Advertisement
ಎರಡು ಭಾಗಗಳಲ್ಲಿ ನಡೆಸಲ್ಪಟ್ಟ ಸಮಾರಂಭದಲ್ಲಿ ಪೂರ್ವಾಹ್ನ ಸೈಂಟ್ ಜಾನ್ ಇನ್‌ಸ್ಟಿಟ್ಯೂಟ್ ಆಫ್ ಹ್ಯೂಮ್ಯಾನಿಟಿಸ್ ಆ್ಯಂಡ್ ಸೈನ್ಸ್ ಹಾಗೂ ಸೈಂಟ್ ಜಾನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಆ್ಯಂಡ್ ರಿಸರ್ಚ್ ವಿಭಾಗದ ಘಟಿಕೋತ್ಸವ ನೆರವೇರಿಸಲಾಗಿದ್ದು, ಮೌಂಟ್ ಕಾರ್ಮೆಲ್ ಚರ್ಚ್ ಬಾಂದ್ರಾ ಇದರ ಧರ್ಮಗುರು ರೆ| ಫಾ| ರೂಬೆನ್ ಟೆಲ್ಲಿಸ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಪದವಿ ಪ್ರದಾನಗೈದು ಶುಭ ಹಾರೈಸಿದರು. ಅಪರಾಹ್ನ ಸೈಂಟ್ ಜಾನ್ ಕಾಲೇಜ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಮ್ಯಾನೇಜ್‌ಮೆಂಟ್ ಮತ್ತು ಸೈಂಟ್ ಜಾನ್ ಕಾಲೇಜ್ ಆಫ್ ಫಾರ್ಮಸಿ ಆ್ಯಂಡ್ ರಿಸರ್ಚ್ (ಎಸ್‌ಜೆಸಿಎಫ್‌ಆರ್) ವಿದ್ಯಾರ್ಥಿಗಳ ವಾರ್ಷಿಕ ಪದವಿ ಪ್ರದಾನ ಸಮಾರಂಭದಲ್ಲಿ ವಿಶ್ವವಿದ್ಯಾನಿಲಯ ಮುಂಬಯಿ ಇದರ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಮುಖ್ಯಸ್ಥೆ ಡಾ| ಅನುರಾಧಾ ಮಜುಂದಾರ್ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಶುಭ ಹಾರೈಸಿದರು.
Related Articles
Advertisement
ಸೈಂಟ್ ಜಾನ್ ಇಂಟರ್‌ನ್ಯಾಶನಲ್ ಸಿಬಿಎಸ್‌ಇ ಶಾಲಾ ವಿದ್ಯಾರ್ಥಿಗಳ ಸ್ಕೂಲ್ ಬ್ರ್ಯಾಂಡ್ ನ ನಿನಾದ ದೊಂದಿಗೆ ಪದವೀಧರ ವಿದ್ಯಾರ್ಥಿಗಳು ಮತ್ತು ಗಣ್ಯರನ್ನು ಸಭಾಂಗಣಕ್ಕೆ ಕರೆತರಲಾಯಿತು. ಬಳಿಕ ಜಾಗತಿಕ ಶಾಂತಿ ನೆಮ್ಮದಿಯ ಬಾಳಿಗಾಗಿ ಸಾರ್ವತ್ರಿಕವಾಗಿ ಪ್ರಾರ್ಥಿಸಲಾಯಿತು. ಸರಸ್ವತಿ ವಂದನೆಯೊಂದಿಗೆ ದೀಪ ಬೆಳಗಿಸಿ ಸಮಾರಂಭವನ್ನು ಉದ್ಘಾಟಿಸಲಾಯಿತು. ಆಲ್ಬರ್ಟ್ ಡಬ್ಲ್ಯು. ಡಿ’ಸೋಜಾ ಸ್ವಾಗತಿಸಿ, ಪ್ರಸ್ತಾವನೆಗೈದರು.
