ನವದೆಹಲಿ: ಇನ್ನು ಮುಂದೆ ವಿಮಾನ ಪ್ರಯಾಣದ ಅವಧಿಯಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವ ಅಗತ್ಯ ಇರುವುದಿಲ್ಲ.
Advertisement
ಹೀಗೆಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಬುಧವಾರ ಆದೇಶ ಹೊರಡಿಸಿದೆ. ಕೊರೊನಾ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದ್ದರೂ, ಆದ್ಯತೆಯ ನೆಲೆಯಲ್ಲಿ ಮಾಸ್ಕ್ ಅನ್ನು ಪ್ರಯಾಣಿಕರು ಧರಿಸಬಹುದು ಎಂದು ಅಭಿಪ್ರಾಯಪಟ್ಟಿದೆ.
ಕೊರೊನಾ ವಿರುದ್ಧ ಕೇಂದ್ರ ಸರ್ಕಾರ ಕಾಲಕಾಲಕ್ಕೆ ಹೊರಡಿಸುವ ನಿಯಮಗಳ ಅನ್ವಯ ಈ ತೀರ್ಮಾನ ಕೈಗೊಳ್ಳಲಾಗಿದೆ.
ವಿಮಾನದ ಒಳಗೆ ಪ್ರಕಟಣೆ ನೀಡುವಾಗ ಕೂಡ ಪ್ರಯಾಣಿಕರು ತಮಗೆ ಅಗತ್ಯ ಬಿದ್ದರೆ ಮಾತ್ರ ಮಾಸ್ಕ್ ಧರಿಸಬೇಕು ಎಂದು ಹೇಳುವಂತೆಯೂ ಸೂಚಿಸಲಾಗಿದೆ.