Advertisement

ಐವರು ಸಮಾಜಘಾತುಕರಿಗೆ ಬೆಳಗಾವಿಯಿಂದ ಗಡಿಪಾರು ಮಾಡಿದ ಡಿಸಿಪಿ ಗಡಾದಿ

08:50 PM Dec 08, 2022 | |

ಬೆಳಗಾವಿ: ನಗರದಲ್ಲಿ ಮಟ್ಕಾ, ಜೂಜಾಟ, ಅಕ್ರಮ ಸಾರಾಯಿ ಮಾರಾಟ ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಐವರನ್ನು ಜಿಲ್ಲೆಯಿಂದ ಗುರುವಾರದಿಂದ ಗಡಿಪಾರು ಮಾಡುವ ಮೂಲಕ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ರವೀಂದ್ರ ಗಡಾದಿ ಅವರು ಸಮಾಜಘಾತುಕರಿಗೆ ಎಚ್ಚರಿಕೆ ನೀಡಿದ್ದಾರೆ.

Advertisement

ಮಾರ್ಕೆಟ್ ಪೊಲೀಸ್ ಠಾಣೆ ವ್ಯಾಪ್ತಿಯ ನಗರದ ಖಂಜರ ಗಲ್ಲಿಯ ಮಹ್ಮದಶಫಿ ಮೋದಿನಸಾಬ ತಹಶೀಲ್ದಾರ(68), ಇಜಾರಹ್ಮದ ಮಹ್ಮದ ಇಸಾಕ ನೇಸರಿಕರ(48), ಮಾಳಮಾರುತಿ ಠಾಣೆ ವ್ಯಾಪ್ತಿಯ ಗ್ಯಾಂಗವಾಡಿಯ ಜಯಪಾಲ ಲೋಂಡೆ(36), ಕಣಬರ್ಗಿ ಪಾಟೀಲ ಗಲ್ಲಿಯ ಬೈರಗೌಡ ಜ್ಯೋತಿಬಾ ಪಾಟೀಲ(45) ಹಾಗೂ ಶಹಾಪುರ ಠಾಣೆ ವ್ಯಾಪ್ತಿಯ ಶಹಾಪುರ ಖಡೇಬಜಾರದ ನಿತಿನ್ ಪಾಂಡುರಂಗ ಪೇಡ್ನೇಕರ(50) ಎಂಬಾತರನ್ನು ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ.

ಹಲವಾರು ವರ್ಷಗಳಿಂದ ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗಿದ್ದರಿಂದ ವಿವಿಧ ಠಾಣೆಗಳಲ್ಲಿ ಇವರ ವಿರುದ್ಧ ದೂರು ದಾಖಲಾಗಿದ್ದವು. ಈ ಐವರ ವಿರುದ್ಧ ಮಾರ್ಕೆಟ್ ಎಸಿಪಿ ಎನ್.ವಿ. ಭರಮನಿ ಅವರ ಶಿಫಾರಸ್ಸಿನಂತೆ ಡಿಸಿಪಿ ಗಡಾದಿ ಮಾಡಿದ್ದಾರೆ.

ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಮಟ್ಕಾ,ಜೂಜಾಟ, ಗಾಂಜಾ, ಅಕ್ರಮ ಸಾರಾಯಿ ಮಾರಾಟದಲ್ಲಿ ತೊಡಗಿದವರ ಬಗ್ಗೆ ಸಾರ್ವಜನಿಕರು ನಿರ್ಭಯವಾಗಿ ಮಾಹಿತಿ ನೀಡಬೇಕು.ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಪಿ ಗಡಾದಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next