Advertisement

ಅಮೃತ ಮಹೋತ್ಸವ ಅದ್ದೂರಿ ಆಚರಣೆಗೆ ನಿರ್ಧಾರ

02:46 PM Aug 05, 2022 | Team Udayavani |

ಆಳಂದ: ತಾಲೂಕು ಆಡಳಿತದಿಂದ ಆ.15 ರಂದು ಸ್ವಾತಂತ್ರ್ಯ ಅಮೃತ ಮಹೋತ್ಸವ ಸಮಾರಂಭವನ್ನು ಅದ್ಧೂರಿಯಾಗಿ ಆಚರಿಸಲು ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ತೀರ್ಮಾನಿಸಲಾಯಿತು.

Advertisement

ತಾಲೂಕು ಆಡಳಿತ ಸೌಧದಲ್ಲಿ ಶಾಸಕ ಸುಭಾಷ ಗುತ್ತೇದಾರ ಅಧ್ಯಕ್ಷತೆಯಲ್ಲಿ ಗುರುವಾರ ಕರೆದ ಅಧಿಕಾರಿಗಳ ಸಭೆಯಲ್ಲಿ ಅಮೃತ ಮಹೋತ್ಸವ ಆಚರಣೆ ರೂಪುರೇಷೆ ಕುರಿತು ಚರ್ಚಿಸಿ ಅದ್ಧೂರಿ ಆಚರಣೆಗೆ ನಿರ್ಧರಿಸಲಾಯಿತು. ಶಾಸಕ ಸುಭಾಷ ಗುತ್ತೇದಾರ ಮಾತ ನಾಡಿ, ಅಮೃತ ಮಹೋತ್ಸವ ಅದ್ಧೂರಿ ಆಚರಣೆಯಲ್ಲಿ ಎಲ್ಲ ಇಲಾಖೆ ಅಧಿಕಾರಿಗಳು ಭಾಗವಹಿಸಿ ಯಶಸ್ವಿಗೊಳಿಸಬೇಕು. ಶ್ರೀರಾಮ ಮಾರುಕಟ್ಟೆಯಲ್ಲಿ ಕೈಗೊಳ್ಳುವ ಸಾರ್ವಜನಿಕ ಧ್ವಜಾರೋಹಣದ ಕಂಬವು 75 ಅಡಿ ಎತ್ತರದ ಕಂಬದಲ್ಲಿ ರಾಷ್ಟ್ರಧ್ವಜಾರೋಣ ಕೈಗೊಳ್ಳಲು ಸಿದ್ಧತೆ ಮಾಡಿಕೊಳ್ಳಿ. ಸಾರ್ವಜನಿಕರನ್ನು ಆಹ್ವಾನಿಸಿ, ಆಸನದ ವ್ಯವಸ್ಥೆ ಮಾಡಿ, ಪೆಂಡಾಲ್‌ ಹಾಕಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ತಹಶೀಲ್ದಾರ್‌ ಯಲ್ಲಪ್ಪ ಸುಬೇದಾರ ಮಾತನಾಡಿ, ಆ.15ರಂದು 8 ಗಂಟೆಗೆ ತಹಶೀಲ್ದಾರ್‌ ಸೇರಿ ಇನ್ನುಳಿದ ಕಚೇರಿಗಳಲ್ಲಿ ಧ್ವಜಾರೋಹಣ ನೆರವೇರಿಸಿ ಬಳಿಕ ಪಟ್ಟಣದ ಶ್ರೀರಾಮ ಮಾರುಕಟ್ಟೆಯಲ್ಲಿ 9ಗಂಟೆಗೆ ರಾಷ್ಟ್ರ ಧ್ವಜಾರೋಹಣ ಮತ್ತು ಸಾರ್ವಜನಿಕ ಸಮಾರಂಭ, ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಸಿದ್ಧತೆ ಮಾಡಿಕೊಳ್ಳಲಾಗುವುದು ಎಂದರು.

ಇದಕ್ಕೂ ಮುನ್ನ ಆ. 13ರಂದು ಬೆಳಗ್ಗೆ 9:30ಗಂಟೆಗೆ ತಾಲೂಕು ಆಡಳಿತಸೌಧದಿಂದ 5ಕಿ.ಮೀ ಅಂತರದ ಪಟ್ಟಟಣದ ಶ್ರೀರಾಮ ಮಾರುಕಟ್ಟೆ ವರೆಗೆ ರಾಷ್ಟ್ರಧ್ವಜದೊಂದಿಗೆ ಬೈಕ್‌ ರ್ಯಾಲಿ ಮೂಲಕ ತಿರಂಗಾ ಯಾತ್ರೆ ನಡೆಸಲು ಉದ್ದೇಶಿಸಲಾಗಿದೆ ಎಂದು ಸಭೆ ಗಮನಕ್ಕೆ ತಂದರು.

ಪುರಸಭೆ ಮುಖ್ಯಾಧಿಕಾರಿ ವಿಜಯ ಮಹಾಂತೇಶ ಹೂಗಾರ ಮಾತನಾಡಿ, ಸಮಾರಂಭ ಕೈಗೊಳ್ಳುವ ಸ್ಥಳದಲ್ಲಿ ಸ್ವತ್ಛತೆ, ನೀರಿನ ವ್ಯವಸ್ಥೆ ಮತ್ತಿತರ ಸೌಲಭ್ಯ ಲಭ್ಯವಾಗುವಂತೆ ನೋಡಿಕೊಳ್ಳಲಾಗುವುದು ಎಂದು ವಿವರಿಸಿದರು.

Advertisement

ಕ್ಷೇತ್ರ ಶಿಕ್ಷಣಾಧಿಕಾರಿ ಚಿತ್ರಶೇಖರ ದೇಗುಲಮಡಿ ಮಾತನಾಡಿ, ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ, ಪದಕ ಪುರಸ್ಕಾರ ಆಯೋಜಿಸಲಾಗುವುದು ಎಂದರು.

ಜಿಪಂ ಎಇಇ ನಾಗಮೂರ್ತಿ ಕೆ. ಶೀಲವಂತ, ಬಿಸಿಎಂ ಅಧಿಕಾರಿ ಬಸವರಾಜ ಕಾಳೆ, ಪಶು ಸಂಗೋಪನಾ ಸಹಾಯಕ ನಿರ್ದೇಶಕ ಡಾ| ಸಂಜಯ ರೆಡ್ಡಿ, ಸಮಾಜ ಕಲ್ಯಾಣಾಧಿಕಾರಿ ಮೋನಮ್ಮ ಸುತಾರ, ಕೈಗಾರಿಕೆ ಅಧಿಕಾರಿ ಜಾಫರ್‌ ಅನ್ಸಾರಿ, ಸಿಡಿಪಿಒ ಶಿವಮೂರ್ತಿ ಕುಂಬಾರ, ಎಡಿಎಲ್‌ ಶಿವಕಾಂತ ಜಿಡಗೇಕರ, ನಾಡ ತಹಶೀಲ್ದಾರ್‌ ಶ್ರೀನಿವಾಸ ಕುಲಕರ್ಣಿ, ನೋಂದಣಿ ಇಲಾಖೆಯ ಶೃತಿ, ತೋಟಗಾರಿಕೆಯ ಶಿವಣ್ಣಾ ಬಿರಾದಾರ, ಅಕ್ಷರದಾಸೋಹ ಅಧಿಕಾರಿ ವಂದನಾ, ರೇಷ್ಮೆ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next