Advertisement

ಅಲೆಮಾರಿಗಳಿಗೆ ಸೂರು ಕಲ್ಪಿಸದಿದ್ದರೆ ಚುನಾವಣೆ ಬಹಿಷ್ಕಾರಕ್ಕೆ ನಿರ್ಧಾರ

02:58 PM Feb 06, 2023 | Team Udayavani |

ಗಂಗಾವತಿ: ನಗರದ 27ನೇ ವಾರ್ಡಿನಲ್ಲಿ ಅಲೆಮಾರಿ ಜನಾಂಗಗಳಾದ ಬುಡ್ಗಜಂಗಮ, ಸಿಂಧೊಳ್ಳಿ, ಚೆನ್ನದಾಸರು, ಶಿಳ್ಳೆಕ್ಯಾತರು ಸುಮಾರು 50 ವರ್ಷಗಳಿಂದ ವಾಸ ಮಾಡುತ್ತಿದ್ದು, ಯೋಗ್ಯವಿಲ್ಲದ ಗುಡಿಸಲುಗಳಲ್ಲಿ ವಾಸ ಮಾಡುತ್ತಿದ್ದು, ಮಳೆಯಿಂದ, ಚಳಿಯಿಂದ ಅನೇಕ ಮಕ್ಕಳು, ವೃದ್ಧರು ತೊಂದರೆಯನ್ನು ಅನುಭವಿಸುತ್ತಿದ್ದು ಕೂಡಲೇ ವಸತಿ ಕಲ್ಪಿಸದಿದ್ದರೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ 27 ವಾರ್ಡಿನಲ್ಲಿ ಮತದಾನವನ್ನು ಬಹಿಷ್ಕಾರ ಮಾಡಲಾಗುತ್ತದೆ ಎಂದು  ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಶಾಸಕ ಮುನವಳ್ಳಿಗೆ ಮನವಿ ಪತ್ರ ಸಲ್ಲಿಸಲಾಯಿತು.

Advertisement

ಈ ಸಂದರ್ಭದಲ್ಲಿ ಸಮಿತಿಯ ಜಿಲ್ಲಾಧ್ಯಕ್ಷ ಬಸವರಾಜ ಮ್ಯಾಗಳಮನಿ  ಮಾತನಾಡಿ, ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ ಬಡವರಿಗೆ ನಿರ್ಗತಿರಿಕೆ ಸೂರು ಕಲ್ಪಿಸಲು ಆಗಿಲ್ಲ. ಅಲೆಮಾರಿಗಳಿಗೆ ಸಂವಿಧಾನ ಬದ್ಧವಾಗಿ ವಸತಿ, ಬದುಕಲು ಭೂಮಿ ಕಲ್ಪಿಸದೇ ಆಳುವ ಸರಕಾರಗಳು ನಿರ್ಲಕ್ಷ್ಯವನ್ನು ಖಂಡಿಸಿ ಜನಾಂಗವು ವಿಧಾನಸಭೆಯ ಚುನಾವಣೆಯಲ್ಲಿ ಮತದಾನವನ್ನು ಬಹಿಷ್ಕರಿಸಲು ತೀರ್ಮಾನಿಸಿದೆ. ಸರಕಾರ ಕೂಡಲೇ ವಸತಿ ಸೌಕರ್ಯ ಕಲ್ಪಿಸಿ ಮತದಾನ ಬಹಿಷ್ಕರಕ್ಕೆ  ಅವಕಾಶ ನೀಡದೇ ಸೌಕರ್ಯ ನೀಡುವಂತೆ ಆಗ್ರಹಿಸಿದರು.

ಮನವಿ ಸ್ವೀಕರಿಸಿದ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ,ತಾಲೂಕ ಸಮಾಜಕಲ್ಯಾಣಾಧಿಕಾರಿಗಳು ಹಾಗೂ ಪೌರಾಯುಕ್ತರು ಕೂಡಲೇ ಸ್ಥಳ ಪರಿಶೀಲನೆ ಮಾಡಿ, ಶೀಘ್ರದಲ್ಲಿಯೇ ತಮ್ಮ ಬೇಡಿಕೆಗಳನ್ನು ಈಡೇರಿಸಲಾಗುವುದೆಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಕೃಷ್ಣ ಬುಡ್ಗಜಂಗಮ, ಪಿ. ಯಲ್ಲಪ್ಪ ಸಿಂಧೊಳ್ಳಿ, ಮಂಜುನಾಥ ಚೆನ್ನದಾಸರ್, ಹೆಚ್.ಸಿ ಹಂಚಿನಾಳ, ಜಡಿಯಪ್ಪ, ದೇವಪ್ಪ ಕರಡಿ, ರಮೇಶ, ಪಂಪಾಪತಿ, ಶಿವಶಾಂತ, ಬಿಸ್ಮಿಲ್ಲಾಖಾನ್ ಸೇರಿ ಅನೇಕರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next