ಬೆಂಗಳೂರು: ಪಂಚ ಲೋಹದ ವಿಗ್ರಹಗಳನ್ನು ಇಟ್ಟುಕೊಂಡರೆ ಬೇಗನೆ ಶ್ರೀಮಂತರಾಗುತ್ತಿರಾ ಎಂದು ಸಾರ್ವಜನಿಕರಿಗೆ ನಂಬಿಸಿ ವಂಚಿಸುತ್ತಿದ್ದ ಇಬ್ಬರು ಆರೋಪಿಗಳನ್ನು ವೈಯಾಲಿ ಕಾವಲ್ ಪೊಲೀಸರು ಬಂಧಿಸಿದ್ದಾರೆ.
ಚಿತ್ರದುರ್ಗ ಮೂಲದ ಮೊಹಮ್ಮದಜ್ ಮುಸ್ತಾಫ್ ಮತ್ತು ಮೊಹಮ್ಮದ್ ಮುಬೀನ್ ಬಂಧಿತರು.
ಆರೋಪಿಗಳಿಂದ ಪಂಚಲೋಹದ ಬಿಂದಿಗೆ, ನಂದಿ ವಿಗ್ರಹ, ಬೈನಾಕುಲರ್ ಹಾಗೂ ಇತರೆ ಹಳೇ ನಾಣ್ಯಗಳನ್ನು ವಶಕ್ಕೆ ಪಡೆಯಲಾಗಿದೆ.
ಮೊಳಕಾಲ್ಮೂರಿನ ವ್ಯಕ್ತಿಯಿಂದ ಆರೋಪಿಗಳು ಲೋಹದ ಬಿಂದಿಗೆ, ನಂದಿ ವಿಗ್ರಹ, ಹಳೇ ನಾಣ್ಯ ಸೇರಿ ವಿವಿಧ ಲೋಹದ ವಸ್ತುಗಳನ್ನು ನಗರಕ್ಕೆ ತಂದಿದ್ದಾರೆ. ಅವುಗಳನ್ನು ಠಾಣೆ ವ್ಯಾಪ್ತಿಯಲ್ಲಿ ಇಟ್ಟುಕೊಂಡು ಸಾರ್ವಜನಿಕರಿಗೆ ತೋರಿಸಿ, ಈ ವಸ್ತುಗಳನ್ನು ಇಟ್ಟು ಕೊಂಡರೆ ಬೇಗನೇ ಶ್ರೀಮಂತರಾಗುತ್ತಿರಾ ಎಂದು ನಂಬಿಸಿ ಮಾರಾಟಕ್ಕೆ ಮುಂದಾಗಿದ್ದರು. ಈ ಮಾಹಿತಿ ಮೇರೆಗೆ ದಾಳಿ ನಡೆಸಿ ಬಂಧಿಸಲಾಗಿದೆ. ವೈಯಾಲಿಕಾವಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.