Advertisement

ಗೋ ಶಾಲೆ ಸ್ಥಾಪನೆ ಯತ್ನಕ್ಕೆ ಡಿಸಿ ಹೆಸರು ದುರ್ಬಳಕೆ:ಸಭೆಯಲ್ಲಿ ಚರ್ಚೆ

12:32 AM Aug 08, 2019 | Team Udayavani |

ಸೋಮವಾರಪೇಟೆ: ತಾಲೂಕು ವ್ಯಾಪ್ತಿಯ ಬೆಟ್ಟದಳ್ಳಿ ಪಂಚಾಯಿತಿಗೆ ಸೇರುವ ಬೀದಳ್ಳಿಯಲ್ಲಿ ಆಯುರ್ವೇದ ಚಿಕಿತ್ಸಾ ಘಟಕದೊಂದಿಗೆ, ಗೋ ಶಾಲೆಯನ್ನು ಸ್ಥಾಪಿಸಲು ಮುಂದಾಗಿ, ಜಿಲ್ಲಾಧಿಕಾರಿಗಳ ಹೆಸರನ್ನು ದುರ್ಬಳಕೆ ಮಾಡಿಕೊಂಡಿರುವವರ ಬಗ್ಗೆ ಇಲಾಖೆ ಏನು ಕ್ರಮ ಕೈಗೊಂಡಿದೆ ಎಂದು ಸದಸ್ಯರಾದ ಕುಶಾಲಪ್ಪ ಮತ್ತು ಇತರ ಸದಸ್ಯರು ಪಶು ಸಂಗೋಪನಾ ಇಲಾಖೆಯ ಅಧಿಕಾರಿಯನ್ನು ಪ್ರಶ್ನಿಸಿದ ಘಟನೆ ತಾ.ಪಂ.ಸಭೆಯಲ್ಲಿ ನಡೆಯಿತು.

Advertisement

ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆ ಅಧ್ಯಕ್ಷೆ ಪುಷ್ಪಾ ರಾಜೇಶ್‌ ಅಧ್ಯಕ್ಷತೆಯಲ್ಲಿ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತುಇದಕ್ಕೆ ಪ್ರತಿಕ್ರಿಯಿಸಿದ ಅವರು, ಇದು ನಮ್ಮ ಇಲಾಖೆಗೆ ಸಂಬಂಧಿಸಿದುದ್ದಲ್ಲ. ಖಾಸಗಿ ವ್ಯಕ್ತಿಗಳು ಪ್ರಾರಂಭಿಸಿರುವ ಘಟಕವಾಗಿದೆ ಎಂದು ಸಭೆಗೆ ತಿಳಿಸಿದರು.

ಕೊಡಗಿನ ಕೆಲವು ಶಾಲೆಗಳಲ್ಲಿ ಕೊಡವ ಮತ್ತು ಕನ್ನಡ ಭಾಷೆೆಗಳಲ್ಲಿ ಮುದ್ರಿತಗೊಂಡ ಕ್ರೆçಸ್ತ ಧರ್ಮಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಅಂಚೆ ಮೂಲಕ ಶಾಲೆಗೆ ಕಳಿಸಿದ್ದಾರೆ. ಈ ಪುಸ್ತಕದಲ್ಲಿ ಇರುವ ಧಾರ್ಮಿಕ ಅಂಶಗಳು ವಿದ್ಯಾರ್ಥಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುತ್ತದೆ. ಇದರ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮತ್ತು ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದ‌ರೂ, ಇದೂವರೆಗೂ ಕ್ರಮ ಕೈಗೊಂಡಿಲ್ಲ ಎಂದು ಸದಸ್ಯರಾದ ಬಲ್ಲಾರಂಡ ಮಣಿಉತ್ತಪ್ಪ ಹಾಗೂ ಉಪಾಧ್ಯಕ್ಷ ಎಂ.ಬಿ.ಅಭಿಮನ್ಯುಕುಮಾರ್‌ ಹೇಳಿದರು. ಈ ಪುಸ್ತಕ ವಿತರಣೆಯ ಹಿಂದೆ ಇರುವವರ ಮತ್ತು ಪುಸ್ತಕದ ಮೂಲವನ್ನು ಕಂಡು ಹಿಡಿದು, ಅಂತಹವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಸಭೆ ನಿರ್ಣಯಿಸಿತು.

