‌ ಸಮಸ್ಯೆ ಯಿಂದ ಬಡ ಜನತೆಗೆ ಸವಲತ್ತು ನೀಡುವಲ್ಲಿ ತೊಡಕಾಗಿತ್ತು. ಹಕ್ಕುಪತ್ರವಿ ಲ್ಲದೆ ಸೌಲಭ್ಯ ಗಳು ಸಿಗುತ್ತಿರಲಿಲ್ಲ. ಡೀಮ್ಡ್ ಫಾರೆಸ್ಟ್‌ ಪಟ್ಟಿ ಯಿಂದ ಕೈಬಿಟ್ಟ ಭೂಮಿಯನ್ನು ಇವುಗಳಿಗೆ ಬಳಸಿಕೊಳ್ಳಲಾಗುವುದು ಎಂದರು.

ರಾಜ್ಯ ಸರಕಾರ 6 ತಿಂಗಳಲ್ಲಿ ಜನಸಾಮಾನ್ಯರಿಗೆ ಸಾಕಷ್ಟು ಯೋಜನೆ ಗಳನ್ನು ನೀಡಿದೆ. ಕೊರೊನಾ, ಪ್ರಾಕೃತಿಕ ವಿಕೋಪಗಳಿಂದ ಪ್ರಚಾರದ ಕಾರಣ ವಿಲ್ಲದೆಯೂ ದೊಡ್ಡ ಪ್ರಮಾಣದಲ್ಲಿ ಜನರಿಗೆ ತಲುಪಲು ಸಾಧ್ಯ
ವಾಗದಿರಬಹುದು. ಮುಂದಿನ ದಿನಗಳಲ್ಲಿ ಇಡೀ ಆಡಳಿತ ವ್ಯವಸ್ಥೆ ಚುರುಕುಗೊ ಳಿಸಬೇಕಿದೆ. ಸರಕಾರದ ಯೋಜನೆಗಳ ಅನುಷ್ಠಾನ ಜನಸಾಮಾನ್ಯರಿಗೆ ಸತಾಯಿ ಸದೆ ಯೋಜನೆಗಳನ್ನು ತಲುಪಿಸು ವುದು ಬಹಳಷ್ಟು ಪ್ರಾಮುಖ್ಯತೆ ಪಡೆದಿದೆ.

ಎಲ್ಲ ಇಲಾಖೆಗಳು ಇದನ್ನು ಜಾರಿಗೊಳಿಸ ಬೇಕು. ಸಾರ್ವಜನಿಕ ಸೇವೆಗಳಲ್ಲಿ ಎಲ್ಲಿಯೂ ಜನಸಾಮಾನ್ಯರಿಗೆ ತೊಂದರೆಯಾಗ ಬಾರದು. ಅಧಿಕಾರಿಗಳು ಬಹಳ ಎಚ್ಚರಿಕೆ ಯಿಂದ ಕೆಲಸ ಮಾಡಬೇಕು ಎಂದರು.

ಕಾಲಹರಣ ಮಾಡದಿರಿ
ಸರಕಾರದ ಸುತ್ತೋಲೆಗಳಲ್ಲಿ ಅನುಷ್ಠಾನಕ್ಕೆ ತೊಡಕಾಗಿ ಸಮಸ್ಯೆಗಳಾದಲ್ಲಿ ಕಡತವನ್ನು ತಮ್ಮ ಬಳಿಯೇ ಇಟ್ಟುಕೊಂಡು ಕಾಲಹರಣ ಮಾಡಬಾರದು. ಸರಿಪಡಿಸಿಕೊಂಡು ಜನಸಾಮಾನ್ಯರಿಗೆ ಯೋಜನೆ ತಲುಪಿಸ ಬೇಕಿದೆ. ಅಧಿಕಾರಿಗಳು ಕಾಮನ್‌ಸೆನ್ಸ್‌ ನಿಂದ ಕೆಲಸ ಮಾಡಿದಾಗ ಬಡವರಿಗೆ ಯೋಜನೆಗಳನ್ನು ತಲುಪಿಸಲು ಸಾಧ್ಯ. ಒಂದೇ ಮನೆಗೆ ಸವಲತ್ತು ತಲುಪುವುದನ್ನು ತಡೆಯಬೇಕು. ಅಧಿಕಾರಿಗಳ ಕಿಮ್ಮತ್ತಿನಿಂದ ಕೆಲವೆಡೆ ಒಂದೇ ಮನೆಗೆ ಹೆಚ್ಚು ಸವಲತ್ತುಗಳು ಹೋಗುತ್ತಿವೆೆ. ಸಾರ್ವಜನಿಕರಿಂದ ದೂರುಗಳು ಬರದೇ ರೀತಿಯಲ್ಲಿ ಅಧಿಕಾರಿಗಳ ಕಾರ್ಯವೈಖರಿ ಇರಬೇಕು. ಮುಂದಿನ ದಿನಗಳಲ್ಲಿ ಆಡಳಿತಕ್ಕೆ ಚುರುಕು ನೀಡಲಿದ್ದೇವೆ ಎಂದು ತಿಳಿಸಿದರು.

Advertisement

ಅಧಿಕಾರಿಯಿಂದ ತಪ್ಪು ಮಾಹಿತಿ: ಸಚಿವ ಗರಂ
ಜಲಜೀವನ್‌ ವಿಭಾಗದ ಅಧಿಕಾರಿಯಿಂದ ಸಚಿವರು ಮಾಹಿತಿ ಬಯಸಿದ್ದು, ಅಧಿಕಾರಿ ತಪ್ಪು ಮಾಹಿತಿ ನೀಡುತ್ತಿರುವುದು ಸಚಿವರ ಗಮನಕ್ಕೆ ಬಂತು. ಗರಂ ಆದ ಸಚಿವರು ಸಭೆಗೆ ಬರುವಾಗ ಸರಿಯಾದ ಮಾಹಿತಿಯೊಂದಿಗೆ ಬನ್ನಿ. ಯಾಕೆ ತಪ್ಪು ವರದಿ ನೀಡುತ್ತಿದ್ದೀರಿ, ಸಭೆಗೆ ಬಂದು ಕಾಟಾಚಾರಕ್ಕೆ ಏನಾದರೂ ಹೇಳಿ ಹೋಗುವ ಅಂದುಕೊಂಡಿದ್ದೀರಾ? ನೀವೆಲ್ಲ ಕೆಲಸ ಮಾಡೋಕೆ ಅನರ್ಹರು; ನಿಮ್ಮ ಹಾರಿಕೆಯ ಉತ್ತರ ನನಗೆ ಬೇಡ. ಇಂತಹ ಅಶಿಸ್ತುಗಳನ್ನು ಸಹಿಸಲಸಾಧ್ಯ ಎಂದು ಎಚ್ಚರಿಕೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next