Advertisement
ಹೌದು.. ಕೊಪ್ಪಳ ಜಿಲ್ಲೆಯು ಪದೇ ಪದೆ ಬರಕ್ಕೆ ತುತ್ತಾಗಿ ರೈತರು ಕಣ್ಣೀರಿನಲ್ಲಿ ಕೈ ತೊಳೆಯುವ ಸ್ಥಿತಿಯಲ್ಲಿದ್ದರು. ಮಳೆಯ ಕೊರತೆಯಿಂದ ಬಿತ್ತನೆ ಮಾಡಿದ ಬೆಳೆಯೂ ರೈತರ ಕೈ ಸೇರದಂತ ಪರಿಸ್ಥಿತಿ ಎದುರಾಗಿತ್ತು. ಅಲ್ಲದೇ, ರಾಜ್ಯದಲ್ಲೂ ಪದೇ ಪದೆ ಬರದ ಪರಿಸ್ಥಿತಿ ಎದುರಾಗಿದ್ದರಿಂದ ಸಹಕಾರಿ ಸೇರಿದಂತೆ ವಾಣಿಜ್ಯ ಬ್ಯಾಂಕ್‌ಗಳಲ್ಲಿ ಮಾಡಿದ್ದ ಸಾಲ, ಬಡ್ಡಿ ಏರುತ್ತಲೇ ಇತ್ತು. ಇದರಿಂದ ದಿಕ್ಕೆ ತೋಚದಂತಾಗಿ ಆತ್ಮಹತ್ಯೆಗೆ ಮುಂದಾಗುತ್ತಿದ್ದ ರೈತರ ಹಿತ ಕಾಯಲು ಈ ಹಿಂದಿನ ಮೈತ್ರಿ ಸರ್ಕಾರದಲ್ಲಿ ಸಿಎಂ ಆಗಿದ್ದ ಎಚ್.ಡಿ. ಕುಮಾರಸ್ವಾಮಿ ಅವರು ಚುನಾವಣಾ ಪೂರ್ವದ ಭರವಸೆಯಂತೆ ರೈತರ ಸಾಲ ಮನ್ನಾ ಘೋಷಣೆ ಮಾಡಿದ್ದರು. ಆದರೆ ನೂರೆಂಟುನಿಯಮ ಜಾರಿ ಮಾಡಿದ್ದರಿಂದ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿತ್ತು. ಕೊನೆಗೂ ನಿಯಮಗಳನ್ನು ಸರಳೀಕರಣಗೊಳಿಸಿದ್ದರ ಫಲವಾಗಿ ಸಾಲ ಮನ್ನಾದ ಹಾದಿಗೆ ಸುಗಮವಾಗಿದೆ. ರಾಜ್ಯದಲ್ಲಿ ಸರ್ಕಾರ ಬದಲಾದರೂ ಜಿಲ್ಲೆಯಲ್ಲಿನ ರೈತರ ಸಾಲ ಮನ್ನಾದ ಪ್ರಗತಿ ಉತ್ತಮ ರೀತಿಯಲ್ಲಿದೆ. 39,555 ರೈತರ ಸಾಲ ಮನ್ನಾ: ಜಿಲ್ಲೆಯ 57,157 ರೈತರು ವಾಣಿಜ್ಯ ಬ್ಯಾಂಕ್‌ಗಳಲ್ಲಿ ಸಾಲ ಪಡೆದಿದ್ದರು. ಈ ಪೈಕಿ 46,412 ರೈತರು ಕೃಷಿ ಸಾಲ ಮನ್ನಾ ವ್ಯಾಪ್ತಿಗೆ ಒಳಪಡಲಿದ್ದಾರೆ ಎನ್ನುವ ನಿರೀಕ್ಷೆ ಇಡಲಾಗಿತ್ತು. ಈ ಪೈಕಿ 40483 ರೈತರು ಸಾಲ ಮನ್ನಾ ಯೋಜನೆಗೆ ಅರ್ಹತೆ ಪಡೆದಿದ್ದರಿಂದ ಅವರಲ್ಲಿ ಪ್ರಸ್ತುತ 39,555 ರೈತರ ಸಾಲ ಮನ್ನಾ ಮಾಡಲಾಗಿದೆ. ವಿವಿಧ ಹಂತದಲ್ಲಿ ಸಾಲವನ್ನು ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗಿದ್ದು, ರೈತರ ಖಾತೆಯಲ್ಲಿನ ಸಾಲಕ್ಕೆ ಹೊಂದಾಣಿಕೆ ಮಾಡಿದೆ.
Related Articles
Advertisement
ಸಾಲ ಮನ್ನಾ ಆಗಬೇಕಿದೆ: ಜಿಲ್ಲೆಯಲ್ಲಿನ ಹಲವು ರೈತರ ಸಾಲ ಮನ್ನಾ ಪ್ರಕ್ರಿಯೆ ನಡೆಯಬೇಕಿವೆ. ಕೆಲವೊಂದು ಬ್ಯಾಂಕ್‌ಗೆ ನೀಡಿದ ಮಾಹಿತಿ ಹಾಗೂ ಆಧಾರ್ ಜೋಡಣೆಯಾಗಿಲ್ಲ. ಹೀಗಾಗಿ ಹಲವು ಸಾಲ ಮನ್ನಾದ ವ್ಯಾಪ್ತಿಯಿಂದ ಹೊರಗುಳಿದಿದ್ದಾರೆ. ಅವರಿಗೆ ಇನ್ನೂ ಪರಿಪೂರ್ಣ ಮಾಹಿತಿ ಕೊರತೆಯೂ ಇದೆ. ಇನ್ನೂ ಹಲವು ರೈತರು ದಾಖಲೆಗಳ ಸಲ್ಲಿಕೆಯಲ್ಲಿ ಸ್ವಲ್ಪ ತೊಂದರೆ ಎದುರಿಸುತ್ತಿದ್ದಾರೆ. ಜೊತೆಗೆ ಸಹಕಾರಿ ಬ್ಯಾಂಕ್‌ಗಳ ಸಾಲ ಮನ್ನಾ ಪ್ರಗತಿಯೂ ಸಾಗುತ್ತಿದೆ. ಒಟ್ಟಿನಲ್ಲಿ ಜಿಲ್ಲೆಯಲ್ಲಿನ ಸಾಲ ಮನ್ನಾದ ಪ್ರಗತಿ ಅವಲೋಕಿಸಿದರೆ ಶೇ. 87ರಷ್ಟು ಪ್ರಗತಿ ಸಾಧಿ ಸಿ ರೈತರ ಖಾತೆಗೆ ನೇರವಾಗಿ ಸರ್ಕಾರದಿಂದ ಸಾಲ ಮನ್ನಾದ ಹಣ ಜಮೆ ಮಾಡಲಾಗಿದ್ದು, ಬ್ಯಾಂಕ್ ಅದನ್ನು ಸಾಲ ಮನ್ನಾ ವ್ಯಾಪ್ತಿಗೆ ಒಳಪಡಿಸಿ ಖಾತೆಯಿಂದಪಡೆದುಕೊಂಡಿ.
-ದತ್ತು ಕಮ್ಮಾರ