Advertisement

ಸತ್ತ ಮೇಕೆ, ಕುರಿ ಮಾಂಸ ಮಾರಾಟ: ಕ್ರಮಕ್ಕೆ ಆಗ್ರಹ

04:31 PM Oct 16, 2021 | Team Udayavani |

 ಶ್ರೀರಂಗಪಟ್ಟಣ: ಪಟ್ಟಣದ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗ್ರಾಹಕ ರಿಗೆ ಸತ್ತ ಮೇಕೆ, ಕುರಿಗಳ ಮಾಂಸ ಮಾರಾಟವಾಗುತ್ತಿರುವುದು ಬೆಳಕಿಗೆ ಬಂದಿದೆ. ಆರೋಗ್ಯ ಅಧಿಕಾರಿಗಳು ಗಮನಹರಿಸಿ ಆರೋಪಿಗಳ ವಿರುದ್ಧ ಕ್ರಮಕ್ಕೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

Advertisement

ಸತ್ತ ಕುರಿ ಹಾಗೂ ಮೇಕೆಗಳನ್ನು ತಕ್ಷಣ ಸುಲಿದು ಮಾಂಸವನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವ ಮಾಹಿತಿಗಳು ಲಭ್ಯವಾಗಿದೆ. ಪುರಸಭೆ ಆರೋಗ್ಯ ಅಧಿ ಕಾರಿಗಳು ಇಂತಹ ಮಾಂಸ ಮಾರಾಟ ಗಾರರನ್ನು ಕಂಡು ಹಿಡಿದು ಜನರ ಆರೋಗ್ಯದ ಜೊತೆ ಆಟವಾಡುವರನ್ನು ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ:- ಸಾಲು ಸಾಲು ರಜೆ: ಮುಳ್ಳಯ್ಯನಗಿರಿಯಲ್ಲಿ ಪ್ರವಾಸಿಗರ ದಂಡು!

ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ: ಉತ್ತರ ಕರ್ನಾಟಕದಿಂದ ಕುರಿ, ಮೇಕೆ ಗಳನ್ನು ವಾಹನಗಳಲ್ಲಿ ತರುವ ವೇಳೆ ಮೃತಪಟ್ಟ ಕುರಿಗಳನ್ನು ಕತ್ತು ಕೂಯಿದು ಅದನ್ನು ತಂದು ನಂತರ ಪಟ್ಟಣದ ಕುರಿ, ಮೇಕೆ ಗಳನ್ನು ಇಳಿಸುವ ಸ್ಥಳದಲ್ಲಿ ಸುಲಿ ದು ಅದರ ಮಾಂಸವನ್ನು ಆಟೋ ಮೂಲಕ ಮಾಂಸದ ಅಂಗಡಿಗಳಿಗೆ ಸಾಗಿಸಿ, ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಸಾರ್ವಜನಿಕರು, ಸತ್ತ ಕುರಿಗಳನ್ನೇ ಗ್ರಾಹಕರಿಗೆ ಮಾಂಸ ಮಾರಾಟ ಶ್ರೀರಂಗ ಪಟ್ಟಣದಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ.

ಈ ದಂಧೆಗೆ ಪಟ್ಟಣ, ಪುರಸಭೆ ಮತ್ತು ಪೊಲೀಸ್‌ ಇಲಾಖೆ ಅಧಿಕಾರಿಗಳು ಕಡಿ ವಾಣ ಹಾಕಬೇಕು. ಇಲ್ಲವಾದರೆ, ಆರೋಗ್ಯ ಅಧಿಕಾರಿಗಳ ವಿರುದ್ಧ ಪ್ರತಿ ಭಟನೆ ಮಾಡಲಾಗುವುದು ಎಂದು ಮಂಡ್ಯ ರಕ್ಷಣಾ ವೇದಿಕೆ ಕಾರ್ಯ ಕರ್ತರು ಎಚ್ಚರಿಸಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next