Advertisement

ಹಳೆಯಂಗಡಿ : ನಂದಿನಿ ನದಿಯಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆ

12:57 PM Aug 04, 2022 | Team Udayavani |

ಹಳೆಯಂಗಡಿ : ಇಲ್ಲಿನ ಮೂಲ್ಕಿಯ ಪಡುಪಣಂಬೂರು ಗ್ರಾಮ ಪಂಚಾಯತ್‌ನ ಹೊಗೆಗುಡ್ಡೆ ನಂದಿನಿ ನದಿಯ ತೀರದಲ್ಲಿ ಅಪರಿಚಿತ ಮಹಿಳೆಯೋರ್ವರ ಶವ ಗುರುವಾರ ಮಧ್ಯಾಹ್ನ ಪತ್ತೆಯಾಗಿದೆ.

Advertisement

ಪಡುಪಣಂಬೂರು ಗ್ರಾಮ ಪಂಚಾಯತ್‌ನ ಅಧ್ಯಕ್ಷೆ ಮಂಜುಳಾ ಅವರ ಗಮನಕ್ಕೆ ಸ್ಥಳೀಯರು ತಂದಿದ್ದರಿಂದ ಅವರು ಸ್ಥಳಕ್ಕೆ ಭೇಟಿ ನೀಡಿ ಮೂಲ್ಕಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸುಮಾರು 80 ರ ಆಸುಪಾಸಿನ ಹರೆಯದ ಮಹಿಳೆಯ ಶವವು ಪಾವಂಜೆ ಕಡೆಯಿಂದ ನೀರಿನ ಸೆಳೆತದಿಂದ ಸಾಗಿ ಬಂದಿದೆ ಎನ್ನಲಾಗಿದೆ. ಸ್ಥಳೀಯರ ಸಹಕಾರದಿಂದ ಶವವನ್ನು ಮೇಲತ್ತಲಾಗಿದೆ.

ಇದನ್ನೂ ಓದಿ : ಪ್ರಗತಿ ಸಾಧಿಸದ ದ.ಕ.: 18 ರಿಂದ 59 ವಯೋಮಾನದವರಿಗೆ ಬೂಸ್ಟರ್‌ ಲಸಿಕೆ

Advertisement

Udayavani is now on Telegram. Click here to join our channel and stay updated with the latest news.

Next