ತೋಟಗಾರಿಕಾ ಇಲಾಖೆಗೆ ಒಳಪಡುವ ಬಳಗುಂದ ಸಸ್ಯ ಕ್ಷೇತ್ರದಲ್ಲಿ ಸುಮಾರು 3 ಸಾವಿರ ಕಾಳು ಮೆಣಸಿನ ಗಿಡಗಳನ್ನು ಅಲ್ಲಿನ ಸಿಬ್ಬಂದಿಯೋರ್ವರು ಶಾಸಕರ ಆಪ್ತ ಸಹಾಯಕರು ದೂರವಾಣಿ ಕರೆ ಮಾಡಿದ ಹಿನ್ನೆಲೆಯಲ್ಲಿ ದೊಡ್ಡಮಳೆ¤ಯ ಪ್ರಗತಿಪರ ಕೃಷಿಕರೋರ್ವರಿಗೆ ಉಚಿತವಾಗಿ ನೀಡಿದ್ದಾರೆ ಎಂದು ಸದಸ್ಯರಾದ ಬಿ.ಬಿ. ಸತೀಶ್‌ ಆರೋಪಿಸಿದರು. ಇದರ ಬಗ್ಗೆ ಸೂಕ್ತ ತನಿಖೆಕೈಗೊಂಡು ಕ್ರಮಕ್ಕೆ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಉಪಾಧ್ಯಕ್ಷ ಅಭಿಮನ್ಯುಕುಮಾರ್‌, ಸಿಬ್ಬಂದಿಯ ಮೇಲೆ ಸೂಕ್ತ ಕ್ರಮ ಗೈಗೊಳ್ಳುವುದರೊಂದಿಗೆ, ಸಂಬಂಧಿಸಿದ ನಷ್ಟವನ್ನು ಆತನಿಂದಲೇ ಭರಿಸುವಂತೆ ತೀರ್ಮಾನಿಸಲಾಯಿತು.

ತಾಲೂಕಿನ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಕೊರತೆ ಇದ್ದು, ತಜ್ಞ ವೈದ್ಯರನ್ನು ಉಳಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಆದರೆ, ಕೆಲವರು ರಾಜಿನಾಮೆ ನೀಡಿ, ತೆರಳುತ್ತಿದ್ದಾರೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಶ್ರೀನಿವಾಸ್‌ ಸಭೆಗೆ ತಿಳಿಸಿದರು. ಸುಂಟಿಕೊಪ್ಪದಲ್ಲಿ ಆರೋಗ್ಯ ರûಾ ಸಮಿತಿಯ ಸಭೆ ಇದುವರೆಗೂ ಕರೆದಿಲ್ಲ ಎಂದು ಸದಸ್ಯೆ ವಿಮಲಾವತಿ ಆರೋಪಿಸಿದರು. ಮಾದಾಪುರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರೋರ್ವರು ಜನಪ್ರತಿನಿಧಿಗಳಿಗೆ ಮಾತ್ರವಲ್ಲದೆ, ರೋಗಿಗಳಿಗೂ ಜಾತಿ ನಿಂದನೆ ದೂರು ದಾಖಲಿಸುತ್ತಿದ್ದಾರೆ ಎಂದು ಉಪಾಧ್ಯಕ್ಷ ಎಂ.ಬಿ.ಅಭಿಮನ್ಯುಕುಮಾರ್‌ ಆರೋಪಿಸಿದರು. ಕೂಡಲೇ ಅವರ ವಿರುದ್ಧ ಆರೋಗ್ಯ ಇಲಾಖೆಯ ಕಾರ್ಯದರ್ಶಿಗಳಿಗೆ ದೂರು ನೀಡುವಂತೆ ತಿಳಿಸಿದರು.

Advertisement

ತಾಲೂಕಿನ ಕೆಲವು ನ್ಯಾಯಬೆಲೆ ಅಂಗಡಿಗಳಲ್ಲಿ 600ಕ್ಕೂ ಅಧಿಕ ಕಾರ್ಡುದಾರರು ಇದ್ದಾರೆ. ಆಹಾರ ಇಲಾಖೆಯ ವತಿಯಿಂದ ಕೇವಲ 90 ಲೀಟರ್‌ ಸೀಮೆಎಣ್ಣೆಯನ್ನು ನೀಡಿದ್ದಾರೆ. ಇದನ್ನು ಎಷ್ಟು ಪ್ರಮಾಣದಲ್ಲಿ ವಿತರಿಸಬೇಕೆಂದು ಅಧಿಕಾರಿಗಳೇ ತಿಳಿಸಬೇಕೆಂದು ಸದಸ್ಯರು ಆಗ್ರಹಿಸಿದರು. ಇಲ್ಲಿನ ಸರಕಾರಿ ಹೋಮಿಯೋಪತಿ ಆ ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷೆ ಎಚ್‌.ಎನ್‌. ತಂಗಮ್ಮ, ಕಾರ್ಯನಿರ್ವಹಣಾಧಿಕಾರಿ ಸುನೀಲ್‌ಕುಮಾರ್‌, ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next