ನವದೆಹಲಿ:“ಡಿಡಿಎಲ್‌ಜೆ- ದಿಲ್‌ವಾಲೇ ದುಲ್ಹನಿಯಾ ಲೇ ಜಾಯೇಂಗೇ’ ಎನ್ನುವುದು ಬಾಲಿವುಡ್ ನಟ ಶಾರುಖ್ ಖಾನ್ ಅಭಿನಯದ ಸೂಪರ್‌ಹಿಟ್ ಸಿನಿಮಾ. ಆದರೆ, ಈಗ ಕಾಂಗ್ರೆಸ್ ಅದಕ್ಕೆ ಬೇರೆಯೇ ವ್ಯಾಖ್ಯಾನ ನೀಡಿದೆ.
ಚೀನಾ ಅತಿಕ್ರಮಣಕ್ಕೆ ಸಂಬಂಧಿಸಿದಂತೆ ವಿದೇಶಾಂಗ ಸಚಿವ ಎಸ್.ಜೈಶಂಕರ್ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಕೇಂದ್ರದ ನಿಲುವನ್ನು ಲೇವಡಿ ಮಾಡಿದ್ದಾರೆ.
“ಡಿಡಿಎಲ್‌ಜೆ ಎಂದರೆ ಡಿನೈ- ನಿರಾಕರಿಸುವುದು, ಡಿಸ್‌ಟ್ರಾಕ್ಟ್- ಗಮನವನ್ನು ಬೇರೆ ಕಡೆಗೆ ಸೆಳೆಯುವುದು, ಲೈ- ಸುಳ್ಳು, ಜಸ್ಟಿಫೈ- ಸಮರ್ಥನೆ. ಜೈಶಂಕರ್ ಅವರು ಮೋದಿ ಸರ್ಕಾರದ ಡಿಡಿಎಲ್‌ಜೆ ಆವೃತ್ತಿಯ ಸಿನಿಮಾದಲ್ಲಿ ಪ್ರಧಾನ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ’ ಎಂದು ಜೈರಾಂ ಟ್ವೀಟ್ ಮಾಡಿದ್ದಾರೆ.