Advertisement

ಜೀವಂತವಾಗಿದ್ದರೂ ದಾಖಲೆಯಲ್ಲಿ ʼಮೃತ ವ್ಯಕ್ತಿʼ: ಎಡವಟ್ಟಿನಿಂದ ವೃದ್ಧಾಪ್ಯ ವೇತನವೇ ಗೋತಾ.!

12:06 PM Jun 07, 2023 | Team Udayavani |

ಪಶ್ಚಿಮ ಬಂಗಾಳ: ಸರ್ಕಾರದಿಂದ ಬರುವ ವೃದ್ಧಾಪ್ಯ ವೇತನ ಸೌಲಭ್ಯ ಎಷ್ಟೋ ಬಡ ಕುಟುಂಬಗಳಿಗೆ ಆಸರೆ ಆಗುತ್ತದೆ. ಆದರೆ ಇಲ್ಲೊಂದು ವ್ಯಕ್ತಿಗೆ ಕಳೆದ 10 ವರ್ಷದಿಂದ ಬರುತ್ತಿದ್ದ ವೃದ್ಧಾಪ್ಯ ವೇತನ ಸೌಲಭ್ಯ ಅಧಿಕಾರಿಗಳ ಎಡವಟ್ಟಿನಿಂದಾಗಿ ನಿಂತಿದೆ.

Advertisement

ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ 79 ವರ್ಷದ ವಿಜಯ್ ಹಾಥಿ ಅವರ ಬದುಕು ಬಡತನದ ದಿನದಲ್ಲೇ ಕಳೆಯುತ್ತಿದೆ. ತನ್ನ ಪತ್ನಿ ಹಾಗೂ ಅನಾರೋಗ್ಯಕ್ಕೆ ತುತ್ತಾಗಿ ಹಾಸಿಗೆಯಲ್ಲಿ ಮಲಗಿಯೇ ಇರುವ ಮಗನೊಂದಿಗೆ ಬದುಕು ಸಾಗಿಸಲು ವಿಜಯ್‌ ಅವರು ಪಡುವ ಕಷ್ಟ ಯಾರಿಗೂ ಬೇಡದಂತಿದೆ. ಹೇಗಾದರೂ ಮಾಡಿ ಮಗನ ಚಿಕಿತ್ಸೆಗೆ ಹಾಗೂ ಮನೆಯ ಖರ್ಚಿಗೆ ಚೂರಾದರೂ ಸಹಾಯವಾಗುತ್ತಿದ್ದ ಸರ್ಕಾರದ ವೃದ್ಧಾಪ್ಯ ವೇತನ ಸೌಲಭ್ಯ ಕಳೆದ ಎರಡು ವರ್ಷಗಳಿಂದ ನಿಂತಿದೆ.

10 ವರ್ಷಗಳಿಂದ ತಿಂಗಳಿಗೆ 1000 ಸಾವಿರದಂತೆ ಬರುತ್ತಿದ್ದ ವೃದ್ಧಾಪ್ಯ ವೇತನ ಸೌಲಭ್ಯ ಕಳೆದ ಎರಡು ವರ್ಷಗಳ ಹಿಂದೆ ನಿಂತಿದೆ. ಆತಂಕಕ್ಕೆ ಒಳಗಾದ ವಿಜಯ್‌ ಅವರು ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಬಳಿ ಕೇಳಿದಾಗ “ನೀವು ಸತ್ತು ಹೋಗಿದ್ದೀರಿ ಎಂದು ಸರ್ಕಾರದ ದಾಖಲೆಗಳಲ್ಲಿ ಬರೆಯಲಾಗಿದೆ ನಿಮಗೆ ಇನ್ಮುಂದೆ ಸೌಲಭ್ಯ ಸಿಗುವುದಿಲ್ಲ” ಎಂದು ಹೇಳಿದ್ದಾರೆ.!

ಇದನ್ನೂ ಓದಿ: Viral Video: ಯುವತಿಯನ್ನು ಅಪಹರಣ ಮಾಡಿ ಬಲವಂತವಾಗಿ ಸಪ್ತಪದಿ ವಿಧಾನ ನೆರವೇರಿಸಿದ ಯುವಕ.!

ಅಂದಿನಿಂದ ಮನೆಯಲ್ಲಿ ನಿತ್ಯ ಒಂದು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಯಿತು. ಗ್ರಾ.ಪಂ.ಸದಸ್ಯ ಚಿತ್ತರಂಜನ್ ಹಾಲ್ದರ್ ಈ ಬಗ್ಗೆ ಅಧಿಕಾರಿಗಳು “ದಾಖಲೆಗಳಲ್ಲಿ ತಪ್ಪು ಮಾಹಿತಿ ಹಾಕಿದ್ದರಿಂದ ಅವರ ಪಿಂಚಣಿ ನಿಂತಿದೆ” ಎಂದರು.

Advertisement

ತಮ್ಮ ತಪ್ಪೆಂದು ಒಪ್ಪಿಕೊಂಡ ಬಳಿಕ ಚಿತ್ತರಂಜನ್ ಹಲ್ದರ್, ಇನ್ನೊಬ್ಬ ಪಂಚಾಯತ್ ಕಾರ್ಯಕರ್ತನ ಹೆಸರನ್ನು ಹೇಳಿದ್ದಾರೆ.

ಮತ್ತೊಂದೆಡೆ ಧೋಲಾ ಪಂಚಾಯತ್ ಮುಖ್ಯಸ್ಥೆ ರೂಬಿಯಾ ಬೀಬಿ ಕಯಾಲ್ ಅವರ ಪತಿ, ಸ್ಥಳೀಯ ತೃಣಮೂಲ ನಾಯಕ ಹೊಸೈನ್ ಕಯಾಲ್ ವೃದ್ಧಾಪ್ಯ ವೇತನ ಸೌಲಭ್ಯ ನಿಲ್ಲಿಸಲು ನಿಲ್ಲಿಸಲು ಪಂಚಾಯತ್ ಸದಸ್ಯರು ಮತ್ತು ಸಿಬ್ಬಂದಿಗಳು ಕಾರಣವೆಂದು ಆರೋಪಿಸಿದ್ದಾರೆ.

ಸೌಲಭ್ಯವನ್ನು ಮತ್ತೆ ಮರು ಪ್ರಾರಂಭಿಸುವ ಪ್ರಕ್ರಿಯೆ ಆರಂಭವಾಗಿದೆ. ಪಂಚಾಯಿತಿ ಕಚೇರಿಗೆ ಈ ಸಂಬಂಧ ದಾಖಲೆಗಳನ್ನು ಕಳುಹಿಸಲಾಗಿದೆ ಎಂದು ಕುಲ್ಪಿ ಬಿಡಿಒ ಸೌರಭ್ ಗುಪ್ತಾ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next