Advertisement

ಸ್ಥಳೀಯ ಪೊರಕೆಗೆ ಬೇಡಿಕೆ ಕುಸಿತ

04:45 PM Feb 17, 2020 | Suhan S |

ಕುಷ್ಟಗಿ: ಮಾರುಕಟ್ಟೆಯಲ್ಲಿ ವಿವಿಧ ಕಂಪನಿ, ಬ್ರ್ಯಾಂಡ್‌ಗಳ ಪೊರಕೆಗಳ ಅಬ್ಬರಕ್ಕೆ ಈಚಲು ಗರಿಯಿಂದ ತಯಾರಿಸಿದ ಈಚಲು, ಹುಲ್ಲಿನ ಪೊರಕೆ ಬೇಡಿಕೆ ಕ್ರಮೇಣ ಮಂಕಾಗುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಕಾಲ ಕ್ರಮೇಣವಾಗಿ ಈಚಲು ಮರುಗಳು ಕಡಿಮೆಯಾಗಿದ್ದು, ಬಳಕೆದಾರರು ಕಂಪನಿ ಉತ್ಪಾದಿತ ವಸ್ತುಗಳಿಗೆ ಮಾರು ಹೋಗಿದ್ದಾರೆ. ಇಂತಹ ಸಂ ಗ್ಧತೆಯಲ್ಲೂ ಕೊರಮ ಜನಾಂಗದವರಿಗೆ ಮೂಲ ವೃತ್ತಿಯೇ ಜೀವನಾಧರವಾಗಿದೆ.

Advertisement

ಮಳೆಯ ಅಭಾವದ ಹಿನ್ನೆಲೆಯಲ್ಲಿ ಹಳ್ಳದ ಬದು, ಅರಣ್ಯ ಪ್ರದೇಶದಲ್ಲಿ ಸ್ವಾಭಾವಿಕವಾಗಿ ಬೆಳೆಯುವ ಹುಲ್ಲುಗಾವಲು, ಈಚಲ ಮರಗಳ ಸಂಖ್ಯೆ ಮೊದಲಿದ್ದಂತೆ ಈಗಿಲ್ಲ. ವ್ಯವಸಾಯಕ್ಕಾಗಿ ಜಮೀನು ವಿಸ್ತಾರಕ್ಕೆ ಈ ಮರಗಳ ಸಂಖ್ಯೆ ಕಡಿಮೆಯಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಈಚಲು ಗರಿಯಿಂದ ಜೀವನ ಕಂಡುಕೊಂಡಿದ್ದ ಕುಟುಂಬಗಳು ಸಂಕಷ್ಟ ಎದುರಿಸುತ್ತಿವೆ. ಪಾರಂಪರಿಕವಾಗಿ ನಂಬಿದ ಸಾಂಪ್ರದಾಯಿಕ ಕರಕುಶಲತೆಗೆ ಬೆಲೆಕಟ್ಟದೇ ಇರುವುದು ಅವರ ಬದುಕು ಕಟ್ಟಿಕೊಳ್ಳುವುದು ಪ್ರಶ್ನಾರ್ಥಕವಾಗುತ್ತಿದೆ.

ಈಚಲು ಮರಗಳು ನಮ್ಮ ಭಾಗದಲ್ಲಿ ಕಡಿಮೆ ಆಂಧ್ರ ಪ್ರದೇಶದಲ್ಲಿ ದೊರೆಯುವ ಕಚ್ಚಾ ಬಾರ್ಲ್ ಲಾರಿ ಲೋಡ್‌ಗಟ್ಟಲೇ ತಯಾರಿಸಿ, ಅದರಿಂದ ಪೊರಕೆ ತಯಾರಿಸುತ್ತಿದ್ದು, ಕ್ರಮೇಣ ವರ್ಷವಿಡೀ ಬೇಡಿಕೆಗೆ ಅನುಗುಣವಾಗಿ ಈಚಲು ಪೊರಕೆತಯಾರಿಸಿ ಮಾರಾಟ ಮಾಡಿ ಬದುಕುವಂತಾಗಿದೆ. ಈಚಲು ಪೊರಕೆಗೆ ಜೋಡಿಗೆ 30 ರೂ. ಇದ್ದು, ಹುಲ್ಲಿನ ಬಾರಿಗೆ ಜೋಡಿಗೆ 40 ರೂ. ಮಾರುತ್ತಿದ್ದು, ಕಚ್ಚಾ ಉತ್ಪನ್ನ, ಪೊರಕೆ ತಯಾರಿಸಿದವರಿಂದ 12 ರೂ.ಗೆ ಖರೀ ದಿಸಿ 15 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇದರಿಂದ ಪ್ರತಿ ಪೊರಕೆಗೆ 3 ರೂ. ಸಿಗುತ್ತಿದ್ದು, ದಿನದ ಆದಾಯ 300 ರೂ. ಆದರೆ ಸಾಗಾಣಿಕೆ ವೆಚ್ಚ 100 ರೂ. ಇತರೇ ಖರ್ಚು 50 ರೂ. ಆದರೆ ಉಳಿದ 150 ರೂ. ಜೀವನ ನಿರ್ವಹಣೆಗೆ ಉಳಿಯುತ್ತದೆ ಎನ್ನುತ್ತಾರೆ ಇಲಕಲ್‌ ನ ಯಲ್ಲಮ್ಮ.

