Advertisement

ಹುಲಿ ಕಾಳಗ : ಕಾದಾಟದಲ್ಲಿ ಗಂಡು ಹುಲಿ ಸಾವು..!

05:42 PM Aug 13, 2021 | Team Udayavani |

ಗುಂಡ್ಲುಪೇಟೆ(ಚಾಮರಾಜನಗರ ): ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಕುಂದುಕರೆ ವಲಯದ ಮಂಗಲ ಶಾಖೆಯ ಎಲಚೆಟ್ಟಿ ಗಸ್ತಿನ ಆಲದಮರದಹಳ್ಳಿ ಅರಣ್ಯ ಪ್ರದೇಶದ ಬಳಿ ಸುಮಾರು 14 ರಿಂದ 15 ವರ್ಷಸ್ಸಿನ ಗಂಡು ಹುಲಿಯೊಂದು ಮೃತಪಟ್ಟಿದೆ.

Advertisement

ಹುಲಿಯ ದೇಹವನ್ನು ಪರಿಶೀಲಿಸಿದಾಗ ಹುಲಿಯು ಬೇರೊಂದು ಹುಲಿಯ ಜೊತೆಗೆ ಕಾದಾಟದಿಂದ ಮೃತಪಟ್ಟಿರುವುದು ಕಂಡು ಬಂದಿದೆ. ಹುಲಿಯ ದೇಹದಲ್ಲಿ ತೀವ್ರ ಗಾಯಗಳಾಗಿದ್ದು, ಎಲ್ಲಾ ಉಗುರು, ಹಲ್ಲುಗಳು ಹಾಗೂ ಇತರ ಅಂಗಾಂಗಳು ಸುರಕ್ಷಿತವಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

ಪಶು ವೈದ್ಯಾಧಿಕಾರಿ ಡಾ. ವಾಸೀಂ ಮಿರ್ಜಾ ಮತ್ತು ಡಾ.ಸಮತ್ ಮೃತ ಹುಲಿ ಶವ ಪರೀಕ್ಷೆ ನಡೆಸಿದರು. ಬಳಿಕ ನಿಯಮವಳಿಯಂತೆ ಮೃತ ಹುಲಿಯನ್ನು ಸುಡಲಾಯಿತು.

ಈ ಸಂದರ್ಭದಲ್ಲಿ ಎನ್‍ ಟಿ ಸಿ ಎ ಪ್ರತಿನಿಧಿಗಳಾದ ಕೃತಿಕಾ ಆಲನಹಳ್ಳಿ, ವನ್ಯಜೀವಿ ಪರಿಪಾಲಕ ನಂಜುಂಡರಾಜೇ ಅರಸ್, ಗ್ರಾಮ ಪಂಚಾಯತಿ ಅಧ್ಯಕ್ಷ ಸುದರ್ಶನ್ ಸೇರಿದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು  ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next