Advertisement

Mangaluru ನದಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

01:24 AM Jan 11, 2024 | Team Udayavani |

ಮಂಗಳೂರು: ನಗರದ ದಕ್ಷಿಣ ಪೊಲೀಸ್‌ ಠಾಣಾ ವ್ಯಾಪ್ತಿಯ ಹೊಯಿಗೆ ಬಜಾರ್‌ ಬಳಿ ನದಿಯಲ್ಲಿ ಬುಧವಾರ ಬೆಳಗ್ಗೆ ಸುಮಾರು 35ರಿಂದ 40 ವರ್ಷ ವಯಸ್ಸಿನ ಅಪರಿಚಿತ ಗಂಡಸಿನ ಶವ ಪತ್ತೆಯಾಗಿದೆ.

Advertisement

ಹಗ್ಗದ ಒಂದು ತುದಿಯನ್ನು ಕುತ್ತಿಗೆಗೆ ಕಟ್ಟಿ ಮತ್ತೂಂದು ತುದಿಯನ್ನು ನದಿಯ ದಡದಲ್ಲಿದ್ದ ಕಲ್ಲಿನ ಕೆಳಭಾಗಕ್ಕೆ ಸಿಕ್ಕಿಸಲಾಗಿತ್ತು.

6.1 ಅಡಿ ಎತ್ತರವಿದ್ದು ಎಣ್ಣೆ ಕಪ್ಪು ಮೈಬಣ್ಣ, ಸದೃಢ ಶರೀರ ಹೊಂದಿದ್ದಾರೆ. ಖಾಕಿ ಬಣ್ಣದ ಅರ್ಧ ತೋಳಿನ ಟೀ ಶರ್ಟ್‌ ಧರಿಸಿದ್ದಾರೆ. ಬಲ ಕೈಯಲ್ಲಿ SMK ಎಂಬುದಾಗಿ ಬರೆಯಲಾಗಿದೆ. ವಾರಸುದಾರರಿದ್ದರೆ ಮಂಗಳೂರು ದಕ್ಷಿಣ ಪೊಲೀಸ್‌ ಠಾಣೆ (0824-2220518) ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next