Advertisement

ಕುಗ್ರಾಮಗಳಲ್ಲೇ ಆರೋಗ್ಯ ಶಿಬಿರ ನಡೆಸಲು ನಿರ್ಧಾರ

04:44 PM May 15, 2022 | Niyatha Bhat |

ಸಾಗರ: ತಾಲೂಕಿನ ಗಡಿ ಪ್ರದೇಶದಲ್ಲಿರುವ ಕುಗ್ರಾಮಗಳಲ್ಲಿಯೇ ಅತ್ಯಂತ ಅಗತ್ಯವಾದ ಉಚಿತ ಆರೋಗ್ಯ ತಪಾಸಣೆ ಮತ್ತು ಆರೋಗ್ಯ ರಕ್ಷಣೆ ಕಾರ್ಯಕ್ರಮವನ್ನು ನಡೆಸಲು ತೀರ್ಮಾನಿಸಲಾಗಿದ್ದು, ಕಳೆದ ಏ.24ರಿಂದ ಮೇ 8ರ ವರೆಗೆ ಅಂತಹ ಸ್ಥಳಗಳಲ್ಲಿ ಶಿಬಿರಗಳಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ ಎಂದು ಕಾಗೋಡು ತಿಮ್ಮಪ್ಪ ಫೌಂಡೇಷನ್‌ನ ಪ್ರಮುಖರಾದ ಡಾ| ರಾಜನಂದಿನಿ ತಿಳಿಸಿದರು.

Advertisement

ತಾಲೂಕು ಕೇಂದ್ರದಿಂದ 80 ಕಿಮೀ ದೂರದಲ್ಲಿರುವ ಚನ್ನಗೊಂಡ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಹೆಬ್ಟಾನಕೇರಿ ಶಿಬಿರ ಉದ್ಘಾಟಿಸಿ ಮಾತನಾಡಿ ಅವರು, ಮೇಘಾನೆ, ಅರ್ಕಳ, ನಾಗವಳ್ಳಿ, ಬಾನ್ಕುಳಿ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಉರುಳುಗಲ್ಲು, ಸಾಲ್ಕೋಡು, ಕರಕೋಡು ಗ್ರಾಮಗಳಲ್ಲಿ ಕೂಡ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು. ಶರಾವತಿ ಅಭಯಾರಣ್ಯ ಪ್ರದೇಶದ ವ್ಯಾಪ್ತಿಗೆ ಬರುವ ರಸ್ತೆ, ವಿದ್ಯುತ್‌ ಸೇರಿ ಹಲವು ಮೂಲ ಸೌಕರ್ಯಗಳಿಂದ ವಂಚಿತರಾಗಿರುವ ಗ್ರಾಮಗಳಲ್ಲಿ ಶಿಬಿರವನ್ನು ಸಂಘಟಿಸಲಾಗಿದೆ. ಅನಾರೋಗ್ಯ ಪೀಡಿತರನ್ನು ಆಸ್ಪತ್ರೆಗೆ ಕರೆತರಲು ಹೆಗಲ ಮೇಲೆ ಹೊತ್ತುಕೊಂಡು ಬರಬೇಕಾದ ಪರಿಸ್ಥಿತಿ ಕೆಲವು ಗ್ರಾಮಗಳಲ್ಲಿ ಇದೆ. ಅಂತಹ ಗ್ರಾಮಗಳಲ್ಲಿ ಆರೋಗ್ಯ ರಕ್ಷಣೆ ಕುರಿತು ಜಾಗೃತಿ ಮೂಡಿಸಲಾಗಿದೆ ಎಂದು ಅವರು ತಿಳಿಸಿದರು.

ನಾಗವಳ್ಳಿಯ ವಿದ್ಯಾ ಶಂಕರ್‌, ಚಂದ್ರಶೇಖರ್‌, ಮಾರ್ಟಿನ್‌, ನಾಗಮ್ಮ, ಮೆಘಾನೆಯ ಲೂಮ, ಅರ್ಕಳದ ಕೇಶವ, ಕೃಷ್ಣ, ಸವಿತಾ ನಾಗೇಂದ್ರ, ಕೊರ್ಲಿಕೊಪ್ಪದ ಕೆ.ವಿ. ಸುರೇಶ್‌, ಕೋವಿಶಿವಪ್ಪ, ರತ್ನ, ಶಿವಕುಮಾರ್‌, ಅಣ್ಣಪ್ಪ, ಎಂ.ಎನ್. ನಾಗರಾಜ್‌, ಅನ್ನಪೂರ್ಣ, ಭಾಗ್ಯ, ಚಂದ್ರಮ್ಮ, ಶಿವಮೂರ್ತಿ, ರಮೇಶ, ಮಂಜುನಾಥ್‌, ಜಾನ್‌, ಪರಸಪ್ಪ, ತ್ಯಾಗರ್ತಿಯ ಟಿ.ಕೆ. ಹನುಮಂತಪ್ಪ, ಗಿರೀಶ್‌, ಪರಶುರಾಮ, ಯಲ್ಲಪ್ಪ, ರೇಣುಕಾ, ಹಮೀದ್‌ ಖಾನ್‌, ಭಾನುಕುಳಿಯ ಸೋಮರಾಜ್‌, ಪದ್ಮರಾಜ್‌, ಚಂದ್ರಕಾಂತ್‌, ಉದಯಕುಮಾರ್‌, ಯಮುನಾ ಉದಯ್‌ ಕುಮಾರ್‌, ವಿಜಯ ಕುಮಾರ್‌, ಸಾಲುಕೋಡು ಗ್ರಾಮದ ರಮೇಶ ಸಾಲುಕೋಡು, ಗಣಪತಿ ಸಾಲುಕೋಡು, ದಿನೇಶ ಸಾಲುಕೋಡು ಹಾಗೂ ಆಯಾ ಸ್ಥಳೀಯ ಆಶಾ ಕಾರ್ಯಕರ್ತೆಯರಾದ ಸಾವಿತ್ರಿ, ಅನುರಾಧ, ಪ್ರೇಮ ಹಾಗೂ ಸಮುದಾಯ ಆರೋಗ್ಯ ಅಧಿಕಾರಿಗಳಾದ ಪಲ್ಲವಿ, ನಗರ ಸಭಾ ಸದಸ್ಯರಾದ ಮಧುಮಾಲತಿ, ವೆಂಕಟೇಶ್‌ ಮೆಳವರಿಗೆ, ಡಾ| ಲೋಹಿತ್‌, ಡಾ| ಸುನೀಲ್‌, ಜ್ಞಾನಸಾಗರ ಪ್ಯಾರಾ ಮೆಡಿಕಲ್‌ ಸೈನ್ಸ್‌ನ ವಿದ್ಯಾರ್ಥಿಗಳು, ಫೌಂಡೇಶನ್‌ನ ವ್ಯವಸ್ಥಾಪಕರಾದ ಅನಂತ್‌ ಹಾಗೂ ಸಿಬ್ಬಂದಿಗಳಾದ ಪ್ರಶಾಂತ್‌ ಕುಮಾರ್‌ ಇತರರು ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next