Advertisement
ಅ.1ರಿಂದ ಅಂದರೆ ಶನಿವಾರದಿಂದ ಕ್ರೆಡಿಟ್ ಕಾರ್ಡ್ ವಿತರಣೆ ಮಾಡುವವರು ತಮ್ಮಿಷ್ಟದಂತೆ ಗ್ರಾಹಕರ ಕ್ರೆಡಿಟ್ ಕಾರ್ಡ್ ಮಿತಿಯನ್ನು ಹೆಚ್ಚಳ ಮಾಡುವಂತಿಲ್ಲ. ಕಾರ್ಡ್‌ದಾರನ ಲಿಖಿತ ಅನುಮತಿ ಪಡೆದ ಬಳಿಕವಷ್ಟೇ ಮಿತಿ ಹೆಚ್ಚಳ ಮಾಡಬೇಕು.
Related Articles
Advertisement
ಕಾರ್ಡ್ ವಿತರಣೆಯಾಗಿ 30 ದಿನಗಳ ಬಳಿಕವೂ ಅದನ್ನು ಆ್ಯಕ್ಟಿವೇಟ್ ಮಾಡದೇ ಇದ್ದರೆ ಕ್ರೆಡಿಟ್ ಕಾರ್ಡ್ ವಿತರಣೆ ಮಾಡುವವರು ಕಾರ್ಡ್ ಹೊಂದಿರುವಾತನ ಒಪ್ಪಿಗೆಯನ್ನು ಒಟಿಪಿ (ಒನ್ ಟೈಂ ಪಾಸ್‌ವರ್ಡ್) ಮೂಲಕ ಪಡೆಯಬೇಕು. ಗ್ರಾಹಕ ಒಪ್ಪಿಗೆ ನೀಡದಿದ್ದರೆ 7 ದಿನಗಳೊಳಗಾಗಿ ಯಾವುದೇ ಶುಲ್ಕ ವಿಧಿಸದೇ ಕಾರ್ಡನ್ನು ಡೀಆ್ಯಕ್ಟಿವೇಟ್ ಮಾಡಬೇಕು.
ಡಿಮ್ಯಾಟ್ ಖಾತೆ ಲಾಗಿನ್ :
ಶನಿವಾರದಿಂದ ನೀವು ಡಿಮ್ಯಾಟ್ ಖಾತೆಗೆ ಲಾಗಿನ್ ಆಗಬೇಕೆಂದರೆ ಬಯೋಮೆಟ್ರಿಕ್ ದೃಢೀಕರಣ ಅತ್ಯಗತ್ಯ. ಈ ಪ್ರಕ್ರಿಯೆ ಮೂಲಕ ಅಥವಾ ಪಾಸ್‌ವರ್ಡ್, ಪಿನ್, ಒಟಿಪಿ, ಸೆಕ್ಯೂರಿಟಿ ಟೋಕನ್ ಮೂಲಕವೂ ಲಾಗಿನ್ ಆಗಬಹುದು.
ರಾಷ್ಟ್ರೀಯ ಪಿಂಚಣಿ ಯೋಜನೆ :
ಎನ್‌ಪಿಎಸ್ ಚಂದಾದಾರರ ಅನುಕೂಲಕ್ಕಾಗಿ ಯೋಜನೆಯ ಇ-ನಾಮಿನೇಶನ್ ಪ್ರಕ್ರಿಯೆಯಲ್ಲಿ ಬದಲಾವಣೆ ತರಲಾಗಿದೆ. ಇ-ನಾಮಿನೇಶನ್ ಪ್ರಕ್ರಿಯೆ ಆರಂಭಿಸಿದ ಅನಂತರ ನೋಡಲ್ ಕಚೇರಿಯು ಒಂದೋ ಅದನ್ನು ಸ್ವೀಕರಿಸಬೇಕು ಅಥವಾ ತಿರಸ್ಕರಿಸಬೇಕು. 30 ದಿನಗಳೊಳಗಾಗಿ ಕಚೇರಿ ಯಾವುದೇ ಕ್ರಮ ಕೈಗೊಳ್ಳದೇ ಇದ್ದರೆ, ಕೋರಿಕೆಯು ತನ್ನಿಂತಾನೇ ಸಿಆರ್‌ಎ ವ್ಯವಸ್ಥೆಯಲ್ಲಿ ಸ್ವೀಕೃತಗೊಳ್ಳುತ್ತದೆ.
ಅಟಲ್ ಪಿಂಚಣಿ ಯೋಜನೆ:
ಅ.1ರಿಂದ ಆದಾಯ ತೆರಿಗೆ ಪಾವತಿದಾರರು ಅಟಲ್ ಪಿಂಚಣಿ ಯೋಜನೆಗೆ ಅರ್ಹತೆ ಪಡೆಯುವುದಿಲ್ಲ. ಸೀಮಿತ ಸೇವಾ ಪ್ರಯೋಜನಗಳನ್ನು ಪಡೆಯುವಂಥವರಿಗೆ ಯೋಜನೆಯ ಲಾಭ ಸಿಗಬೇಕು ಎನ್ನುವುದು ಇದರ ಉದ್ದೇಶ.
ಎಲ್‌ಪಿಜಿ ದರ ಪರಿಷ್ಕರಣೆ :
ಪ್ರತೀ ತಿಂಗಳಂತೆ ಅ.1ರ ಮೊದಲ ದಿನ ಅಡುಗೆ ಅನಿಲ ಸಿಲಿಂಡರ್ ದರ ಏರಿಕೆ ಅಥವಾ ಇಳಿಕೆ ಆಗಬಹುದು.