Advertisement

ನೀರುಪಾಲಾಗಿದ್ದ ಯುವಕನ ಶವ ಪತ್ತೆ

12:45 PM Jul 24, 2018 | Harsha Rao |

ಕುಂದಾಪುರ: ಮನೆ ಸಮೀಪದ ಸೌಪರ್ಣಿಕಾ ಹೊಳೆಯಲ್ಲಿ ಗಾಳ ಹಾಕಿ ಮೀನು ಹಿಡಿಯುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ನೀರುಪಾಲಾಗಿದ್ದ ನಾಡ ಗ್ರಾಮದ ಕಳುವಿನ ಬಾಗಿಲು ನಿವಾಸಿ ದಿ| ನಾರಾಯಣ ಕಾಂಚನ್‌ ಅವರ ಪುತ್ರ ಸುಧೀಂದ್ರ ಕಾಂಚನ್‌ (32) ಅವರ ಮೃತದೇಹ 2 ದಿನಗಳ ನಿರಂತರ ಹುಡುಕಾಟದ ಬಳಿಕ ಜು. 23ರಂದು ಗಂಗೊಳ್ಳಿಯ ಲೈಟ್‌ ಹೌಸ್‌ ಬಳಿಯ ಕಡಲ ಕಿನಾರೆಯಲ್ಲಿ  ಪತ್ತೆಯಾಗಿದೆ. 

Advertisement

ಅವರು ಜು. 20ರಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ರಾಘವೇಂದ್ರ ಹಾಗೂ ರತ್ನಾಕರ ಅವರೊಂದಿಗೆ ಗಾಳ ಹಾಕಿ ಮೀನು ಹಿಡಿಯುತ್ತಿದ್ದಾಗ ಆಕಸ್ಮಿಕವಾಗಿ ನೀರಿಗೆ ಬಿದ್ದಿದ್ದು, ಕೊಚ್ಚಿಕೊಂಡು ಹೋಗಿದ್ದಾರೆ.

ಅವರಿಗಾಗಿ  ಜು. 21, 22ರಂದು ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. 
ಜು. 23ರಂದು ಬೆಳಗ್ಗೆ 6.30ರ ಸುಮಾರಿಗೆ ಮೃತದೇಹ ಗಂಗೊಳ್ಳಿಯ ಲೈಟ್‌ ಹೌಸ್‌ ಬಳಿಯ ಬೀಚ್‌ನಲ್ಲಿ ಪತ್ತೆಯಾಗಿದೆ. ಗಂಗೊಳ್ಳಿ ಲೈಟ್‌ ಹೌಸ್‌ ಪರಿಸರದ ಯುವಕರು ಸಹಿತ ಸ್ಥಳೀಯರು ಪತ್ತೆ ಕಾರ್ಯದಲ್ಲಿ ಸಹಕರಿಸಿದ್ದರು. 

ಘಟನಾ ಸ್ಥಳಕ್ಕೆ ಗಂಗೊಳ್ಳಿ ಪೊಲೀಸ್‌ ಠಾಣಾಧಿಕಾರಿ ವಿನಾಯಕ ಬಿಲ್ಲವ ಭೇಟಿ ನೀಡಿದರು. ಸಹೋದರ ರಾಘವೇಂದ್ರ ನೀಡಿರುವ ದೂರಿನಂತೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ವಾರದ ಹಿಂದಷ್ಟೇ ಬೆಂಗಳೂರಿನಿಂದ ಬಂದಿದ್ದರು
ಸುಧೀಂದ್ರ ಅವರು ಬೆಂಗಳೂರಿನ ಹೊಟೇಲಿನಲ್ಲಿ ಕೆಲಸ ಮಾಡುತ್ತಿದ್ದು, ವಾರದ ಹಿಂದಷ್ಟೇ ಊರಿಗೆ ಬಂದಿದ್ದರು. 2-3 ದಿನಗಳಲ್ಲಿ ಮತ್ತೆ ಬೆಂಗಳೂರಿಗೆ ಹೋಗುವವರಿದ್ದರು. ಹವ್ಯಾಸಕ್ಕೆಂದು ಗಾಳ ಹಾಕಿ ಮೀನು ಹಿಡಿಯುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಅವರು ಅವಿವಾಹಿತರಾಗಿದ್ದು, ಮೂವರು ಮಕ್ಕಳ ಪೈಕಿ ಕಿರಿಯವರಾಗಿದ್ದರು. ತಾಯಿ ಹಾಗೂ ಇಬ್ಬರು ಸಹೋದರರನ್ನು ಅಗಲಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next