Advertisement

ಸಾಲ ವಿತರಣೆಗೆ ಒಮಿಕ್ರಾನ್‌ ನೆಪ ಬೇಡ

11:38 PM Jan 16, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿ ಒಮಿಕ್ರಾನ್‌ ಹಾವಳಿಯು ರೈತರ ಸಾಲ ವಿತರಣೆಗೆ ಅಡ್ಡಿಯಾಗದಂತೆ ನೋಡಿಕೊಳ್ಳಲು 30 ಲಕ್ಷ ರೈತರಿಗೆ ಸಾಲ ವಿತರಣೆಗಾಗಿ ಡಿಸಿಸಿ ಬ್ಯಾಂಕ್‌ಗಳಿಗೆ ಗುರಿ ನೀಡಲಾಗಿದೆ.

Advertisement

ಜತೆಗೆ, ರೈತರು ಸಾಲಕ್ಕಾಗಿ ಹೆಸರು ನೋಂದಣಿ ಮಾಡಿ ಕೊಳ್ಳಲು ಹೊಸ ಸಾಫ್ಟ್ವೇರ್‌ನಲ್ಲಿ ತೊಂದರೆಯಾಗುತ್ತಿದ್ದ ಕಾರಣ ಮಾರ್ಚ್‌ 31ರ ವರೆಗೆ ಹಳೆ ಪದ್ಧತಿ ಯಲ್ಲೇ ಅವಕಾಶ ಕಲ್ಪಿಸಲಾಗಿದೆ.

ಪ್ರಸ್ತುತ 19.04 ಲಕ್ಷ ರೈತರಿಗೆ 13,347 ಸಾವಿರ ಕೋ. ರೂ. ಸಾಲ ವಿತರಣೆಯಾಗಿದ್ದು, ಜನವರಿ ಅಂತ್ಯಕ್ಕೆ 20 ಲಕ್ಷ ರೈತರಿಗೆ ಹಾಗೂ ಜೂನ್‌ ಒಳಗೆ 30 ಲಕ್ಷ ರೈತರಿಗೆ 20,810 ಕೋಟಿ ರೂ. ಸಾಲ ವಿತರಿಸಬೇಕು ಎಂದು ಕಟ್ಟುನಿಟ್ಟಾಗಿ ಸೂಚಿಸಲಾಗಿದೆ.

ಡಿಸಿಸಿ ಸಭೆಯಲ್ಲೂ ನಿರ್ಧಾರ
ಬೆಳೆ ಸಾಲ ವಿಷಯದಲ್ಲಿ ಯಾವುದೇ ಆತಂಕ ಮೂಡದಂತೆ ನೋಡಿಕೊಳ್ಳಲು ಡಿಸಿಸಿ ಬ್ಯಾಂಕ್‌ಗಳ ಅಧ್ಯಕ್ಷರ ಸಭೆಯಲ್ಲೂ ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಹಿಂದಿನ ವರ್ಷಗಳ ಮಾಸಿಕವಾರು ಬೆಳೆ ಸಾಲ ಬೇಡಿಕೆಯ ಮಾಹಿತಿ ಆಧಾರದಲ್ಲಿ ಯಾವ್ಯಾವ ತಿಂಗಳಿಗೆ ಎಷ್ಟೆಷ್ಟು ಸಾಲದ ಅಗತ್ಯವಿದೆ ಎಂದು ಸಿದ್ಧಪಡಿಸಿರುವ ಪಟ್ಟಿ ಪ್ರಕಾರ ಸಾಲ ವಿತರಣೆ ಬಗ್ಗೆ ನಿಗಾ ವಹಿಸಲು ನಿರ್ದೇಶನ ನೀಡಲಾಗಿದೆ.

Advertisement

ಇದನ್ನೂ ಓದಿ:ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಸಾಧ್ಯವಿಲ್ಲ: ಡಾ| ಅಶ್ವತ್ಥ ನಾರಾಯಣ

3 ಲಕ್ಷ ಹೊಸ ರೈತರಿಗೆ ಸಾಲ
ಒಟ್ಟಾರೆ 30 ಲಕ್ಷ ರೈತರ ಪೈಕಿ ಮೂರು ಲಕ್ಷ ಹೊಸ ರೈತರಿಗೆ ಸಾಲ ನೀಡಲು ತಿಳಿಸಲಾಗಿದ್ದು ಹೆಚ್ಚುವರಿಯಾಗಿ ರೈತರು ಸಾಲ ಬಯಸಿದರೂ ನೀಡಬೇಕು. ಅದಕ್ಕೆ ಬೇಕಾದ ಅನುಮೋದನೆ ಆರ್ಥಿಕ ಇಲಾಖೆಯಿಂದ ಪಡೆದು ಕೊಳ್ಳಲಾಗುವುದು ಎಂಬ ಭರವಸೆ ನೀಡಲಾಗಿದೆ.

2020-21 ನೇ ಸಾಲಿನಲ್ಲಿ ನಿಗದಿತ ಗುರಿಗಿಂತ 1.31 ಲಕ್ಷ ರೈತರಿಗೆ 1,960 ಕೋಟಿ ರೂ. ಹೆಚ್ಚುವರಿ ಸಾಲ ವಿತರಿಸಲಾಗಿತ್ತು. 24.36 ಲಕ್ಷ ರೈತರಿಗೆ 15,300 ಕೋಟಿ ರೂ. ಸಾಲ ನೀಡುವ ಗುರಿ ಇತ್ತಾದರೂ 25.67 ಲಕ್ಷ ರೈತರಿಗೆ 17,260 ಕೋಟಿ ರೂ. ಸಾಲ ನೀಡಲಾಗಿತ್ತು.

ಕೊರೊನಾ ನೆಪವೊಡ್ಡಿ ರೈತರ ಸಾಲ ವಿತರಣೆ ಪ್ರಕ್ರಿಯೆ ವಿಳಂಬ ಮಾಡುವಂತಿಲ್ಲ. ರೈತರಿಗೆ ಸಕಾಲದಲ್ಲಿ ಸಾಲ ವಿತರಿಸಬೇಕು. ಜೂನ್‌ ಒಳಗೆ ನಿಗದಿತ ಗುರಿ ತಲುಪಬೇಕೆಂದು ಡಿಸಿಸಿ ಬ್ಯಾಂಕ್‌ಗಳಿಗೆ ಸೂಚಿಸಲಾಗಿದೆ. ಹೊಸ ಸಾಫ್ಟ್ವೇರ್‌ನಿಂದ ಎದುರಾಗಿದ್ದ ಸಮಸ್ಯೆ ಕಾರಣದಿಂದ ಹಳೆಯ ಪದ್ಧತಿಯಲ್ಲೇ ಮಾರ್ಚ್‌ವರೆಗೂ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ.
– ಎಸ್‌.ಟಿ.ಸೋಮಶೇಖರ್‌, ಸಹಕಾರ ಸಚಿವ

 

 

Advertisement

Udayavani is now on Telegram. Click here to join our channel and stay updated with the latest news.

Next