Advertisement

ಡಿ.24 ನಿಖೀಲ್‌ ರೈಡರ್‌ ರಿಲೀಸ್‌

10:35 AM Nov 23, 2021 | Team Udayavani |

ನಿಖೀಲ್‌ ಕುಮಾರ್‌ ನಾಯಕರಾಗಿರುವ “ರೈಡರ್‌’ ಚಿತ್ರ ಯಾವಾಗ ಬಿಡುಗಡೆಯಾಗುತ್ತದೆ ಎಂಬ ಕುತೂಹಲ ಸಿನಿ ಪ್ರೇಮಿಗಳಲ್ಲಿತ್ತು.

Advertisement

ಈಗ ಚಿತ್ರತಂಡ ಅದಕ್ಕೆ ಉತ್ತರಿಸಿದೆ. “ರೈಡರ್‌’ ಡಿಸೆಂಬರ್‌ 24ರಂದು ತೆರೆಕಾಣುತ್ತಿದ್ದು, ಈ ಮೂಲಕ ಕ್ರಿಸ್‌ಮಸ್‌ ಗಿಫ್ಟ್ ನೀಡಿದೆ. ಈ ಚಿತ್ರವನ್ನು ತೆಲುಗು ನಿರ್ದೇಶಕ ವಿಜಯ್‌ ಕುಮಾರ್‌ ಕೊಂಡ ನಿರ್ದೇಶನ ಮಾಡಿದ್ದಾರೆ. ಈ ಚಿತ್ರವನ್ನು ಲಹರಿ ಹಾಗೂ ಶಿವನಂದಿ ಬ್ಯಾನರ್‌ನಲ್ಲಿ ಚಂದ್ರು ಮನೋಹರನ್‌ ಹಾಗೂ ಸುನೀಲ್‌ ಗೌಡ ಸೇರಿ ನಿರ್ಮಿಸಿದ್ದಾರೆ.

ನಿಖೀಲ್‌ ಅವರನ್ನು ಹೀಗೆಯೇ ತೋರಿಸಬೇಕು, ಈ ತರಹದ್ದೇ ಗೆಟಪ್‌ ಬೇಕು ಕಾರಣಕ್ಕೆ ಯಾವುದಕ್ಕೂ ಕಾಂಪ್ರಮೈಸ್‌ ಆಗದೇ ಸಿನಿಮಾ ನಿರ್ಮಿಸಿದ್ದಾರೆ. ಇದೊಂದು ಪಕ್ಕಾ ಕಮರ್ಶಿಯಲ್‌ ಎಂಟರ್‌ಟೈನ್ಮೆಂಟ್‌ ಸಿನಿಮಾವಾಗಿದ್ದು, ಪಕ್ಕಾ ಪೈಸಾ ವಸೂಲ್‌ ಸಿನಿಮಾವಾಗಲಿದೆ ಎಂಬುದು ಚಿತ್ರತಂಡದ ಮಾತು.

ಇದನ್ನೂ ಓದಿ:- ಉಡುಪಿ: ಮಣ್ಣಿನಡಿಯಲ್ಲಿ ಚಿನ್ನಾಭರಣ ಹೂತ್ತಿಟ್ಟಿದ್ದ ಕಳ್ಳನ ಬಂಧನ

“ರೈಡರ್‌’ ಚಿತ್ರದಲ್ಲಿ ನಿಖೀಲ್‌ ಇಲ್ಲಿ ಒಬ್ಬ ಬಾಸ್ಕೆಟ್‌ ಬಾಲ್‌ ಪ್ಲೇಯರ್‌ ಆಗಿ ಕಾಣಿಸಿಕೊಂಡಿದ್ದಾರೆ. ಬಾಸ್ಕೆಟ್‌ ಬಾಲ್‌ ಪ್ಲೇಯರ್‌ ಲೈಪ್‌ನಲ್ಲಿ ಏನೇನು ನಡೆಯುತ್ತ ದೆ ಅನ್ನೋದರ ಸುತ್ತ ಸಿನಿಮಾದ ಕಥೆ ನಡೆಯುತ್ತದೆ. ಇದರಲ್ಲಿ ನಿಖೀಲ್‌ ಅವರದು ಮಧ್ಯಮ ವರ್ಗದ ಹುಡುಗನ ಪಾತ್ರ.

Advertisement

ಇದರಲ್ಲಿ ಲವ್‌, ಆ್ಯಕ್ಷನ್‌, ಫ್ಯಾಮಿಲಿ ಸೆಂಟಿಮೆಂಟ್‌, ಎಮೋಶನ್ಸ್‌ ಎಲ್ಲವೂ ಇರಲಿದೆ. ಈ ಸಿನಿಮಾವನ್ನು ಕನ್ನಡ, ತೆಲುಗು ಎರಡೂ ಭಾಷೆಯಲ್ಲೂ ಮಾಡಲಾಗಿದೆ. ಕನ್ನಡ, ತೆಲುಗು ಚಿತ್ರರಂಗದ ಪ್ರಸಿದ್ಧ ಕಲಾವಿದರು, ತಂತ್ರಜ್ಞರು ಸಿನಿಮಾದಲ್ಲಿ ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next