Advertisement

ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಪ್ರಮಾಣ ಇಳಿಮುಖ: ಮುಪ್ಪಾನೆ ತೀರದಲ್ಲಿ ಮೀನುಗಳ ಸಾವು

12:22 PM Jun 12, 2022 | Team Udayavani |

ಸಾಗರ: ಶರಾವತಿ ಹಿನ್ನೀರಿನ ಮುಪ್ಪಾನೆ, ಕಟ್ಟಿನಕಾರು ತೀರಗಳಲ್ಲಿ ನೂರಾರು ಮೀನುಗಳು ಶುಕ್ರವಾರದಿಂದ ಸಾಯುತ್ತಿರುವುದು ಕಂಡುಬರುತ್ತಿದ್ದು, ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಪ್ರಮಾಣ ಇಳಿಮುಖವಾಗಿದ್ದು ಇದಕ್ಕೆ ಕಾರಣ ಎನ್ನಲಾಗಿದೆ.

Advertisement

ಲಿಂಗನಮಕ್ಕಿ ಜಲಾಶಯದ ಹಿನ್ನೀರಿನಲ್ಲಿರುವ ಪ್ರಾದೇಶಿಕ ಜಾತಿಯ ಹೊಳೆ ಮೀನುಗಳಾದ ಹಾವು ಮೀನು, ಗೊಜಲೆ, ಕೊಡಸ, ಜಬ್ಬು ಮುಂತಾದ ಸಣ್ಣ ಜಾತಿಯ ಮೀನುಗಳು ಹೆಚ್ಚಾಗಿ ಸಾಯುತ್ತಿವೆ. ಅವುಗಳ ಜೊತೆಯಲ್ಲಿಯೇ ಇರುವ ಕಾಟ್ಲಾ, ಗೌರಿ, ಫಾರಂ ಮೀನುಗಳಿಗೆ ಯಾವುದೇ ರೀತಿಯ ತೊಂದರೆ ಕಂಡುಬಂದಿಲ್ಲ.

ಬೇಸಿಗೆ ಹಿನ್ನೆಲೆಯಲ್ಲಿ ಸಣ್ಣ ಸಣ್ಣ ಒಳವೆಗಳಲ್ಲಿ ಮೀನುಗಳಿಗೆ ಆಹಾರ ಹಾಗೂ ನೀರಿನ ಕೃತಕ ಅಭಾವ ಸೃಷ್ಟಿಯಾಗಿದೆ. ಮುಂಗಾರು ಮಳೆ ಆರಂಭದಲ್ಲಿ ಭೂಮಿಯ ಮೇಲಿನ ದೂಳು ಹಳ್ಳಗಳಿಗೆ ಸೇರುತ್ತದೆ. ಇದರಿಂದ ಮೀನುಗಳು ಸಾಯುತ್ತಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಇದನ್ನೂ ಓದಿ:ವೀರಪ್ಪನ್‌ ಕಣ್ಣಿಗೆ ಬೀಳದೆ ಜೀವ ಉಳಿಸಿಕೊಂಡಿದ್ದ “ಭೋಗೇಶ್ವರ” ಇನ್ನಿಲ್ಲ

ಒಂದು ವರ್ಗದ ಮೀನುಗಳಿಗೆ ಕಡಿಮೆಯಾದ ನೀರಿನಿಂದ ಸೋಂಕು ತಗುಲಿದ್ದು, ಈ ಪ್ರಮಾಣದಲ್ಲಿ ಸಾಯಲು ಕಾರಣವಾಗಿದೆ. ಈ ಬಗ್ಗೆ ಮೀನುಗಳಿಗೆ ಯಾವುದೇ ರೀತಿಯ ಚಿಕಿತ್ಸೆ ನೀಡಲು ಸಾಧ್ಯವಿಲ್ಲ. ಉತ್ತಮವಾಗಿ ಮಳೆ ಸುರಿಯುವುದೊಂದೇ ಇದಕ್ಕಿರುವ ಪರಿಹಾರ ಎಂದು ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಪ್ರಶಾಂತ್ ತಿಳಿಸಿದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next