ಮುಂಬಯಿ: ಪದವಿ ಪರೀಕ್ಷೆಯ ಫಲಿತಾಂಶವನ್ನು ಕೂಡಲೇ ಪ್ರಕಟಿಸಿ, ಇಲ್ಲದಿದ್ದಲ್ಲಿ ಯೂನಿರ್ವಸಿಟಿ ಕಟ್ಟಡವನ್ನು ಬಾಂಬ್ ಇಟ್ಟು ಸ್ಫೋಟಗೊಳಿಸಲಾಗುವುದು ಎಂದು ಬೆದರಿಕೆ ಒಡ್ಡಿರುವ ಹಲವಾರು ಇ-ಮೇಲ್ ಗಳು ಬಂದಿರುವುದಾಗಿ ಮುಂಬಯಿ ಯೂನಿರ್ವಸಿಟಿ ತಿಳಿಸಿದೆ.
ಇದನ್ನೂ ಓದಿ:ಸಿದ್ದಕಟ್ಟೆ: ಮಹಿಳೆಯನ್ನು ಮನೆಯೊಳಗೆ ಕೂಡಿ ಹಾಕಿ ಅತ್ಯಾಚಾರ, ಕೊಲೆ ಬೆದರಿಕೆ
ಮುಂಬಯಿ ಯೂನಿರ್ವಸಿಟಿಯ ಪರೀಕ್ಷಾ ಮತ್ತು ಮೌಲ್ಯಮಾಪನ ನಿರ್ದೇಶಕರ ದೂರಿನ ಪ್ರಕಾರ, ಬಿಎ(ಬ್ಯಾಚುಲರ್ ಆಫ್ ಆರ್ಟ್ಸ್), ಬಿಎಸ್ಸಿ (ಬ್ಯಾಚುಲರ್ ಆಫ್ ಸೈನ್ಸ್) ಹಾಗೂ ಬಿ.ಕಾಂ ಪರೀಕ್ಷೆಯ ಫಲಿತಾಂಶವನ್ನು ಕೂಡಲೇ ಬಿಡುಗಡೆಗೊಳಿಸಬೇಕು ಇಲ್ಲದಿದ್ದಲ್ಲಿ ಬಾಂಬ್ ಇಟ್ಟು ಯೂನಿರ್ವಸಿಟಿಯನ್ನು ಧ್ವಂಸಗೊಳಿಸುವುದಾಗಿ ಇ-ಮೇಲ್ ನಲ್ಲಿ ಬೆದರಿಕೆ ಹಾಕಿರುವುದಾಗಿ ತಿಳಿಸಿದ್ದಾರೆ.
ಬಾಂಬ್ ಬೆದರಿಕೆ ಕುರಿತು ವಿಶ್ವವಿದ್ಯಾಲಯದ ಅಧಿಕಾರಿಗಳು ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದು, ಇ-ಮೇಲ್ ಅನ್ನು ಕಳುಹಿಸಿರುವ ಐಪಿ ವಿಳಾಸವನ್ನು ಪತ್ತೆ ಹಚ್ಚಲು ಪೊಲೀಸರು ಪ್ರಯತ್ನಿಸುತ್ತಿರುವುದಾಗಿ ವರದಿ ವಿವರಿಸಿದೆ.
ಜುಲೈ ತಿಂಗಳಿನಲ್ಲಿ ಮುಂಬಯಿ ಯೂನಿರ್ವಸಿಟಿ ಬಿಎಸ್ಸಿ ಅಂತಿಮ ಸೆಮಿಸ್ಟರ್ ನ ಫಲಿತಾಂಶವನ್ನು ಘೋಷಿಸಿತ್ತು. ಕೋವಿಡ್ 19 ಸೋಂಕಿನಿಂದ ಪರೀಕ್ಷೆ ನಡೆಸುವುದು ಮತ್ತು ಫಲಿತಾಂಶ ಘೋಷಿಸುವುದು ವಿಳಂಬವಾಗಿತ್ತು.