Advertisement

ಕೋಟ ಅಪಘಾತದ ಮಹಿಳೆ ಸಾವು: ಅಂಗಾಂಗ ದಾನ

07:59 AM Dec 15, 2017 | |

ಉಡುಪಿ: ಕೋಟ ಹೈಸ್ಕೂಲ್‌ ಸಮೀಪ ಡಿ. 12ರಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾರ್ಕೂರು ಬೆಣ್ಣೆಕುದ್ರುವಿನ ಕಸ್ತೂರಿ ಪೂಜಾರಿ (36) ಅವರ ಮಿದುಳು ನಿಷ್ಕ್ರಿಯಗೊಂಡಿರುವ ಕಾರಣ ಮನೆಮಂದಿಯ ಆಶಯದಂತೆ ಅವರ ಅಂಗಾಂಗಗಳನ್ನು ಗುರುವಾರ ದಾನ ಮಾಡಲಾಯಿತು.

Advertisement

ಕೋಟ ಹೈಸ್ಕೂಲ್‌ ಬಳಿ ಮಂಗಳವಾರ ಬೆಳಗ್ಗೆ ಆಲ್ಟೋ ಕಾರು ಹಾಗೂ ಮೀನು ಸಾಗಾಟ ಮಾಡುತ್ತಿದ್ದ ಕಂಟೈನಲ್‌ ಲಾರಿಯ ನಡುವೆ ಮುಖಾಮುಖೀ ಢಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ಬಾಕೂìರು ಬೆಣ್ಣೆಕುದ್ರು ನಿವಾಸಿ ಗಿರಿಜಾ ಪೂಜಾರಿ (50) ಹಾಗೂ ಅವರ ಮಗ ಅವಿನಾಶ್‌ (27) ಮೃತಪಟ್ಟಿದ್ದರು. ಕಸ್ತೂರಿ ಅವರ ಸಾವಿನೊಂದಿಗೆ ಮೃತಪಟ್ಟವರ ಸಂಖ್ಯೆ ಮೂರಕ್ಕೇರಿದೆ. ಕಾರು ಚಾಲಕ ಭಾಸ್ಕರ್‌ ಪೂಜಾರಿ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಡಿ. 13ರ ಸಂಜೆ 6 ಗಂಟೆಗೆ ವೈದ್ಯರ ಅಧಿಕೃತ ಸಮಿತಿಯು ಕಸ್ತೂರಿ ಅವರ ಮಿದುಳು ಸ್ತಬ್ಧಗೊಂಡಿರುವುದನ್ನು ಘೋಷಿಸಿತ್ತು. ಮಧ್ಯರಾತ್ರಿ 12ಕ್ಕೆ 2ನೇ ಘೋಷಣೆಯನ್ನು ವೈದ್ಯರು ಮಾಡಿದರು. ಬಳಿಕ ಕಸ್ತೂರಿ ಪೂಜಾರಿಯ ಕುಟುಂಬದ ಸದಸ್ಯರು ಕಾರ್ಯಸಾಧ್ಯವಾದ ಅಂಗಾಗಗಳನ್ನು ದಾನ ಮಾಡುವುದಾಗಿ ತಮ್ಮ ಇಚ್ಛೆ ವ್ಯಕ್ತಪಡಿಸಿದರು. ಅದರಂತೆ ಎರಡು ಕಾರ್ನಿಯಾ, ಎರಡು ಮೂತ್ರಪಿಂಡಗಳು, ಯಕೃತ್ತು (ಲಿವರ್‌) ಮತ್ತು ಹೃದಯ ಕವಾಟಗಳನ್ನು ತೆಗೆಯಲು ವೈದ್ಯರು ನಿರ್ಧರಿಸಿದರು.

4 ಆಸ್ಪತ್ರೆಗಳಿಗೆ ಸಾಗಿತು ಜೀವಾಂಗ
ಅಂಗಾಂಗಗಳನ್ನು ಹಸಿರು ಕಾರಿಡಾರ್‌ ಮೂಲಕ ಮಣಿಪಾಲದಿಂದ ಮಂಗಳೂರಿಗೆ ಉಡುಪಿ ಪೊಲೀಸ್‌ ಇಲಾಖೆಯ ಸಹಯೋಗದಲ್ಲಿ  ಗುರುವಾರ ಮಧ್ಯಾಹ್ನ 1.30ಕ್ಕೆ ಆ್ಯಂಬುಲೆನ್ಸ್‌ಗಳಲ್ಲಿ ಸಾಗಿಸಲಾಯಿತು. ಒಂದು ಮೂತ್ರಪಿಂಡವನ್ನು° ಕೆಎಂಸಿ ಗುರುತಿಸಿದ ರೋಗಿಗೆ, 2ನೇ ಕಿಡ್ನಿಯನ್ನು ಮಂಗಳೂರಿನ ಫಾದರ್‌ ಮುಲ್ಲರ್‌ ಆಸ್ಪತ್ರೆ ಗುರುತಿಸಿದ ರೋಗಿಗೆ, ಯಕೃತ್ತು (ಲಿವರ್‌) ಅನ್ನು ಮಂಗಳೂರಿನ ಎ.ಜೆ. ಆಸ್ಪತ್ರೆ ಗುರುತಿಸಿದ ರೋಗಿಗೆ ಹಾಗೂ ಹೃದಯ ಕವಾಟ(ಹಾರ್ಟ್‌ ವಾಲ್ವ…)ವನ್ನು ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ರವಾನೆ ಮಾಡಲಾಯಿತು. ಎರಡು ಕಾರ್ನಿಯಾ(ಕಣ್ಣು)ಗಳನ್ನು ಮಣಿಪಾಲ¨ ಕೆಎಂಸಿ ಗುರುತಿಸಿದ ರೋಗಿಗಳಿಗೆ ಕಸಿ ಮಾಡಲಾಗುವುದು ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ಮತ್ತು ಮುಖ್ಯ ನಿರ್ವಹಣಾಧಿಕಾರಿ ಡಾ|ಕ| ಎಂ. ದಯಾನಂದ ಅವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next