Advertisement

ಪಾರದರ್ಶಕತೆಯತ್ತ ಗೂಗಲ್‌

12:30 AM Jan 23, 2019 | |

ಹೊಸದಿಲ್ಲಿ: ಜಾಹೀರಾತುಗಳ ಪ್ರದರ್ಶನದ ವೇಳೆ ಟ್ವಿಟರ್‌ ಪಾರದರ್ಶಕತೆಯನ್ನು ಪ್ರದರ್ಶಿಸಿದ ನಂತರದಲ್ಲಿ, ಇದೀಗ ಗೂಗಲ್‌ ಕೂಡ ಇದೇ ನಿಲುವನ್ನು ಅನುಸರಿಸಿದೆ. ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಈ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿದ್ದು, ಜಾಹೀರಾತುಗಳನ್ನು ನೀಡಿದವರು ಯಾರು ಮತ್ತು ಅದಕ್ಕೆ ಮಾಡಿದ ವೆಚ್ಚ ಎಷ್ಟು ಎಂಬ ವಿವರಗಳನ್ನು ಗೂಗಲ್‌ ಬಹಿರಂಗಪಡಿಸದೆ.

Advertisement

 ಅಷ್ಟೇ ಅಲ್ಲ, ಗೂಗಲ್‌ನಲ್ಲಿ ಯಾವುದೇ ಚುನಾವಣೆ ಸಂಬಂಧಿ ಜಾಹೀರಾತು ಪ್ರದರ್ಶಿಸಲು ಬಯಸುವ ಜಾಹೀರಾತು ದಾರರು ಚುನಾವಣಾ ಆಯೋಗವು ನೀಡಿದ ಪ್ರಮಾಣಪತ್ರವನ್ನು ಒದಗಿಸಬೇಕು. ಜಾಹೀರಾತು ಪ್ರದರ್ಶನಕ್ಕೂ ಮುನ್ನ ಗೂಗಲ್‌ ಈ ಜಾಹೀರಾತುದಾರರ ಮೂಲವನ್ನು ಪರಿಶೀಲಿಸುತ್ತದೆ.  ಇದಕ್ಕಾಗಿ ಗೂಗಲ್‌ ಸಮಗ್ರ ರಾಜಕೀಯ ಜಾಹೀರಾತು ಪಾರದರ್ಶಕತೆ ವರದಿಯನ್ನು ಪ್ರಕಟಿಸಿದೆ. ಇದರಲ್ಲಿ ರಾಜಕೀಯ ಜಾಹೀರಾತುಗಳಿಗೆ ಯಾವ ನಿಯಮ ಅನ್ವಯಿಸುತ್ತದೆ ಎಂಬ ಸಮಗ್ರ ವಿವರ ಲಭ್ಯವಿರುತ್ತದೆ. ಜಾಹೀರಾತುದಾರರ ಪರಿ ಶೀಲನೆ ಪ್ರಕ್ರಿಯೆಯು ಫೆಬ್ರವರಿ 14 ರಿಂದ ಜಾರಿಗೆ ಬರಲಿದೆ. ದುರುದ್ದೇಶದಿಂದ ಚುನಾವಣೆಯ ಮೇಲೆ ಪ್ರಭಾವ ಬೀರಲು ಸಾಮಾಜಿಕ ಮಾಧ್ಯಮ ತಾಣಗಳು ಯತ್ನಿಸಿದರೆ, ಕಠಿಣ ಕ್ರಮ ಜಾರಿಗೊಳಿಸುವುದಾಗಿ ಚುನಾವಣಾ ಆಯೋಗವು ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಗೂಗಲ್‌ ಈ ಕಠಿಣ ಕ್ರಮ ಕೈಗೊಂಡಿದೆ.

ಲೋಕಸಭೆ ಚುನಾವಣೆ ಸಮೀಪಿಸಿದ ಹಿನ್ನೆಲೆಯಲ್ಲಿ ಈ ಕ್ರಮ
ಜಾಹೀರಾತು ನೀಡಿದವರು ಯಾರು ಮತ್ತು ವೆಚ್ಚವೆಷ್ಟು ಎಂಬ ಮಾಹಿತಿ

Advertisement

Udayavani is now on Telegram. Click here to join our channel and stay updated with the latest news.

Next