ಕಾರ್ಕಳ: ಸಮರ್ಪಣಾ ಭಾವದಿಂದ ತೊಡಗಿಸಿಕೊಂಡಾಗ ಮಾತ್ರ ಸಮಗ್ರ ಅಭಿವೃದ್ಧಿ ಸಾಧ್ಯ ಎಂದು ಮೂಡಬಿದಿರೆ ಜೈನಮಠದ ಚಾರುಕೀರ್ತಿ ಪಂಡಿತಾಚಾರ್ಯ ವರ್ಯ ಮಹಾಸ್ವಾಮೀಜಿಯವರು ಹೇಳಿದ್ದಾರೆ.
ಅತಿಶಯ ಕ್ಷೇತ್ರ ನಲ್ಲೂರು ಬಸದಿಗೆ ರೂ. 2 ಕೋಟಿ ವೆಚ್ಚದಲ್ಲಿ ಸಾರ್ವಜನಿಕ ಹೊಸ ಸಂಪರ್ಕ ರಸ್ತೆಯ ಗುದ್ದಲಿ ಪೂಜೆ ಹಾಗೂ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.ಧರ್ಮಾಧಾರಿತ ಕಾರ್ಯಗಳು ಹೆಚ್ಚಾ ದಂತೆ ಧರ್ಮವನ್ನು ನಿರಂತರವಾಗಿ ಉಳಿಸಲು ಸಾಧ್ಯ, ನಲ್ಲೂರಿನಲ್ಲಿರುವ ಮಠದಕೆರೆ, ಪಟ್ಟದ ಕೆರೆಗಳ ಅಭಿವೃದ್ಧಿಯಾಗಬೇಕು.
ಬೇಸಗೆಯಲ್ಲಿ ಜನರಿಗೆ ನೀರಿನ ಸಮಸ್ಯೆಯುಂಟಾ ದಾಗ ಈ ಕೆರೆಗಳಿಂದ ನೀರು ನೀಡುವ ಧರ್ಮಕಾರ್ಯವಾಗಲಿ ಎಂದರು. ಕಾರ್ಕಳ ಶಾಸಕ ಸುನಿಲ್ ಕುಮಾರ್ ಮಾತನಾಡಿ, ಕಾರ್ಕಳದ ಎಲ್ಲ ರಸ್ತೆಗಳು ಅಭಿವೃದ್ಧಿಯಾಗಬೇಕು ಎಂಬ ಕಲ್ಪನೆ ಯಿಂದ ಅವಿರತವಾಗಿ ಶ್ರಮಿಸುತ್ತಿದ್ದೇನೆ.
ಕಿಂಡಿ ಆಣೆಕಟ್ಟು, ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಕಾರ್ಕಳಕ್ಕೆ 1 ಕೋಟಿ ರೂ. ವೆಚ್ಚದಲ್ಲಿ ಪಾರ್ಕ್, ಕಾರ್ಕಳ-ಬೈಲೂರು ರಸ್ತೆ ಅಭಿವೃದ್ಧಿ, ಕಾರ್ಕಳ ನಗರದಲ್ಲಿ ರೂ. 6 ಕೋಟಿ ವೆಚ್ಚದ ಸಂಪೂರ್ಣ ಸುಸಜ್ಜಿತ ಸರಕಾರಿ ಆಸ್ಪತ್ರೆ, ರೂ. 1.5 ಕೋಟಿ ವೆಚ್ಚದ ಸ್ವಿಮ್ಮಿಂಗ್ ಪೂಲ್ ಮತ್ತು ಇನ್ನಿತರ ಹಲವಾರು ಕಾಮಗಾರಿಗಳನ್ನು ಅನು ಷ್ಠಾನಗೊಳಿಸಲಾಗುವುದು ಎಂದರು.ಉದ್ಯಮಿ ರಘುವೀರ್ ಶೆಟ್ಟಿ, ಅನುದಾನ ಮಂಜೂರುಗೊಳಿಸಿದ ಶಾಸಕರಿಗೆ ಕೃತಜ್ಞತೆ ಸಲ್ಲಿಸಿದರು.
ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್, ನಲ್ಲೂರು ಕೊಡಮಣಿತ್ತಾಯ ದೆ„ವಸ್ಥಾನದ ಆಡಳಿತ ಮೊಕ್ತೇಸರ ವಜ್ರನಾಭ ಚೌಟ, ಜಿ.ಪಂ. ಸದಸ್ಯ ಉದಯ ಕೋಟ್ಯಾನ್, ದಿವ್ಯಶ್ರೀ ಅಮೀನ್, ತಾ.ಪಂ. ಸದಸ್ಯ ಸುರೇಶ್ ಶೆಟ್ಟಿ, ಗ್ರಾ.ಪಂ. ಅಧ್ಯಕ್ಷ ವಸಂತ್ ಮಡಿವಾಳ, ಕೂಷ್ಮಾಂಡಿನಿ ಬಳಗದ ಮಹಾವೀರ್ ಜೈನ್ ಉಪಸ್ಥಿತರಿದ್ದರು.
ಮಹಾವೀರ್ ಜೈನ್ ಸ್ವಾಗತಿಸಿ ದರು. ಪದ್ಮಪ್ರಸಾದ್ ವಂದಿಸಿದರು. ಮುನಿರಾಜ ರೆಂಜಾಳ ಕಾರ್ಯಕ್ರಮ ನಿರೂಪಿಸಿದರು.