ರಾಜ್ಯಪಾಲ, ಗೌರವಾನ್ವಿತ ಕುಲಪತಿ ಭಗತ್ ಸಿಂಗ್ ಕೋಶ್ಯಾರಿ ಮತ್ತು ಮುಂಬಯಿ ವಿವಿ ಉಪ ಕುಲಪತಿ ಪ್ರೊ| ಸುಹಾಸ್ ಪಡ್ನೇಕರ್ ಅವರ ವೀಡಿಯೋ ಭಾಷಣವನ್ನು ಪ್ರದರ್ಶಿಸಲಾಯಿತು. ಎಸ್‌ಜೆಸಿ ಹ್ಯೂಮ್ಯಾನಿಟಿಸ್ ಆ್ಯಂಡ್ ಸೈನ್ಸ್‌ನ 233 ವಿದ್ಯಾರ್ಥಿಗಳು ಮತ್ತು ಎಸ್‌ಜೆಸಿಐಎಂಆರ್‌ನ 41 ವಿದ್ಯಾರ್ಥಿಗಳು ಹಾಗೂ ಎಸ್‌ಜೆಸಿಇಎಫ್‌ನ 584 ವಿದ್ಯಾರ್ಥಿಗಳು ಪದವಿ ಪ್ರಮಾಣಪತ್ರ ಸ್ವೀಕರಿಸಿದರು. ಆಯಾಯ ಕಾಲೇಜುಗಳ ಪ್ರಾಂಶುಪಾಲರು ವಂದಿಸಿದರು. ರಾಷ್ಟ್ರಗೀತೆಯೊಂದಿಗೆ ಘಟಿಕೋತ್ಸವ ಸಮಾಪನಗೊಂಡಿತು. ಕೊನೆಯಲ್ಲಿ ವಿಭಾಗವಾರು ಫೋಟೋ ಸೆಷನ್ ನಡೆಸಿ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ, ಸ್ಮರಣಿಗಳನ್ನಿತ್ತು ಗೌರವಿಸಲಾಯಿತು.
ಬಿಎ, ಬಿಕಾಂ, ಬಿಎಎಫ್, ಬಿಬಿಐ, ಬಿಎಫ್‌ಎಂ, ಬಿಎಂಎಸ್, ಬಿಎಸ್‌ಸಿ, ಬಿಎಸ್‌ಸಿ-ಸಿಎಸ್, ಬಿಎಸ್‌ಸಿ-ಐಟಿ, ಬಿಎಸ್‌ಸಿ ಹೊಟೇಲ್ ಮ್ಯಾನೇಜ್‌ಮೆಂಟ್, ಮ್ಯಾನೇಜ್‌ಮೆಂಟ್ ಸ್ಟಡೀಸ್, ಎಂಜಿನಿಯ ರಿಂಗ್ ಮತ್ತು ಫಾರ್ಮಸಿಯಲ್ಲಿ ಉನ್ನತ ಶಿಕ್ಷಣದಿಂದ ಹಿಡಿದು ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಸಸ್ಯಶಾಸ್ತ್ರ, ಹಾಸ್ಪಿಟಾಲಿಟಿ ಸ್ಟಡೀಸ್ ಮತ್ತು ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಸೈಕಲಾಜಿಯಂತಹ ಪದವಿ ವಿಭಾಗ ಹೊಂದಿದ್ದೇವೆ. ಎ ಸ್ಟೇಟ್ ಬೋರ್ಡ್ ಜೂನಿಯರ್ ಕಾಲೇಜ್, ಸ್ಟೇಟ್ ಬೋರ್ಡ್ ಸ್ಕೂಲ್ ಮತ್ತು ಸಿಬಿಎಸ್‌ಸಿ ಸ್ಕೂಲ್, ಸೈಂಟ್ ಜಾನ್ ಪಾಲ್ಘರ್ ಕ್ಯಾಂಪಸ್ ಮುಂದಿನ ಪೀಳಿಗೆಯನ್ನು ಸಶಕ್ತಗೊಳಿಸಲು ಸನ್ನದ್ಧ ವಾಗಿದೆ. -ಆಲ್ಬರ್ಟ್ ಡಬ್ಲ್ಯು. ಡಿ’ಸೋಜಾ ಕಾರ್ಯಾಧ್ಯಕ್ಷರು, ಅಲ್ಡೇಲ್ ಎಜುಕೇಶನ್ ಟ್ರಸ್ಟ್ ಸಮೂಹ ಸಂಸ್ಥೆ
-ಚಿತ್ರ-ವರದಿ: ರೋನ್ಸ್ ಬಂಟ್ವಾಳ್