Advertisement
ಬ್ಯಾಂಕುಗಳಿಗೆ ನೀಡಬೇಕಾಗಿರುವ ಸಾಲ ತೀರಿಸುವ ಪ್ರಕರಣಕ್ಕೆ ಸಂಬಂಧಿಸಿದಂತೆ 3,101 ಕೋಟಿ ರೂ. ಹಣ ಠೇವಣಿ ಇರಿಸಬೇಕೆಂಬ ಡಿಆರ್‌ಎಟಿ ಆದೇಶ ಪ್ರಶ್ನಿಸಿ ವಿಜಯ್ ಮಲ್ಯ ಸಲ್ಲಿಸಿದ್ದ ಅರ್ಜಿ ಕುರಿತ ಕಾಯ್ದಿರಿಸಿದ್ದ ಆದೇಶವನ್ನು ಶುಕ್ರವಾರ ಪ್ರಕಟಿಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಹಾಗೂ ನ್ಯಾ. ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ, ಮಲ್ಯ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿತು.
ಕಂಪನಿ ಸಕಾಲದಲ್ಲಿ ಸಾಲ ತೀರಿಸಿಲ್ಲವೆಂಬ ಕಾರಣಕ್ಕೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿ 12 ಬ್ಯಾಂಕುಗಳು ಸಾಲ
ವಸೂಲಾತಿ ಮೇಲ್ಮನವಿ ನ್ಯಾಯಮಂಡಳಿ’ (ಡಿಆರ್‌ಎಟಿ) ಮೊರೆ ಹೋಗಿದ್ದವು. ವಿಚಾರಣೆ ನಡೆಸಿದ್ದ ಡಿಆರ್‌ಟಿ, ವಾರ್ಷಿಕ ಬಡ್ಡಿ ದರ ಶೇ 15.2ರಂತೆ 6,203 ಕೋಟಿ ಪಾವತಿ ಮಾಡಬೇಕೆಂದು 2013ರ ಮೇ 31ರಂದು ಆದೇಶಿಸಿತ್ತು. ಆದರೆ, ಈ ಆದೇಶವನ್ನು ಪ್ರಶ್ನಿಸಿ ಚೆನ್ನೈನಲ್ಲಿರುವ ಸಾಲ ವಸೂಲಾತಿ ಮೇಲ್ಮನವಿ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿದ್ದ ವಿಜಯ್ ಮಲ್ಯ “ಸಾಲಕ್ಕೆ ನನ್ನಿಂದ ಬಲವಂತವಾಗಿ ಭದ್ರತೆ ಪಡೆದುಕೊಳ್ಳಲಾಗಿದೆ. ಕಾನೂನು ಪ್ರಕಾರ ನನ್ನ ಭದ್ರತೆ ಸಿಂಧು ಆಗುವುದಿಲ್ಲ. ಒಂದು ವೇಳೆ ಬ್ಯಾಂಕುಗಳು ಎಲ್ಲ ಕಂತುಗಳನ್ನು ಸಮಯಕ್ಕೆ ಸರಿಯಾಗಿ ಕೊಟ್ಟಿದ್ದರೆ, ಕಂಪೆನಿ ಮುಚ್ಚುವ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು
ವಾದಿಸಿದ್ದರು. ಆದರೆ, ಇದನ್ನು ಒಪ್ಪದ ಡಿಆರ್‌ಎಟಿ 3,101 ಕೋಟಿ ರೂ. ಹಣವನ್ನು ಠೇವಣಿ ಇಡುವಂತೆ ಆದೇಶಿಸಿತ್ತು. ಅದನ್ನು ಪ್ರಶ್ನಿಸಿ ವಿಜಯ್ ಮಲ್ಯ ಹೈಕೋರ್ಟ್ ಮೆಟ್ಟಿಲೇರಿದ್ದರು.