Advertisement

ನಾಲ್ಕು ವರ್ಷಗಳಲ್ಲಿ ಡೆಬಿಟ್‌, ಕ್ರೆಡಿಟ್‌ ಕಾರ್ಡ್‌ ಮರೆಗೆ?

01:25 PM Nov 12, 2017 | Team Udayavani |

ನೊಯ್ಡಾ: ಮುಂದಿನ ಮೂರು ವರ್ಷಗಳಲ್ಲಿ ಡೆಬಿಟ್‌, ಕ್ರೆಡಿಟ್‌ ಕಾರ್ಡ್‌ಗಳು ಮರೆಯಾಗುತ್ತವೆ ಎಂದು ನೀತಿ ಆಯೋಗದ ಸಿಇಒ ಅಮಿತಾಭ್‌ ಕಾಂತ್‌ ಹೇಳಿದ್ದಾರೆ. ಜನರು ಇನ್ನು ಮೊಬೈಲ್‌ ಫೋನ್‌ಗಳನ್ನೇ ಹಣಕಾಸು ವಹಿವಾಟಿಗೆ ಬಳಸುತ್ತಾರೆ. ಅಷ್ಟೇ ಅಲ್ಲ, ಈಗ ಹೆಚ್ಚಾಗಿ ಬಳಕೆಯಾಗುತ್ತಿರುವ ಎಟಿಎಂ ಕೂಡ ಮರೆಗೆ ಸರಿಯಲಿದೆ. ಭಾರತದ ಶೇ. 72ರಷ್ಟು ಜನರು 32 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ಈ ವಿಚಾರದಲ್ಲಿ ಅಮೆರಿಕ ಮತ್ತು ಯುರೋಪ್‌ಗಿಂತ ಹೆಚ್ಚಿನ ಅನುಕೂಲವನ್ನು ಹೊಂದಿದೆ ಎಂದು ಅವರು ಹೇಳಿದ್ದಾರೆ. ಶತಕೋಟಿ ಬಯೋಮೆಟ್ರಿಕ್‌, ಮೊಬೈಲ್‌ ಫೋನ್‌ಗಳು ಹಾಗೂ ಬ್ಯಾಂಕ್‌ ಖಾತೆಗಳನ್ನು ಹೊಂದಿರುವ ಏಕೈಕ ದೇಶ ಭಾರತ. ಹಲವು ಕ್ಷೇತ್ರಗಳಲ್ಲಿ ಮಹತ್ವದ ಸುಧಾರಣೆ ತರಬಲ್ಲ ದೇಶವೂ ಇದಾಗಿದೆ. ಬಹುತೇಕ ಹಣಕಾಸು ವಹಿವಾಟುಗಳನ್ನು ಮೊಬೈಲ್‌ ಫೋನ್‌ನಲ್ಲಿ ಮಾಡಬಹುದಾಗಿದ್ದು, ಈ ಟ್ರೆಂಡ್‌ ಈಗಾಗಲೇ ಆರಂಭವಾಗಿದೆ.

Advertisement

ವಿಶ್ವ ಆರ್ಥಿಕ ಕುಸಿತದ ಮಧ್ಯೆಯೂ ಭಾರತ ಶೇ.7.5ರ ದರದಲ್ಲಿ ಬೆಳವಣಿಗೆ ಕಾಣುತ್ತಿದೆ. ಇದು ಅಭಿವೃದ್ಧಿಯ ಒಯಸಿಸ್‌. ಆದರೆ ಈಗ ನಮ್ಮೆದುರು ಇರುವ ಸವಾಲೆಂದರೆ ಶೇ. 9 ರಿಂದ 10ರ ವೇಗದಲ್ಲಿ ಬೆಳೆಯುವುದಾಗಿದೆ.

ಜನಸಂಖ್ಯೆ ವಯೋಮಾನದಲ್ಲಿ ಮಹತ್ವದ ಬದಲಾವಣೆ ಕಾಣಿಸುತ್ತಿದ್ದು, ಇದು ವಿಶ್ವದ ಯಾವುದೇ ದೇಶದ ಇತಿಹಾಸದಲ್ಲಿ ಕಂಡುಬರುವ ಅಪರೂಪ ಸನ್ನಿವೇಶವಾಗಿದೆ. ಭಾರತದ ಶೇ. 75ರಷ್ಟು ಜನರು 32ಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ಇದೇ ಸನ್ನಿವೇಶ 2040ರವರೆಗೂ ಮುಂದುವರಿಯಲಿದೆ. ಅಮೆರಿಕ ಮತ್ತು ಯುರೋಪ್‌ನಲ್ಲಿ ವಯಸ್ಕರ ಸಂಖ್ಯೆ ಹೆಚ್ಚಿದೆ. ನಾವೀನ್ಯತೆಗೆ ಹಾತೊರೆಯುವ ವಯಸ್ಸಿನ ಜನರು ಹೆಚ್ಚಿದ್ದಾಗ, ದೇಶ ತ್ವರಿತವಾಗಿ ಅಭಿವೃದ್ಧಿ ಕಾಣುತ್ತದೆ ಎಂದು ಕಾಂತ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next