Advertisement

ಆರು ದಿನಗಳಿಗೆ ವಿಧಾನಮಂಡಲ ಅಧಿವೇಶನ ಮುಕ್ತಾಯ ಮಾಡಲು ನಿರ್ಧಾರ

04:03 PM Sep 21, 2020 | keerthan |

ಬೆಂಗಳೂರು: ಕೋವಿಡ್-19 ಭೀತಿಯ ಕಾರಣದಿಂದ ಈ ಬಾರಿಯ ವಿಧಾನಮಂಡಲ ಅಧಿವೇಶನವನ್ನು ಆರು ದಿನಗಳಿಗೆ ಮುಕ್ತಾಯ ಮಾಡಲು ನಿರ್ಧರಿಸಲಾಗಿದೆ.

Advertisement

ಇಂದು ನಡೆದ ಸದನ ಸಲಹಾ ಸಮಿತಿ ಸಭೆಯಲ್ಲಿ ಈ ನಿರ್ಧಾರ ಮಾಡಲಾಗಿದೆ. ಇಂದು ಕಲಾಪ ಆರಂಭವಾಗಿದ್ದರೆ ಮುಂದಿನ ಶನಿವಾರ (ಸೆ.26) ಕ್ಕೆ ಮುಕ್ತಾಯವಾಗಲಿದೆ.

ಇದನ್ನೂ ಓದಿ: ಅವರೇನೋ ಶಬ್ದ ಬಳಕೆ ಮಾಡಿದರು, ಇನ್ನು ಈ ರೀತಿ ಮಾತಾಡಬಾರದು ಅಷ್ಟೇ: ವಾರ್ನ್ ಮಾಡಿದ ನಾರಯಣಗೌಡ

ಹಲವಾರು ಶಾಸಕರು ಮತ್ತು ಸಚಿವರುಗಳು ಕೋವಿಡ್ -19 ಸೋಂಕಿನಿಂದ ಬಳಲುತ್ತಿದ್ದು, ಹಲವರು ಇತ್ತೀಚೆಗಷ್ಟೇ ಗುಣಮುಖರಾಗಿದ್ದಾರೆ. ಈ ಎಲ್ಲಾ ಕಾರಣದಿಂದ ಸಿಎಂ ಯಡಿಯೂರಪ್ಪ ಅವರು ಕಲಪವನ್ನು ಮೂರು ದಿನಕ್ಕೆ ಮೊಟಕುಗೊಳಿಸಲು ನಿರ್ಧರಿಸಿದ್ದರು. ಈ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಗೂ ಹೇಳಿದ್ದರು. ಆದರೆ ವಿಪಕ್ಷಗಳು ಕಲಾಪವನ್ನು ಮೂರು ದಿನಕ್ಕೆ ಮೊಟಕು ಗೊಳಿಸಲು ಆಕ್ಷೇಪ ವ್ಯಕ್ತಪಡಿಸಿದ್ದರು.

ಇಂದು ಸದನ ಸಲಹಾ ಸಮಿತಿ ಸಭೆಯಲ್ಲಿ ಚರ್ಚಿಸಿ ಕೊನೆಗೆ ಆರು ದಿನಗಳ ಕಲಾಪ ನಡೆಸಲು ತೀರ್ಮಾನಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next