ಮಂಡ್ಯ: ಜ್ವರದ ಕಾರಣಕ್ಕೆ ಔಷಧಿ ಪಡೆಯಲು ಬಂದಿದ್ದ ವ್ಯಕ್ತಿಯೋರ್ವನಿಗೆ ನಕಲಿ ವೈದ್ಯರೋರ್ವರು ಇಂಜೆಕ್ಷನ್ ಕೊಟ್ಟು ಅವನ ಸಾವಿಗೆ ಕಾರಣವಾದ ಘಟನೆ ಜಿಲ್ಲೆಯ ದಡಮಹಳ್ಳಿಯಲ್ಲಿ ನಡೆದಿದೆ.
ಮಳವಳ್ಳಿ ತಾಲೂಕಿನ ದಡಮಹಳ್ಳಿಯ ಶಿವಲಿಂಗೇಗೌಡ (58) ಮೃತಪಟ್ಟ ದುರ್ದೈವಿ.
ತೊರೆಕಾಡನಹಳ್ಳಿಯಲ್ಲಿ ಕ್ಲಿನಿಕ್ ನಡೆಸುತ್ತಿರುವ ವೈದ್ಯ ಕೃಷ್ಣಮೂರ್ತಿ ಅವರು ನೀಡಿದ ಇಂಜೆಕ್ಷನ್ ನೀಡಿ ಶಿವಲಿಂಗೇಗೌಡ ಅವರ ಸಾವಿಗೆ ಕಾರಣ ಎಂದು ವರದಿಯಾಗಿದೆ.
ಕಳೆದ 20 ವರ್ಷಗಳಿಂದ ಮಂಗಳೂರು ಮೂಲದ ವೈದ್ಯ ಯವರು ಕ್ಲಿನಿಕ್ ನಡೆಸುತ್ತಿದ್ದಾರೆ.
ಜ್ವರ ಹಿನ್ನೆಲೆಯಲ್ಲಿ ಶಿವಲಿಂಗೇಗೌಡ ಸೋಮವಾರ ಇಂಜೆಕ್ಷನ್ ಪಡೆದಿದ್ದರು. ಆದರೆ ಇಂಜೆಕ್ಷನ್ ಪಡೆದ ಬಳಿಕ ಸೊಂಟದಲ್ಲಿ ಊತ ಕಾಣಿಸಿಕೊಂಡಿತ್ತು. ನಂತರ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಶಿವಲಿಂಗೇಗೌಡ ಸಾವನ್ನಪ್ಪಿದ್ದಾರೆ.
ಹಲಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.