Advertisement

ಒಂದು ವಾರಗಳ ಕಾಲೇಜುಗಳನ್ನು ಬಂದ್ ಮಾಡಿ: ಸಿಎಂಗೆ ಕೈಮುಗಿದು ಮನವಿ ಮಾಡಿದ ಡಿಕೆಶಿ

02:29 PM Feb 08, 2022 | Team Udayavani |

ಬೆಂಗಳೂರು: ಶಿವಮೊಗ್ಗದ ಒಂದು ಕಾಲೇಜಿನಲ್ಲಿ ಭಾರತದ ಧ್ವಜ ಇಳಿಸಿ, ಕೇಸರಿ ಧ್ವಜ ಏರಿಸಿದ್ದಾರೆ. ಇಲ್ಲಿಯ ಪರಿಣತಿಯನ್ನು ಬೇರೆ ದೇಶಗಳಲ್ಲಿ ಕೆಲಸ ಬಳಕೆ ಮಾಡಿಕೊಳ್ಳುತ್ತಿದ್ದರು‌. ಇದೀಗ ಭಾರತದ ಧ್ವಜ ಕೆಳಗಿಳಿಸುವುದು ನೋಡಿದರೆ ತುಂಬಾ ನೋವಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ 44 ವರ್ಷಗಳ ರಾಜಕೀಯ ಜೀವನದಲ್ಲಿ ಇಂದು ಅತಿ ದುಃಖವಾದ ದಿನ. ಆ ದುಃಖ ಹೇಳಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದರು.

ಇದನ್ನೂ ಓದಿ:ಶಿವಮೊಗ್ಗದಲ್ಲಿ ತೀವ್ರ ಸ್ವರೂಪ ಪಡೆದ ಹಿಜಾಬ್- ಕೇಸರಿ ಗಲಾಟೆ: ಕಲ್ಲು ತೂರಾಟ, ಲಾಠಿ ಚಾರ್ಜ್

ರಾಜ್ಯಕ್ಕೆ ಹಿಂದಕ್ಕೆ ಹೋಗುತ್ತಿದೆ‌. ರಾಜ್ಯದಲ್ಲಿ ಶಾಂತಿ ಕಾಪಾಡಬೇಕು. ಸಮಸ್ಯೆ ಬಗೆಹರಿಯುವರಿಗೂ ಒಂದು ವಾರಗಳ ಕಾಲೇಜುಗಳನ್ನು ಬಂದ್ ಮಾಡಿ. ಪೋಷಕರು, ಶಾಲಾ ಆಡಳಿತ ಮಂಡಳಿ, ಜಿಲ್ಲಾ ಆಡಳಿತ ಜೊತೆ ಚರ್ಚೆ ತೀರ್ಮಾನ ಮಾಡಲಿ ಎಂದು ಸಿಎಂಗೆ ಕೈಮುಗಿದು ಮನವಿ ಮಾಡಿದರು.

Koo App

Advertisement

Udayavani is now on Telegram. Click here to join our channel and stay updated with the latest news.

Next