Advertisement

ಪಾಕ್‌ಪರ ಘೋಷಣೆ: ವಾಟ್ಸ್‌ಆ್ಯಪ್‌ ಅಡ್ಮಿನ್‌ಗಿಲ್ಲ ಜಾಮೀನು

06:49 AM Jan 30, 2019 | |

ಬೆಂಗಳೂರು: ವಾಟ್ಸ್‌ಆ್ಯಪ್‌ ಗ್ರೂಪ್‌ವೊಂದರಲ್ಲಿ ಸದಸ್ಯರು “ಪಾಕಿಸ್ತಾನ್‌ ಜಿಂದಾಬಾದ್‌’ ಎಂದು ಪೋಸ್ಟ್‌ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆ ವಾಟ್ಸ್‌ಆ್ಯಪ್‌ ಗ್ರೂಪ್‌ ಅಡ್ಮಿನ್‌ಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಲು ಧಾರವಾಡ ಹೈಕೋರ್ಟ್‌ ಪೀಠ ನಿರಾಕರಿಸಿದೆ. ನಿರೀಕ್ಷಣಾ ಜಾಮೀನು ಕೋರಿ ವಾಟ್ಸ್‌ಆ್ಯಪ್‌ ಗ್ರೂಪ್‌ನ ಅಡ್ಮಿನ್‌ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಭಟ್ಟರ ನರಸಾಪುರ ನಿವಾಸಿ ಮುಸ್ತಫಾ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ. ಕೆ.ಎಸ್‌. ಮುದಗಲ್‌ ಅವರಿದ್ದ ನ್ಯಾಯಪೀಠ ವಜಾಗೊಳಿಸಿದೆ.

Advertisement

ಪ್ರಕರಣದಲ್ಲಿ ಆರೋಪಿ ವಿರುದ್ಧ ಇನ್ನೂ ಚಾರ್ಜ್‌ಶೀಟ್‌ ಸಲ್ಲಿಕೆಯಾಗಿಲ್ಲ ಎಂಬ ಕಾರಣಕ್ಕೆ 2018ರ ಡಿ.6ರಂದು ಈಗಾಗಲೇ ಇದೇ ಹೈಕೋರ್ಟ್‌ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸಿದೆ. ಜಾಮೀನು ಮಂಜೂರು ಮಾಡಲು ಆರೋಪಿಯು ಸೂಕ್ತ ಕಾರಣಗಳನ್ನು ಒದಗಿಸಿಲ್ಲ ಎಂದು ಅಭಿಪ್ರಾಯಪಟ್ಟಿರುವ ನ್ಯಾ. ಮುದಗಲ್‌ ಅವರಿದ್ದ ನ್ಯಾಯಪೀಠ ನಿರೀಕ್ಷಣಾ ಜಾಮೀನು ಮಂಜೂರು ಮಾಡಲು ನಿರಾಕರಿಸಿ 2018ರ ಡಿ.27ರಂದು ಆದೇಶಿಸಿದೆ.

ಪ್ರಕರಣವೇನು?: ನನಗೆ ಪರಿಚಯಸ್ಥರಾದ ಮುಸ್ತಫಾ ಹಾಗೂ ನಿರುಪಾದಿಗೌಡ ಇಬ್ಬರು ಸೇರಿ “ಐಎಎಸ್‌ ಫ್ಯಾನ್ಸ್‌-ಬಿ.ನರಸಾಪುರ’ ಹೆಸರಿನ ವಾಟ್ಸ್‌ಆ್ಯಪ್‌ ಗ್ರೂಪ್‌ ಮಾಡಿ ಅಡ್ಮಿನ್‌ಗಳಾಗಿದ್ದಾರೆ. 63 ಸದಸ್ಯರು ಈ ಗ್ರೂಪ್‌ನಲ್ಲಿದ್ದಾರೆ. 2018ರ ಆ.14ರಂದು ಶಬ್ಬಿರ್‌ ಸಾಬ್‌ ಎಂಬುವರು “ಪಾಕಿಸ್ತಾನ್‌ ಜಿಂದಾಬಾದ್‌’ ಎಂಬ ಘೋಷಣೆ ಬರೆದು ಗ್ರೂಪ್‌ನಲ್ಲಿ ಹಾಕಿದ್ದಾರೆ. ಈ ರೀತಿ ಪಾಕಿಸ್ತಾನ ಪರ ಘೋಷಣೆ ಮೂಲಕ ಭಾರತದ ವಿರುದ್ಧ ದ್ವೇಷ ಭಾವನೆ ವ್ಯಕ್ತಪಡಿಸಲಾಗಿದೆ ಎಂದು ಹನುಮನಗೌಡ ಸಕ್ರಗೌಡ ನಾಯಕ್‌ ಎಂಬುವರು ಕನಕಗಿರಿ ಠಾಣೆಯಲ್ಲಿ ದೂರು ದಾಖಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next