Advertisement
ದೇಶದಲ್ಲಿ ಕೋವಿಡ್ ದಿಂದ ಒಟ್ಟು 2,549 ಜನರು ಸಾವನ್ನಪ್ಪಿದ್ದಾರೆ, ಅದರಲ್ಲಿ 975 ಮಂದಿ ಮಹಾರಾಷ್ಟ್ರದಲ್ಲಿ ಸಾವನ್ನಪ್ಪಿದ್ದಾರೆ. ಈವರೆಗೆ ವಿಶ್ವದಲ್ಲಿ 2 ಲಕ್ಷ 93 ಸಾವಿರ 827 ಮಂದಿಸಾವನ್ನಪ್ಪಿದ್ದಾರೆ. ದೇಶದಲ್ಲಿ ಒಟ್ಟು 78,003 ಮಂದಿಗೆ ವೈರಸ್ ಸೋಂಕು ತಗುಲಿದ್ದು, ರಾಜ್ಯದಲ್ಲಿ 25,922 ಜನರು ವೈರಸ್ ಸೋಂಕಿಗೆ ಒಳಗಾಗಿದ್ದಾರೆ. ದೇಶದ ಇತರರಾಜ್ಯಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ಗರಿಷ್ಠ ಮರಣ ಪ್ರಮಾಣವು ಶೇ.9.21ರಷ್ಟಿದ್ದರೆ, ಗುಜರಾತ್‌ನಲ್ಲಿ ಶೇ. 6.01ರಷ್ಟಿದೆ. ಮಧ್ಯಪ್ರದೇಶದಲ್ಲಿ ಶೇ. 5.84, ಕರ್ನಾಟಕದಲ್ಲಿ ಶೇ.3.60 ಮತ್ತು ಹಿಮಾಚಲ ಪ್ರದೇಶದಲ್ಲಿ ಶೇ 3.39 ರಷ್ಟಿದೆ. ಮಕ್ಕಳು ಕೋವಿಡ್ ವೈರಸ್ ಸೋಂಕಿಗೆ ಒಳಗಾಗುವುದಿಲ್ಲ ಎಂಬ ಹೇಳಿಕೆ ಸುಳ್ಳಾಗಿದೆ. ನವಜಾತ ಶಿಶುವಿನಿಂದ ಹಿಡಿದು 10 ವರ್ಷದ ವಯೋಮಿತಿಯ 770 ಮಕ್ಕಳು ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ. 11 ರಿಂದ 20 ವಯೋಮಿತಿಯ 1 , 579 ಮಂದಿಗೆ, 21 ರಿಂದ 30 ವರ್ಷದೊಳಗಿನ ಒಟ್ಟು 4,817 ಜನರು ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ. ಈ ವಯೋಮಿತಿಗಿಂತ ಹೆಚ್ಚಿನವರಿಗೆ ಕೋವಿಡ್ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗಿದೆ .
ವರೆಗೆ ಮುಂಬಯಿಯಲ್ಲಿ ಕ್ರಮವಾಗಿ 5, 27, 21, 18, 26, 25, 25, 27, 19, 20 ಮಂದಿ ಸಾವನ್ನಪ್ಪಿರುವುದು ವರದಿಯಾಗಿವೆ. ಹೆಚ್ಚುತ್ತಿರುವ ಸೋಂಕನ್ನು ಪರಿಗಣಿಸಿ ಎನ್‌ಎಂಸಿ ಹೆಚ್ಚುವರಿ ಆಯುಕ್ತ ಸುರೇಶ್ ಕಾಕಾನಿ ಅವರು ವೈದ್ಯಕೀಯ ಸಿದ್ಧತೆಗಳನ್ನು ಮಾಡಿದ್ದಾರೆ. ಬಾಂದ್ರಾದಲ್ಲಿ 1,000 ಹಾಸಿಗೆಗಳ ಆಸ್ಪತ್ರೆಯನ್ನು ಸ್ಥಾಪಿಸಲಾಗಿದ್ದು, ಅವರಲ್ಲಿ 500 ಮಂದಿಗೆ ಆಮ್ಲಜನಕ ಒದಗಿಸಲಾಗುವುದು. ಇತರ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಸಾಮರ್ಥ್ಯವನ್ನು ಹೆಚ್ಚಿಸಲು ಸಹ ಒತ್ತು ನೀಡಲಾಗಿದೆ. ಮನೆಯಲ್ಲಿ ಪ್ರತ್ಯೇಕವಾಗಿರುವ ರೋಗಿಗಳು ಮನಪಾದ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ.
Related Articles
ಏಷ್ಯಾದ ಅತಿದೊಡ್ಡ ಕೊಳೆಗೇರಿ ಎಂದು ಪರಿಗಣಿಸಲ್ಪಟ್ಟ ಧಾರಾವಿಯಲ್ಲಿ ಕೋವಿಡ್ ವೈರಸ್ ಪ್ರಕರಣಗಳ ಸಂಖ್ಯೆ ಬುಧವಾರ 1,028ಕ್ಕೆ ಏರಿಕೆಯಾಗಿದ್ದು, 66 ಹೊಸ ರೋಗಿಗಳು ಪತ್ತೆಯಾಗಿದ್ದಾರೆ ಎಂದು ಬಿಎಂಸಿ ಅಧಿಕಾರಿ ತಿಳಿಸಿದ್ದಾರೆ. ಈ ಪ್ರದೇಶದಲ್ಲಿನ ಸಾಂಕ್ರಾಮಿಕ ರೋಗದ ಸಾವಿನ ಸಂಖ್ಯೆ 31ರಿಂದ ಮಂಗಳವಾರ 40ಕ್ಕೆ ಏರಿದೆ. ಆದರೆ ಅನಂತರ ಯಾವುದೇ ಹೊಸ ಕೋವಿಡ್ -19 ಸಂಬಂಧಿತ ಸಾವು ವರದಿಯಾಗಿಲ್ಲ ಎಂದು ಅವರು ಹೇಳಿದರು.ಇದರಲ್ಲಿ ಒಂಬತ್ತು ಸಾವುಗಳು ವಿವಿಧ ದಿನಾಂಕಗಳಲ್ಲಿ ನಡೆದಿದ್ದು ಈ ಬಗ್ಗೆ ಮಂಗಳವಾರ ಮಾಹಿತಿಯನ್ನು ಸಂಗ್ರಹಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಮುಂಬಯಿಯಲ್ಲಿ ಕೋವಿಡ್ ವೈರಸ್ ಸೋಂಕಿನ ಮೊದಲ ಪ್ರಕರಣ ವರದಿಯಾದ 20 ದಿನಗಳ ನಂತರ ಎ.1ರಂದು ಧಾರಾವಿ ತನ್ನ ಮೊದಲ ಕೋವಿಡ್ ವೈರಸ್ ರೋಗಿಯನ್ನು ದಾಖಲಿಸಿದೆ.
Advertisement