Advertisement

ಡಿಸೆಂಬರ್ 6-10: ಮಂಗಳೂರು ತಣ್ಣೀರುಬಾವಿ ಬೀಚ್‌ ಉತ್ಸವ-2023

05:09 PM Dec 05, 2023 | Team Udayavani |

ಉಡುಪಿ: ಮಂಗಳೂರಿನ ಹೆಸರಾಂತ ಡ್ಯಾನ್ಸ್‌ ಸಂಸ್ಥೆಯಾಗಿ 23 ವರ್ಷಗಳಿಂದ ವಿಭಿನ್ನ ರೀತಿಯ ಕಾರ್ಯಕ್ರಮಗಳ ಮೂಲಕ ಯುವ ಪ್ರತಿಭೆಗಳಿಗೆ ಅವಕಾಶ ಒದಗಿಸುತ್ತಾ, ಮನೋರಂಜನೆ ನೀಡುತ್ತಿರುವ ಬೇಝೋನ್‌ ಡ್ಯಾನ್ಸ್‌ ಅಕಾಡೆಮಿ ಪ್ರಾಯೋಜಕತ್ವದಲ್ಲಿ ರೋಹನ್‌ ಕಾರ್ಪೊರೇಶನ್‌ ಸಹಭಾಗಿತ್ವದಲ್ಲಿ ಡಿ. 6ರಿಂದ 10ರ ವರೆಗೆ ಮಂಗಳೂರಿನ ತಣ್ಣಿರುಬಾವಿ ಬೀಚ್‌ನಲ್ಲಿ “ಬೀಚ್‌ ಉತ್ಸವ-2023′ ನಡೆಯಲಿದೆ.

Advertisement

ಉತ್ಸವದಲ್ಲಿ ಅಮ್ಯೂಸ್‌ಮೆಂಟ್‌ ಪಾರ್ಕ್‌, ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು, ಫುಡ್‌ ಫೆಸ್ಟಿವಲ್‌ , ಆಟೋ ಕಾರ್ನಿವಲ್, ಡ್ಯಾನ್ಸ್‌, ಸಂಗೀತ, ಫ್ಯಾಶನ್‌ ಶೋ ಇರಲಿದೆ. ಆಕರ್ಷಕ ವೇದಿಕೆಯಲ್ಲಿ ಡಿಜಿಟಲ್‌ ಸೌಂಡ್ಸ್‌ ಮತ್ತು ಲೈಟ್ಸ್‌ಗಳ ಸಮ್ಮಿಲನದೊಂದಿಗೆ ವಿವಿಧ ಮನೋರಂಜನೆಗಳು ಮನ ರಂಜಿಸಲಿವೆ. ‌

ಕನ್ನಡ ಮತ್ತು ತುಳು ಚಿತ್ರರಂಗದ ಪ್ರಸಿದ್ಧ ನಟ, ನಟಿಯರು ಭಾಗವಹಿಸುವರು. ಕಾರ್‌ ಸ್ಟಾಲ್‌, ಎಲೆಕ್ಟ್ರಿಕ್‌ ಬೈಕ್‌ ಸ್ಟಾಲ್‌ಗ‌ಳು ತೆರೆಯಲಿದ್ದು, ಯುವಜನರ ಅತ್ಯಾಕರ್ಷಕ ಸಾಂಸ್ಕೃತಿಕ ವೈಭವವಾಗಿ ಬೀಚ್‌ ಉತ್ಸವ ನೆರವೇರಲಿದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next