ಇಡೀ ದಿನ ಇದೀಗ ಪ್ಲಾಸ್ಟಿಕ್‌ ಹಿಡಿಕೆಯ ಪೊರಕೆಯ ಬೇಡಿಕೆ ಹಿನ್ನೆಲೆಯಲ್ಲಿ ಅದರಂತೆ ತಯಾರಿಸಿ ಮಾರಲು ಯತ್ನಿಸಿದರೆ, ಇಲ್ಲದ ಚೌಕಸಿ ಮಾಡುವ ಗ್ರಾಹಕರು, ವಿವಿಧ ಕಂಪನಿ ಬ್ರ್ಯಾಂಡ್‌ ಗಳ ಕಸದ ಪೊರಕೆ ಅದರ ಮೇಲಿನ ದರ ಕೊಟ್ಟು ಮರುಮಾತಿಲ್ಲದೇ ಖರೀ ದಿಸಲಾಗುತ್ತಿದೆ. ತೆಂಗಿನ ಗರಿಗಳಿಂದ ತಯಾರಿಸುವ ಕಡ್ಡಿ ಪೊರಕೆಗೂ ಡಿಮ್ಯಾಂಡ್‌ ಕಂಡು ಬಂದಿದೆ. ಹಾಸನದಿಂದ ಕ್ವಿಂಟಲ್‌ಗೆ 2ರಿಂದ 3 ಸಾವಿರ ರೂ.ದಂತೆ ಖರೀದಿ ಸಿ, ಲೋಡ್‌ಗಟ್ಟಲೇ ತರಿಸಿ, ತೆಂಗಿನ ಗರಿಯ ಕಡ್ಡಿ ಪೊರಕೆ ತಯಾರಿಸಿ ವಾರದ ಸಂತೆ, ಮನೆ ಮನೆಗೆ ಮಾರಾಟ ಮಾಡಲಾಗುತ್ತಿದೆ.

ನಾವು ಶಿಕ್ಷಣವಂತರಾಗಿದ್ದರೆ ಕಸದ ಪೊರಕೆ ಉದ್ಯೋಗ ಮುಂದುವರಿಸಲಾಗುತ್ತಿರಲಿಲ್ಲ. ಶಾಲೆ ಕಲಿಯದೇ ಇರುವುದು, ಅನಿವಾರ್ಯವಾಗಿ ಈ ಉದ್ಯೋಗ ಆಶ್ರಯವಾಗಿದೆ. ಈ ಉದ್ಯೋಗ ಬಿಟ್ಟರೆ ಬೇರೆ ಉದ್ಯೋಗ ಗೊತ್ತಿಲ್ಲ. ಈಚಲುಪೊರಕೆ, ಹುಲ್ಲು, ಸಿಂಬೆ, ಚಾಪೆ ತಯಾರಿಸಿ ಮಾರಾಟ ಮಾಡುತ್ತಿದ್ದು, ಸರ್ಕಾರ ಪ್ರೋತ್ಸಾಹ ಅಗತ್ಯತೆ ನಿರೀಕ್ಷೆಯಲ್ಲಿದ್ದೇವೆ. ಈ ಉದ್ಯೋಗದಿಂದ ಜೀವನ ನಿರ್ವಹಣೆ ಕಷ್ಟ ಎನ್ನುವುದು ಮನವರಿಕೆಯಾಗಿದ್ದು, ಮಕ್ಕಳಿಗೆ ಶಿಕ್ಷಣ ನೀಡಿದ್ದೇವೆ. ಈಚಲು ಮರ, ಹುಲ್ಲು ಕೊರತೆ ಹೊರತು ಪಡಿಸಿದರೆ ಇಂದಿಗೂ ಈ ಉದ್ಯೋಗ ಜೀವನಾಧರವಾಗಿದೆ. ಈ ಭಾಗದಲ್ಲಿ ಬೆಳೆದ ಈಚಲು ಗಿಡಗಳಿಂದ ಗರಿಗಳನ್ನು

Advertisement

ಮಾತ್ರ ತೆಗೆಯುತ್ತೇವೆ, ಗಿಡಗಳಿಗೆ ಹಾನಿ ಮಾಡುವುದಿಲ್ಲ ಆದರೂ ಅರಣ್ಯ ಇಲಾಖೆಯವರ ಕಿರಿಕಿರಿ ಇದ್ದೇ ಇದೆ.  –ಯಲ್ಲಮ್ಮ, ಈಚಲು ಪೊರಕೆ ಮಾರುವವರು

 

ಮಂಜುನಾಥ ಮಹಾಲಿಂಗಪುರ

Advertisement

Udayavani is now on Telegram. Click here to join our channel and stay updated with the latest news.

Next