ಕಾರ್ಕಳ: ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದು ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಬದುಕಿರುವಾಗಲೇ ಆತ ಸಾವನ್ನಪ್ಪಿದ್ದಾನೆ ಎಂದು ಶವವನ್ನು ಕೊಂಡೊಯ್ಯುವಂತೆ ಮನೆಯವರಿಗೆ ವೈದ್ಯರು ತಿಳಿಸಿದ ಘಟನೆ ರವಿವಾರ ಸಂಭವಿಸಿದೆ.
Advertisement
ಘಟನೆ ವಿವರ:ಇಲ್ಲಿನ ಫಿಶರೀಸ್ ರಸ್ತೆಯ ನಿವಾಸಿ ಗೋಪಾಲ್ ದೇವಾಡಿಗ (47) ಅವರು ಕಳೆದ ಮೂರು ದಿನಗಳ ಹಿಂದೆ ಕೆಮ್ಮು ಕಫ ಹಾಗೂ ಜ್ವರದಿಂದ ಬಳಲುತ್ತಿದ್ದರು. ಅವರನ್ನು ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಒಳರೋಗಿಯಾಗಿ ದಾಖಲಾಗಿದ್ದ ಅವರಿಗೆ ಚಿಕಿತ್ಸೆಯನ್ನೂ ನೀಡಲಾಗಿತ್ತು. ಅವರು ಚಿಕಿತ್ಸೆಗೆ ಸ್ಪಂದಿಸಿದ್ದರಿಂದ ಅವರನ್ನು ಮನೆಗೆ ಕಳುಹಿಸಿಕೊಡುವುದಾಗಿ ವೈದ್ಯರು ಮನೆಯವರಿಗೆ ತಿಳಿಸಿದ್ದಾರೆ. ಆದರೆ ಆ ಬಳಿಕ ವೈದ್ಯರು ಆತನಿಗೆ ಎದೆ ನೋವು ಕಾಣಿಕೊಂಡಿದ್ದು ಚಿಕಿತ್ಸೆ ನೀಡಿದರೂ ಫಲಕಾರಿಯಾಗದೇ ಆತನನ್ನು ಬದುಕಿಸಲು ಸಾಧ್ಯವಾಗಿಲ್ಲ ಅವರ ಶವವನ್ನು ತೆಗೆದುಕೊಂಡು ಹೋಗಿ ಎಂದಿದ್ದಾರೆ. ಮನೆಯವರು ವ್ಯಕ್ತಿ ಸತ್ತಿದ್ದಾನೆ ಎಂದು ಭಾವಿಸಿ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸುವ ವೇಳೆ ಶವವನ್ನು ಮನೆಗೆ ತರಲಾಗಿದ್ದು ಸತ್ತ ವ್ಯಕ್ತಿ ಕಣ್ಣುಗಳನ್ನು ತೆರೆದು ‘ಅಯ್ಯಮ್ಮ’ ಎಂದು ಕೂಗಾಡಿದಾಗ ಮನೆಯವರೆಲ್ಲ ಹೌಹಾರಿದ್ದೆವು, ಕೂಡಲೇ ಅವರನ್ನು ಉಪಚರಿಸಿ ಆ ಕೂಡಲೇ ಸ್ಥಳೀಯ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದರೂ ಅಲ್ಲಿ ಸಾವನ್ನಪ್ಪಿದ್ದಾರೆ ಎಂದು ಮನೆಯವರು ತಿಳಿಸಿದ್ದಾರೆ.