Advertisement

ಬಾಯ್ದೆರೆದಿವೆ ಮೃತ್ಯುಕೂಪಗಳು

10:40 PM Jul 14, 2019 | sudhir |

ಕಾರ್ಕಳ: ತಾಲೂಕಿನ ಸುತ್ತಮುತ್ತವೂ ಹಲವು ಕೆಂಪು ಕಲ್ಲು ಮತ್ತು ಕಪ್ಪು ಕಲ್ಲಿನ ಕೋರೆಗಳಿದ್ದು, ಮಳೆಗಾಲದಲ್ಲಿ ಇವುಗಳ ಹೊಂಡಗಳು ಅಪಾಯಕಾರಿಯಾಗಿವೆ.

Advertisement

ನಿಟ್ಟೆ, ಸಾಂತೂರು, ನಂದಳಿಕೆ, ಶಿವಪುರ, ಕಣಜಾರು, ಕುಕ್ಕುಂದೂರು, ಕಲ್ಯಾ, ಪಳ್ಳಿ, ಸೂಡಾ, ರೆಂಜಾಳ, ಬೆಳ್ಮಣ್‌, ಎರ್ಲಪಾಡಿ, ಕಡ್ತಲ, ಇನ್ನಾ, ನೀರೆ, ಮಿಯಾರು ಮೊದಲಾದ ಗ್ರಾಮಗಳ ಪಟ್ಟಾ ಭೂಮಿ ಹಾಗೂ ಸರಕಾರಿ ಭೂಮಿಗಳಲ್ಲಿ ಕ್ವಾರಿಗಳು ಕಾರ್ಯಾಚರಿಸುತ್ತಿದ್ದು ಕೆಲವೊಂದು ಕ್ವಾರಿಗಳಿಗೆ ತಡಬೇಲಿಯಿದ್ದರೆ ಇನ್ನು ಕೆಲವೊಂದು ಅಪಾಯವನ್ನು ಆಹ್ವಾನಿ ಸುವಂತಿವೆ.

ಈಗಾಗಲೇ ಕಾರ್ಕಳ ಉಪವಿಭಾಗದ ಎಎಸ್‌ಪಿ ಕೃಷ್ಣಕಾಂತ್‌ ಅವರು ಡೀಮ್ಡ್ ಫಾರೆಸ್‌ rನಲ್ಲಿ ಕಾರ್ಯಾಚರಿಸುತ್ತಿರುವ ಅನೇಕ ಕ್ರಷರ್‌ಗಳ ಮೇಲೆ ದಾಳಿ ನಡೆಸಿ ಬಿಸಿ ಮುಟ್ಟಿಸಿದ್ದಾರೆ. ಆದರೂ ಕೆಲವೆಡೆ ನಿಯಮಗಳನ್ನು ಗಾಳಿಗೆ ತೂರಿ ಅನಧಿಕೃತವಾಗಿ ಕಲ್ಲು ಬಂಡೆಗಳನ್ನು ಹೊಡೆಯುವ ಕಾರ್ಯ ನಡೆಯುತ್ತಿದೆ ಎನ್ನಲಾಗುತ್ತಿದೆ.

ತೆಕ್ಕಟ್ಟೆ: ಕುಂದಾಪುರ ತಾಲೂಕಿನ ಬೇಳೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕೆದೂರು ಅರೆಕಲ್ಲು ಸಂಪರ್ಕ ರಸ್ತೆಯ ಇಕ್ಕೆಲದಲ್ಲಿರುವ ಅಪಾಯಕಾರಿ ಕಲ್ಲುಕೋರೆ ಹಾಗೂ ಮೊಗೆಬೆಟ್ಟು ಕಲ್ಮಂಡಿ ಶಿಲೆಕಲ್ಲು ಗಣಿಗಾರಿಕಾ ಹೊಂಡಗಳು ಬಾಯ್ದೆರೆದುಕೊಂಡಿವೆೆ. 40 ಅಡಿ ಆಳದವರೆಗೆ ಇಲ್ಲಿ ಗಣಿಗಾರಿಕೆ ನಡೆಯುತ್ತಿದ್ದು, ಮಳೆಗಾಲದಲ್ಲಿ ಹೊಂಡಗಳಲ್ಲಿ ನೀರು ತುಂಬಿಕೊಂಡಿದೆ.

ಮುನ್ನೆಚ್ಚರಿಕೆ ತೆಗೆದುಕೊಂಡಿಲ್ಲ

Advertisement

ಈ ಹಿಂದೆ ಮಳೆಗಾಲದ ಸಂದರ್ಭ ಬೇಳೂರು ಮೊಗೆಬೆಟ್ಟು ಕಲ್ಮಂಡಿ, ಉಳ್ತೂರಿನ ಗ್ರಾಮದಲ್ಲಿನ ಮಣ್ಣು ಗಣಿಗಾರಿಕಾ ಸ್ಥಳದಲ್ಲಿ ಅಪಾರ ಪ್ರಮಾಣದ ನೀರು ಶೇಖರಣೆಯಾದ ಪರಿಣಾಮ ಪರಿಸರದ ಅಮಾಯಕ ನಾಲ್ವರು ವಿದ್ಯಾರ್ಥಿಗಳು ಆಕಸ್ಮಿಕವಾಗಿ ನೀರಿಗೆ ಬಿದ್ದು ಅಸುನೀಗಿದ್ದರು. ಇಷ್ಟಾದರೂ ಇಲ್ಲಿ ಯಾವುದೇ ಮುನ್ನೆಚ್ಚರಿಕೆ ತೆಗೆದುಕೊಂಡಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next