Advertisement
ಮುಂದಿನ ಚುನಾವಣೆ ದೃಷ್ಟಿಯಿಂದ ಪಕ್ಷದ ಇಮೇಜ್ ಬದಲಾಯಿಸುವುದು ಅನಿವಾರ್ಯ ಎಂಬುದು ಬಿಜೆಪಿ ವರಿಷ್ಠರ ಅಂಬೋಣ. ರಾಜ್ಯ ಘಟಕದ ಒಟ್ಟಾರೆ ವಿದ್ಯಮಾನ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರ ನಿರೀಕ್ಷೆಯಂತೆ ಇಲ್ಲ. ಜಾತಿವಾದ, ವಂಶವಾದ ಹಾಗೂ ಭ್ರಷ್ಟಾಚಾರದ ವಿರುದ್ಧ ಪಕ್ಷ ನಿಲ್ಲಬೇಕೆಂಬ ರಾಷ್ಟ್ರೀಯ ನಾಯಕರ ಧೋರಣೆಗೆ ಮೊದಲ ಅಡ್ಡಿ ಕರ್ನಾಟಕದಿಂದಲೇ ಎದುರಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪಕ್ಷಕ್ಕೆ ಸಂಪೂರ್ಣ ಕಾಯಕಲ್ಪ ನೀಡುವ ನಿಟ್ಟಿನಲ್ಲಿ ಈ ಸಭೆ ಮಹತ್ವದ ಪಾತ್ರ ವಹಿಸಲಿದೆ.
Related Articles
Advertisement
ರಾಜ್ಯದಲ್ಲಿ ಆಗ ನಡೆಯುತ್ತಿದ್ದ ಹಿಂದುತ್ವದ ಅಜೆಂಡಾದ ಹೋರಾಟಕ್ಕೂ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದ್ದ ಶಾ, ” ಉತ್ತರ ಪ್ರದೇಶದದಲ್ಲಿ ಬಿಜೆಪಿ ಮರಳಿ ಅಧಿಕಾರಕ್ಕೆ ಬಂದಿದ್ದು ಕೇವಲ ಹಿಂದುತ್ವದ ಮತದಿಂದ ಎಂಬ ಭ್ರಮೆ ಬೇಡ. ಹಿಂದುತ್ವದಿಂದ ಮತ ಕ್ರೋಢಿಕರಣವಾಗುವುದು ಶೇ.30 ರಷ್ಟು ಮಾತ್ರ. ಚುನಾವಣೆ ಗೆಲ್ಲುವುದಕ್ಕೆ ಹಿಂದುತ್ವದ ಜತೆಗೆ ಬೇರೆ ತಂತ್ರಗಾರಿಕೆಯೂ ಅಗತ್ಯ ಎಂದು ಪ್ರತಿಪಾದಿಸಿದ್ದರು. ಆ ತಂತ್ರಗಾರಿಕೆಯ ಬೀಜ ಬಿತ್ತನೆಗೆ ನೆಲಹದಗೊಳಿಸುವ ಮಹತ್ವದ ಸಭೆ ಇದಾಗಲಿದೆ ಎಂಬ ಮಾತು ಬಿಜೆಪಿಯ ಆಂತರಿಕ ವಲಯದಿಂದ ಕೇಳಿ ಬಂದಿದೆ.